ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ಆಗ ಇವಳು ಕೇಸರಿ ಎಂಬ ವಾನರನ ಪತ್ನಿಯಾದಳು. ವಾನರಜನ್ಮವನ್ನು ತಾಳಿದ್ದರೂ ಉಃಶಾಪದಿಂದ ಇವಳು ಇಷ್ಟವಿದ್ದಾಗ ಮನುಷ್ಯರೂಪವನ್ನು ತಾಳುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಳು. ಇವಳ ರೂಪಕ್ಕೆ ವಾಯುವು ಮೋಹಗೊಂಡನು. ಇವಳನ್ನು ಆಲಿಂಗಿಸಿ, ಮಾನಸಿಕವಾಗಿ ಸಮಾಗಮವನ್ನು ಸಾಧಿಸಿದನು. ವಾಯುವು ಪುಂಜಿಕಸ್ಥಲೆಗೆ ಭಯ ಪಡುವ ಕಾರಣವಲ್ಲವೆಂದು ಆಶ್ವಾಸನೆಯನ್ನಿತ್ತು, 'ನಿನಗೆ ಒಬ್ಬ ಬುದ್ದಿವಂತ ಧೀಮಂತ ಮಗನು ಹುಟ್ಟುವನು' ಎಂದು ಹೇಳಿದನು. ಈ ಪುತ್ರನೇ ಹನುಮಾನನು. ೭೪, ಪುರೂರವ

  • ಈತನು ಬಂಧ ಮತ್ತು ಇಲೆ ಇವರ ಮಗನಾಗಿದ್ದನು. ಇವನು

ಸೋಮವಂಶದ ಮೂಲಪುರುಷ, ಮತ್ಯಪುರಾಣದ ಪ್ರಕಾರ ಪ್ರತಿಷ್ಠಾನಪುರಿಯು ಈತನ ರಾಜಧಾನಿಯಾಗಿತ್ತು. ಇವನು ನೂರು ಅಶ್ವಮೇಧಯಜ್ಞಗಳನ್ನು ಆಚರಿಸಿದ್ದನು. ಮಿತ್ರ-ವರುಣರ ಶಾಪ ತಗುಲಿ ಉರ್ವಶಿಯು ಪೃಥ್ವಿಗೆ ಬಂದಳು. ಪುರುವು ಈಕೆಯನ್ನು ಕೇಶಿರಾಕ್ಷಸನ ಕೈಯಿಂದ ಬಿಡಿಸಿದನು. ಇವಳು ಪುರೂರವನ ಗುಣಗಳನ್ನು ಮೆಚ್ಚಿದಳು. ಊರ್ವಶಿಯ ಸೌಂದರ್ಯಕ್ಕೆ ಮೋಹಾಸಕ್ತನಾದ ಪುರುವು ಆಕೆಗೆ ಮದುವೆಯ ಪ್ರಸ್ತಾಪವನ್ನಿಟ್ಟನು. ಆಗ ಉರ್ವಶಿಯು ಆತನಿಗೆ ಮೂರು ಶರತ್ತುಗಳನ್ನು ಹಾಕಿದಳು. 'ಈ ಶರತ್ತುಗಳ ಪಾಲನೆಯಾಗುವವರೆಗೆ ಮಾತ್ರ ನಾನು ನಿನ್ನ ಪತ್ನಿಯಾಗಿ ಉಳಿಯುವೆ' ಎಂದು ಮಾತು ಕೊಟ್ಟಳು. ಪುರುವಿನಿಂದ ಒಂದು ಶರತ್ತಿನ ಭಂಗವಾಯಿತು. ಆಗ ಇವಳು ಪುರುವನ್ನು ಬಿಟ್ಟು ಹೊರಟುಹೋದಳು. ಇವಳಿಂದ ಪುರುವು ಆರು ಪುತ್ರರನ್ನು ಪಡೆದನು. ಒಮ್ಮೆ ಧರ್ಮ, ಅರ್ಥ, ಕಾಮ, ಇವು ಮನುಷ್ಯರೂಪವನ್ನು ತಾಳಿ ಈತನನ್ನು ಪರೀಕ್ಷಿಸಲು ಬಂದಾಗ ಪುರುವು ಧರ್ಮಕ್ಕೆ ಪ್ರಾಧಾನ್ಯವನ್ನು ಕೊಟ್ಟ ಕಾರಣ, ಅರ್ಥ ಮತ್ತು ಕಾಮ ಲೋಭದಿಂದ ನಿನ್ನ ನಾಶವಾಗುವದು!” ಎಂಬ ಶಾಪವನ್ನು ಕೊಟ್ಟರು. ತುಂಬುರು ಪುರೂರವನನ್ನು ಶಪಿಸಿದ ಉಲ್ಲೇಖವು ಸ್ಕಂದಪುರಾಣ ದಲ್ಲಿದೆ. ಪುರೂರವನು ಕ್ಷತ್ರಿಯನಾಗಿದ್ದರೂ ಮಂತ್ರಕಾರನಾಗಿದ್ದನು. ಚಾತುರ್ವಣ್ಯದ ಬಗ್ಗೆ ಈತನು ಕಶ್ಯಪ ಹಾಗೂ ವಾಯುವಿನೊಡನೆ ವಾದವಿವಾದವನ್ನು ಮಾಡಿದನು. ವ್ಯಕ್ತಿವಿಶೇಷ ಕ್ರಮಸಂಖ್ಯೆ ೧೭ ನೋಡಿರಿ.