ಈ ಪುಟವನ್ನು ಪ್ರಕಟಿಸಲಾಗಿದೆ

೪೮೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ರಾಮನನ್ನು ಗೆಲ್ಲುವದು ದುಸ್ತರ ಕಾರ್ಯವೆಂದು ಈತನು ರಾವಣನಿಗೆ
ಸಾರಿಹೇಳಿದ್ದನು. ಆಗ ರಾವಣನು ಈತನ ಮೇಲೆ ಬಲು ಕೋಪಗೊಂಡನು.


೧೪೪. ಸಾಲಕಟಂಕಟಾ

ಇವಳು ವಿದ್ಯುತ್ಕೇಶನೆಂಬ ರಾಕ್ಷಸನ ಮಡದಿ, ಈಕೆಯ ತಾಯಿಯ ಹೆಸರು
ಸಂಧ್ಯಾ. ವಿದ್ಯುತ್ಕೇಶನಿಂದ ಹೊಂದಿದ ಗರ್ಭವನ್ನು ಇವಳು ತೆಗೆದುಹಾಕಿದಳು.


೧೪೫. ಸೀತಾ

ಸೀತೆಯು ಸೀರಧ್ವಜನಾದ ಜನಕರಾಜನ ಪುತ್ರಿ; ಆದ್ದರಿಂದ ಜಾನಕಿ,
ಹೊಲವನ್ನು ಹುಳುವಾಗ ರೆಂಟೆಯಿಂದ ಭೂಮಿಯ ಹೊರಗೆ ಬಂದಳೆಂದು
ಭೂಮಿಕನ್ಯೆ ಎನಿಸಿದ್ದಾಳೆ. ಅನಂತರ ಸೀತೆ ಎಂದು ಖ್ಯಾತಳಾಗಿದ್ದಾಳೆ. ಇವಳು
ಪೂರ್ವ ಜನ್ಮದಲ್ಲಿ ವೇದವತಿಯಾಗಿದ್ದಳೆಂದು ನಂಬಿಕೆಯಿದೆ. ಇವಳು ಮಂಡೋ
ದರಿಯ ಕನ್ಯೆ ಎಂತಲೂ ಒಂದು ಹೇಳಿಕೆ ಇದೆ. ಯಾರ ಉದರದಿಂದಲೂ
ಜನಿಸಿರಲಿಲ್ಲವೆಂಬ ಅನೇಕ ಕಥೆ, ದಂತಕಥೆ, ತಿಳಿವಳಿಕೆಗಳೂ ಇವೆ. ಇವಳು
ಪ್ರಾಯಕ್ಕೆ ಬಂದನಂತರ ಜನಕರಾಜನು ಶಿವಧನುಸ್ಸಿನ ಪಣವನ್ನು ಒಡ್ಡಿ ಇವಳಿಗೆ
ಯೋಗ್ಯ ವರನನ್ನು ಕಂಡುಹಿಡಿಯಲು ಇಚ್ಛಿಸಿದನು. ಈ ಸ್ವಯಂವರಕ್ಕೆ ಆಗಮಿಸಿದ
ರಾವಣನಿಂದ ಶಿವಧನುಸ್ಸನ್ನು ಎತ್ತುವದಾಗಲಿಲ್ಲ. ರಾಮನು ಅದನ್ನು
ಲೀಲಾಜಾಲವಾಗಿ ಎತ್ತಿ ಭಂಗಿಸಿದನು. ದಶರಥನ ಅನುಮತಿಯಿಂದ ಜನಕರಾಜನು
ಸೀತೆಯ ವಿವಾಹವನ್ನು ರಾಮನೊಡನೆ ಮಾಡಿಕೊಟ್ಟನು. ಸೀತೆಯು
ಬಹುಲಾವಣ್ಯವತಿಯಾಗಿದ್ದಳಲ್ಲದೇ ತುಂಬಾ ಬುದ್ಧಿವಂತೆ, ನಿಷ್ಠಾವಂತೆ, ರಾಮನಲ್ಲಿ
ಅಪಾರಪ್ರೇಮವಿದ್ದವಳಾಗಿ, ಆತನ ಸುಖದುಃಖಗಳಲ್ಲಿ ಸಹಚರಿಯಾಗಿದ್ದಳು.
ರಾಮನಿಗೆ ಯೌವ ರಾಜ್ಯಾಭಿಷೇಕವಾಗಲಿದೆ ಎಂಬುದನ್ನು ಅರಿತ ಅವಳು
ಎಷ್ಟು ಹರ್ಷಪುಲಕಿತಳಾಗಿದ್ದಳೋ ಅಷ್ಟೇ ಸಂತೋಷದಿಂದ ರಾಮನೊಡನೆ
ವನವಾಸಕ್ಕೆ ಹೋಗುವೆನೆಂದು ಪಟ್ಟುಹಿಡಿದಳು. ಪತಿ ಎಂದರೆ ಈಕೆಗೆ
ಪರಮದೈವತ. ಈಕೆಯು ಪತಿನಿಷ್ಠೆಯನ್ನು ಕುರಿತು ಕೌಸಲ್ಯೆ ಹಾಗೂ ಅನಸೂಯೆ
ಇವರು ತುಂಬಾ ಕೊಂಡಾಡಿದ್ದಾರೆ. ವನವಾಸದಲ್ಲಿ ಸನ್ಯಾಸವೃತ್ತಿಯಿಂದ ಇರುತ್ತಿದ್ದ
ರಾಮನು ಋಷಿಗಳ ಸಂರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಆಲೋಚಿಸುತ್ತಿದ್ದನು.
ಆಗ ಸೀತೆಯು ಅದು ತರವಲ್ಲವೆಂದು ಆತನಿಗೆ ಸ್ಪಷ್ಟವಾಗಿ ನುಡಿದಳು. ಯಾವ
ಅನ್ಯಪುರುಷನ ಸ್ಪರ್ಶವೂ ತನಗಾಗಬಾರದೆಂದು ಸೀತೆ ಬಹಳ ಎಚ್ಚರಿಕೆ