ಈ ಪುಟವನ್ನು ಪ್ರಕಟಿಸಲಾಗಿದೆ

೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ದೇವರಲ್ಲಿ ಈ ಸಾಮರ್ಥ್ಯವು ಜನ್ಮಜಾತವಾಗಿರುತ್ತದೆ. ಹೀಗಿದ್ದರೂ ಮಾನವ ರಂತೆಯೇ ಅವರಿಗೂ ತಪಸ್ಸಾಮರ್ಥ್ಯ ಇರಬೇಕಾಗುತ್ತದೆ. ತಪಸ್ಸಿನ ಪ್ರಭಾವದಿಂದ ಶಾಪ-ವರಗಳನ್ನು ಕೊಡುವ ಸಾಮರ್ಥ್ಯವುಂಟಾಗುವುದು. ದೇವ, ದಾನವ ಮತ್ತು ಮಾನವ ಈ ಎಲ್ಲರಿಗೂ ತಪಶ್ಚರ್ಯೆ ಆವಶ್ಯಕವಿದೆ. ರಾಕ್ಷಸರು ಘೋರ ತಪಶ್ಚರ್ಯೆಗಳನ್ನು ಮಾಡಿ ವರಗಳನ್ನು ಪಡೆದ ಉದಾಹರಣೆಗಳಿವೆ; ಆದರೆ ಅವರು ಇತರರಿಗೆ ಶಾಪ-ವರಗಳನ್ನು ಕೊಟ್ಟ ದಾಖಲೆ, ರಾಮಾಯಣದಲ್ಲಿ ಒಂದು ಸಹ ಇಲ್ಲ. 'ಹರಿವಂಶ' ಎಂಬ ಗ್ರಂಥದಲ್ಲಿ ಹಿರಣ್ಯಕಶ್ಯಪನು ಮಾರೀಚ ಋಷಿಯ ಮಕ್ಕಳನ್ನು ಶಪಿಸಿದ ಉಲ್ಲೇಖವಿದೆ. 'ರಾಕ್ಷಸರಲ್ಲಿ ಶಾಪ ಕೊಡುವ ಯೋಗ್ಯತೆ ಇರಬಹುದು' ಎಂಬುದನ್ನು ನಿಖರಗೊಳಿಸುವ ಎರಡು ಉದಾಹರಣೆಗಳು ರಾಮಾಯಣದಲ್ಲಿವೆ. ರಾಕ್ಷಸರು ನಿಜದಲ್ಲಿ ಶಾಪ ಕೊಟ್ಟ ಉಲ್ಲೇಖವಿಲ್ಲ. ಬ್ರಾಹ್ಮಣ ವೇಷದಲ್ಲಿ ಅತಿಥಿಯಾಗಿ ಬಂದ ರಾವಣನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೆ ಆತನು ಶಾಪ ಕೊಡಬಹುದೆಂಬ ಭಯ ಸೀತೆಗೆ ಉಂಟಾಗಿತ್ತು. ಅವಳು ಸರಿಯಾಗಿ ಉತ್ತರಿಸಿದ ಕಾರಣ ಆ ಪ್ರಸಂಗ ಉದ್ಭವಿಸಲಿಲ್ಲ. ರಾವಣನ ದೂತನಾಗಿ ಬಂದ 'ಶುಕ'ನೆಂಬ ರಾಕ್ಷಸನು 'ತನ್ನ ಪ್ರಾಣಕ್ಕೆ ಅಪಾಯವಿದೆ' ಎಂದು ಕಂಡುಕೊಂಡಾಗ “ನಾನು ಮಾಡಿದ ಸಮಸ್ತ ಪಾಪಕರ್ಮಗಳು ರಾಮನಿಗೆ ಅಂಟಲಿ!” ಎಂದು ನುಡಿದನು. ಆಗ ರಾಮನು ಆತನನ್ನು ಜೀವಿತವಾಗಿ ಬಿಟ್ಟು ಅಭಯವನ್ನು ಕೊಟ್ಟು ಆತನ ಶಾಪವಾಣಿಯನ್ನು ನಿಷ್ಪ್ರಭಗೊಳಿಸಿದನು. ಕುಬೇರನ ಪುಷ್ಪಕ ವಿಮಾನವನ್ನು ಅಪಹರಿಸಿದ್ದಕ್ಕಾಗಿ ರಾವಣನನ್ನು ಸಾಪಸಮವಾದ ನುಡಿಗಳಲ್ಲಿ ನಿಂದಿಸಿದರೂ ಅದು ಕೊಟ್ಟ ಶಾಪವಾಗಲಿಲ್ಲ; ಆದ್ದರಿಂದ ಅದರ ಚರ್ಚೆ ಇಲ್ಲಿ ಬೇಡ. ಕುಬೇರ ರಾವಣನ ಮಲತಾಯಿಯ ಮಗನಾಗಿದ್ದರೂ ಆತನು ರಾಕ್ಷಸನಿರಲಿಲ್ಲ. ಕುಬೇರನು ಲೋಕಪಾಲನಿದ್ದುದರಿಂದ ಆತನಲ್ಲಿ ವಿಶೇಷ ಅರ್ಹತೆ ಇತ್ತು. 'ಕೃಕಲಾಸ' ಎಂಬ ಒಂದು ಜಾತಿಯ ಓತೀಕೇತಕ್ಕೆ ಹಾಗೂ ಹನುಮಾನನಿಗೆ ವರಗಳನ್ನು ದಯಪಾಲಿಸಿದ್ದಾನೆ; ತುಂಬುರು ಗಂಧರ್ವನಿಗೆ ಶಾಪ ಕೊಟ್ಟಿದ್ದಾನೆ.

ದೇವತೆಗಳು ಮತ್ತು ಮಾನವರು ಶಾಪ-ವರಗಳನ್ನು ಕೊಡುವ ಅರ್ಹತೆಯನ್ನು ಹೊಂದಿದ್ದರು. ದೇವರು ವರಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ; ಆದರೆ ಮಾನವರು ಶಾಪಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ. ರಾಕ್ಷಸರು ಶಾಪ ಇಲ್ಲವೇ ವರಗಳನ್ನು ನೀಡಿದ ದಾಖಲೆ ಎಲ್ಲಿಯೂ ಬಂದಿಲ್ಲ. ಹೀಗಿರುವುದರಿಂದ ಸತ್ತ್ವ, ರಜ ಮತ್ತು ತಮ ಈ ಗುಣಗಳನ್ನಾಧರಿಸಿ ಶಾಪ ಮತ್ತು ವರಗಳನ್ನು