ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೬೯


ಒಪ್ಪಲಿಲ್ಲ. ಆಗ ಆತನು ಶುನಃಶೇಪನಿಗೆ ಎರಡು ಮಂತ್ರಗಳನ್ನು ಹೇಳಿಕೊಂಡು
ಅತನ ಪ್ರಾಣವನ್ನುಳಿಸಿದನು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ಇಂದ್ರನು
ರಂಭೆಯನ್ನು ಕಳುಹಿದ್ದಾಗ ವಿಶ್ವಾಮಿತ್ರನು ರಂಭೆಗೆ ಶಾಪ ಕೊಟ್ಟನು.
ಮಾರೀಚ ಹಾಗು ಸುಬಾಹು ಎಂಬ ಇಬ್ಬರು ರಾಕ್ಷಸರು ಇವನ ತಪಸ್ಸಿನಲ್ಲಿ
ವಿಘ್ನಗಳನ್ನುಂಟುಮಾಡುತ್ತಿದ್ದರು. ತಪದ ಲೋಪವಾಗಬಾರದೆಂದು ವಿಶ್ವಾಮಿತ್ರನು
ಅವರಿಗೆ ಶಾಪವನ್ನು ಕೊಡಲಿಲ್ಲ. ಅವರನ್ನು ದಂಡಿಸಲೆಂದು ದಶರಥನ ಬಳಿ
ಹೋಗಿ ರಾಮನನ್ನು ಕರೆತಂದನು. ದಶರಥ ಮೊದಲು ಸಮ್ಮತಿಸಿದ್ದರೂ ರಾಮನನ್ನು
ಕಳುಹಲು ಹಿಂದುಮುಂದು ನೋಡಹತ್ತಿದನು. ಆಗ ವಸಿಷ್ಠನು ದಶರಥನಿಗೆ
ಸಲಹೆಯನ್ನು ಕೊಟ್ಟ ಕಾರಣ ವಿಶ್ವಾಮಿತ್ರನೊಡನೆ ರಾಮನು ಹೋಗಲು
ಅನುಕೂಲವಾಯಿತು. ವಿಶ್ವಾಮಿತ್ರ ಮಾರ್ಗದಲ್ಲಿ ರಾಮನಿಗೆ ಅನೇಕ ಕಥೆಗಳನ್ನು
ಹೇಳಿದನು. ರಾಮಲಕ್ಷ್ಮಣರ ಪರಾಕ್ರಮದಿಂದ ಮತ್ತು ತಾಟಕಿಯನ್ನು ವಧಿಸಿದ್ದರಿಂದ
ಆತನು ಪ್ರಸನ್ನನಾಗಿ ರಾಮನಿಗೆ ಬಲಾ ಮತ್ತು ಅತಿಬಲಾ ಎಂಬ ವಿದ್ಯೆಗಳನ್ನು
ಮತ್ತು ಅನೇಕ ಪ್ರಭಾವಪೂರ್ಣ ಅಸ್ತ್ರಗಳನ್ನು ಕೊಟ್ಟನು. ರಾಮಲಕ್ಷ್ಮಣರನ್ನು
ಜನಕ ರಾಜನಲ್ಲಿ ನಡೆಯುತ್ತಿದ್ದ ಯಜ್ಞಕ್ಕಾಗಿ ಮಿಥಿಲೆಗೆ ಕರೆದೊಯ್ದನು. ಜನಕನ
ಪುರೋಹಿತನಾದ ಶತಾನಂದನು ವಿಶ್ವಾಮಿತ್ರನಂತಹ ಪಾಲಕನು ದೊರೆತದ್ದಕ್ಕಾಗಿ
ರಾಮನನ್ನು ಅಭಿನಂದಿಸಿದನು. ರಾಮಲಕ್ಷ್ಮಣರ ವಿವಾಹಗಳನ್ನು ಏರ್ಪಡಿಸು
ವದರಲ್ಲಿ ಈತನ ಪಾತ್ರ ಪ್ರಮುಖವಾಗಿದೆ.
ವಿಶ್ವಮಿತ್ರನ ಸಿದ್ಧಾಶ್ರಮವು ತಾಟಕಾವನದ ಸಮೀಪದಲ್ಲಿತ್ತು. ಈತನಿಗೆ ನೂರು
ಜನ ಮಕ್ಕಳಿದ್ದರು. ಅವರಲ್ಲಿ ಮಧುಚ್ಛಂದನು ಮದ್ಯದವನಾಗಿದ್ದನು. ಋಗ್ವೇದದ
ಮೂರನೆಯ ಮಂಡಲವನ್ನು ಈತನು ಮತ್ತು ಈತನ ವಂಶಜರು ರಚಿಸಿದ್ದಾರೆ.
ಅದಕ್ಕೆ 'ಕುಶಿಕ'ವೆಂದೆನ್ನುತ್ತಾರೆ.

೧೨೬. ವಿಶ್ವಾಮಿತ್ರನ ಪುತ್ರರು

ವಿಶ್ವಾಮಿತ್ರನ ಪುತ್ರರ ಸಂಖ್ಯೆ ಬೇರೆ ಬೇರೆ ಗ್ರಂಥಗಳಲ್ಲಿ ಬೇರೆ ಬೇರೆ ಇದ್ದ
ಬಗ್ಗೆ ಬರೆದಿದ್ದಾರೆ. ಅವನಿಗೆ ಒಂದುನೂರ ಒಂದು ಮಕ್ಕಳಿದ್ದರು. ಅವರಲ್ಲಿ
ಮಧುಚ್ಛಂದನು ಮಧ್ಯದವನು. ಇವನು ಶುಃಶೇಪನನ್ನು ಹರಿಶ್ಚಂದ್ರನ ಯಜ್ಞದಿಂದ
ಬಿಡುಗಡೆ ಮಾಡಿದನು. ಆತನಿಗೆ ದೇವತಾರನೆಂಬ ಹೊಸ ಹೆಸರನ್ನಿಟ್ಟನು.
ಶುನಃಶೇಪನನ್ನು ತಮ್ಮೆಲ್ಲರ ಅಣ್ಣನೆಂದು ತಿಳಿಯಬೇಕೆಂದು, ವಿಶ್ವಾಮಿತ್ರನು ತನ್ನ
ಮಕ್ಕಳಿಗೆ ಹೇಳಿದನು. ಆಗ ಐವತ್ತು ಜನ ಮಕ್ಕಳು ಆ ಹೇಳಿಕೆಯನ್ನು ಒಪ್ಪಿಕೊಳ್ಳಲಿಲ್ಲ.