ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ರಂಭೆಯು ತುಂಬರುವಿನ ಸ್ತ್ರೀಯಾಗಿದ್ದಳು. ಇವಳೊಡನೆ ಸಂಬಂಧವನ್ನಿಟ್ಟು ಕೊಂಡ ಕಾರಣ ಈತನಿಗೆ ಶಾಪ ತಗುಲಿ ವಿರಾಧ ರಾಕ್ಷಸನಾದನೆಂಬ ಕಥೆಯಿದೆ. ಹೀಗಾಗಿರುವದರಿಂದ ತುಂಬರು ರಂಭೆಯ ಪತಿಯಾಗಿರಲಿಲ್ಲವೆಂದು ತಿಳಿದು ಬರುತ್ತದೆ. ೧೦೯. ಶ್ರೀರಾಮ ಅಯೋಧ್ಯೆಯ ರಾಜನಾದ ದಶರಥನು ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಿದಾಗ ಯಜ್ಞಪುರುಷನು ಪಾಯಸವನ್ನು ಕರುಣಿಸಿದನು. ಈ ಪಾಯಸವನ್ನು ಸೇವಿಸಿದ ನಂತರ ದಶರಥನ ಮೂವರು ರಾಣಿಯರಿಗೆ ನಾಲ್ಕು ಪುತ್ರರಾದರು. ಅವರಲ್ಲಿ ಕೌಸಲ್ಯಗೆ ಹುಟ್ಟಿದ ರಾಮನು ಹಿರಿಯವನಾಗಿದ್ದನು. ರಾಮನಿಗೆ ವಿಷ್ಣುವಿನ ಅವತಾರವೆಂದೆನ್ನುತ್ತಾರೆ. ಬ್ರಹ್ಮದೇವನು ರಾವಣನಿಗೆ ಒಂದು ಮರ್ಯಾದಿತ ಸಂದರ್ಭದಲ್ಲಿ ವಧೆಯಾಗಲಾರದೆಂಬ ವರವನ್ನು ಕೊಟ್ಟಿದ್ದನು. ಅದರಲ್ಲಿ ಮಾನವರ ಉಲ್ಲೇಖವಿರಲಿಲ್ಲ; ಆದ್ದರಿಂದ ದೇವತೆಗಳ ವಿನಂತಿ ಯನುಸಾರ ವಿಷ್ಣುವು ರಾಮಾವತಾರವನ್ನು ತಾಳಿದನು. ರಾಜಪುರೋಹಿತನಾದ ವಸಿಷ್ಠನಿಂದ ಶಸ್ತ್ರ-ಶಾಸ್ತಾಭ್ಯಾಸಗಳನ್ನು ರಾಮನು ಕಲಿತುಕೊಂಡನು. ವಿಶ್ವಾಮಿತ್ರನು ತನ್ನ ಯಜ್ಞವನ್ನು ರಕ್ಷಿಸಲು ರಾಮನನ್ನು ಕಳಿಹಿಸಬೇಕೆಂದು ದಶರಥನಿಗೆ ಬೇಡಿಕೊಂಡನು. ರಾಮನು ವಿಶ್ವಾಮಿತ್ರನಿಂದ ಅನೇಕ ವಿದ್ಯೆಗಳನ್ನು, ಅಸ್ತಗಳನ್ನು ಕಥೆಗಳನ್ನು ಅರಿತುಕೊಂಡನು. ತಾಟಕಾ ಮತ್ತು ಸುಬಾಹು ಇವರನ್ನು ವಧಿಸಿದನು; ಮಾರೀಚನನ್ನು ದೂರಕ್ಕೆ ಹಾರಿಸಿದನು. ರಾಮನು ಮಿಥಿಲೆಯ ಜನಕರಾಜನಲ್ಲಿದ್ದ ಶಿವಧನುರ್ಭಂಗವನ್ನು ಮಾಡಿ, ಜನಕಕನೆಯಾದ ಜಾನಕಿಯನ್ನು ಮದುವೆಯಾದನು. ರಾಮನ ಯೌವರಾಜ್ಯಾಭಿಷೇಕವು ನಿಶ್ಚಿತವಾದಾಗ, ಕೈಕೇಯಿ ದಶರಥನಿಂದ ಮೊದಲಿನ ಎರಡು ವರಗಳನ್ನು ಬೇಡಿಕೊಂಡಳು. ಆ ಪ್ರಕಾರ ರಾಮನಿಗೆ ಹದಿನಾಲ್ಕು ವರ್ಷ ವನವಾಸವಾಯಿತು. ರಾಮನೊಡನೆ ಲಕ್ಷಣ ಮತ್ತು ಸೀತೆ ಇವರೂ ವನವಾಸಕ್ಕೆ ಹೋದರು. ಕೂಡಲೇ ಪುತ್ರವಿಯೋಗದಿಂದ ದಶರಥ ಮರಣಹೊಂದಿದನು. ರಾಮನನ್ನು ವನವಾಸಕ್ಕೆ ಕಳುಹಿದಾಗ ಭರತನು ಅಯೋಧ್ಯಂನಲ್ಲಿರಲಿಲ್ಲ. ಆತನು ಅಯೋಧ್ಯೆಗೆ ಬಂದಾಗ ನಡೆದ ಸಮಾಚಾರವನ್ನರಿತು ದುಃಖಿತನಾದನು. ತನ್ನ ತಾಯಿಯ ಹಟದಿಂದ ಇಷ್ಟೆಲ್ಲ ನಡೆಯಿತೆಂದು ಅವಳನ್ನು ಬಿರುನುಡಿಯಿಂದ ಜರೆದನು. ರಾಮನನ್ನು ಮರಳಿ ಅಯೋಧ್ಯೆಗೆ ಕರೆದು ತರುವ ಭರತನ ಪ್ರಯತ್ನ ವಿಫಲಗೊಂಡಿತು. ರಾಮನ