ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೩೫


ತಾಟಕಿಯ ವಧೆಯ ಕಾಲದಲ್ಲಿ 'ವಿಶಿಷ್ಟ ಪ್ರಸಂಗದಲ್ಲಿ ಸ್ತ್ರೀವಧೆ ದೋಷಾ
ಸ್ಪದವಲ್ಲ' ಎಂಬುದನ್ನು ಸ್ಪಷ್ಟಪಡಿಸಲು ವಿಶ್ವಾಮಿತ್ರನು ರಾಮನಿಗೆ ಈ ಮೇಲಿನ
ಕಥೆಯನ್ನು ಉದಾಹರಿಸಿದ್ದಾನೆ. ಭೃಗುವು ವಿಷ್ಣುವಿಗೆ ಶಾಪ ಕೊಟ್ಟ ಇನ್ನೊಂದು
ಕಥೆಯು ಪದ್ಮಪುರಾಣದ ಭೂಮಿಖಂಡದಲ್ಲಿದೆ. ಭೃಗುವಿನ ಯಜ್ಞವನ್ನು
ರಕ್ಷಿಸುವೆನೆಂದು ವಿಷ್ಣುವು ಆಶ್ವಾಸನೆಯನ್ನು ಕೊಟ್ಟಿದ್ದನು; ಆದರೆ ಇಂದ್ರನಿಂದ
ಕರೆಬಂದ ಕಾರಣ ವಿಷ್ಣುವು ತನ್ನ ಮಾತಿನಂತೆ ನಡೆಯದೆ ಇಂದ್ರನತ್ತ
ಹೊರಟುಹೋದನು. ವಿಷ್ನುವು ಇರದೇ ಇದ್ದುದನ್ನು ಲಕ್ಷಿಸಿ ದೈತ್ಯರು ಭೃಗುವಿನ
ಯಜ್ಞವನ್ನು ಹಾಳುಮಾಡಿದರು. ಆಗ 'ಭೂಲೋಕದಲ್ಲಿ ಹತ್ತು ಬಾರಿ ಜನ್ಮ
ತಾಳುವೆ!' ಎಂಬ ಶಾಪವನ್ನು ಭೃಗುವು ವಿಷ್ಣುವಿಗೆ ಕೊಟ್ಟನು. ಬ್ರಹ್ಮ, ವಿಷ್ಣು,
ಮಹೇಶ್ವರ ಈ ಮೂವರಲ್ಲಿ ಯಾರು ಶ್ರೇಷ್ಠರು?- ಎಂಬುದನ್ನು ತೀರ್ಮಾನಿಸುವ
ಸಂದರ್ಭವು ಭೃಗುವಿಗೆ ಬಂದಿತು. ಆಗ ಭೃಗುವು ನಿದ್ರಿಸುತ್ತಿದ್ದ ವಿಷ್ಣುವಿನ
ಎದೆಗೆ ಒದ್ದುಬಿಟ್ಟನು. ಆಗಲೂ ವಿಷ್ಣುವು ಕೋಪಗೊಳ್ಳಲಿಲ್ಲ. ಆಗ ಭೃಗುವಿಗೆ
ವಿಷ್ಣುವಿನ ಹಿರಿಮೆ ಅರ್ಥವಾಯಿತು. ಭೃಗುವಿನ ಒದೆಯ ಕಾರಣದಿಂದ ವಿಷ್ಣುವಿನ
ಎದೆಯ ಮೇಲೆ ಉಂಟಾದ ಕಲೆಯನ್ನು ವಿಷ್ಣುವು ತನ್ನ ವಕ್ಷಃಸ್ಥಲದ ಮೇಲೆ
'ಶ್ರೀವತ್ಸಲಾಂಛನ' ಎಂದು ಧರಿಸಿದನು.
ಭೃಗುವಿಗೆ ದಿವ್ಯಾ ಮತ್ತು ಪುಲೋಮ ಎಂಬ ಇಬ್ಬರು ಹೆಂಡತಿಯರಿದ್ದರು.
ದಿವ್ಯಳಿಂದ ಶುಕ್ರ ಮತ್ತು ಇತರ ಹನ್ನೆರಡು ಪುತ್ರರಾದರು. ಪುಲೋಮೆಯ
ಮಗನ ಹೆಸರು ಚ್ಯವನನೆಂದಿದೆ. ಭೃಗುವು ಭೃಗುಸ್ಮ್ರತಿ, ಭೃಗುಗೀತಾ, ಭೃಗುಸೂತ್ರ
ಮುಂತಾದ ಗ್ರಂಥಗಳನ್ನು ಬರೆದಿದ್ದಾನೆ. ವಾಸ್ತುಶಿಲ್ಪಶಾಸ್ತ್ರದ ಬಗ್ಗೆಯೂ ಇವನು
ಗ್ರಂಥವನ್ನು ಬರೆದಿದ್ದಾನೆ.
ಇಕ್ಷ್ವಾಕುಕುಲದ ಪುರೋಹಿತನಾದ ವಸಿಷ್ಠನ ತರುವಾಯ ನಿಮಿರಾಜನು
ಅತ್ರಿ ಮತ್ತು ಅಂಗೀರಸದಂತೆ ಭೃಗುವನ್ನೂ ಋತ್ವಿಜನನ್ನಾಗಿ ಮಾಡಿದನು.

೮೮. ಮತಂಗ

ಋಷ್ಯಮೂಕಪರ್ವದ ಸಮೀಪದಲ್ಲಿ ಪಂಪಾನದಿಯ ಪಶ್ಚಿಮತೀರದಲ್ಲಿ
ಒಂದು ಕಾಡಿತ್ತು. ಅದು ಮತಂಗವನವೆಂದು ಗುರುತಿಸಲ್ಪಡುತ್ತಿತ್ತು. ಮತಂಗ
ಮುನಿಯ ಶಾಪದಿಂದ ವಾಲಿಯು ಇಲ್ಲಿ ಪ್ರವೇಶಿಸುವುದು ಸಾಧ್ಯವಿರಲಿಲ್ಲವಾದ್ದರಿಂದ
ಸುಗ್ರೀವನು ಇಲ್ಲಿ ನಿರ್ಭಯನಾಗಿರುತ್ತಿದ್ದನು. ಮತಂಗಋಷಿಯ ಶಿಷ್ಯರು ಕಟ್ಟಿಗೆಯ
ಹೊರೆಗಳನ್ನು ತರಲು ಹೋದಾಗ ಅವರ ಮೈಬೆವರಿನ ಹನಿಗಳು ಬಿದ್ದ ಸ್ಥಳದಲ್ಲಿ