ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್೪ರಿ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಉತ್ತಂಕನು, ಸೌದಾಸನ ಪತ್ನಿಯಾದ ಮದಯಂತಿಯ ಕರ್ಣಕುಂಡಲಗಳನ್ನು ತರಲೆಂದು ಬರುತ್ತಿದ್ದಾಗ ಈ ರಾಕ್ಷಸನು ಉತ್ತಂಕನನ್ನು ತಿನ್ನಲು ಬಂದನು. ಆಗ ಉತ್ತಂಕನು, ತಾನು ಕೈಕೊಂಡ ಕಾರ್ಯವನ್ನು ಪೂರೈಸಿ ಮರಳಿ ನಿನ್ನ ಬಳಿ ಬರುವೆ ಎಂಬ ಆಶ್ವಾಸನೆಯನ್ನು ಕೊಟ್ಟನು. ಆಗ ಸೌದಾಸರಾಕ್ಷಸನು ಈತನನ್ನು ಮದಯಂತಿಯ ಬಳಿ ಕಳುಹಿಕೊಟ್ಟನು. ಮದಯಂತಿಯು ತನ್ನ ಪತಿಯ ಬಳಿಯಿಂದ ಗುರುತಿನ ಒಂದು ಚಿಹ್ನೆಯನ್ನು ತರಲು ಹೇಳಿದಳು. ಆ ಚಿಹ್ನೆಯನ್ನು ಗುರುತಿಸಿದ ನಂತರ ಮದಯಂತಿ ತನ್ನ ಕರ್ಣಕುಂಡಲಗಳನ್ನು ಉತ್ತಂಕನಿಗೆ ಕೊಟ್ಟು ಜೋಪಾನವಾಗಿ ಕೊಂಡೊಯ್ಯಲು ಹೇಳಿದಳು. ರಾಕ್ಷಸನು ಉತ್ತಂಕನನ್ನು ಪ್ರತಿಜ್ಞೆಯಿಂದ ಮುಕ್ತಗೊಳಿಸಿದನು.' ೧೫೭. ಸ್ಕೂಲಶಿರಾ ಈತನೊಬ್ಬ ಋಷಿ; ಅಶ್ವಶಿರನ ಮಗ. ಈತನು ವಿಶ್ವಾವಸುವಿಗೆ ಶಾಪವನ್ನು ಕೊಟ್ಟು ಕಬಂಧ ರಾಕ್ಷಸನನ್ನಾಗಿ ಮಾಡಿದನು. ೧೫೮. ಸ್ವಯಂಪ್ರಭಾ ಇವಳು ಮೇರುಸಾವರ್ಣಿಯ ಕನ್ಯಯಾಗಿದ್ದು ಹೇಮಾ ಎಂಬ ಅಪ್ಸರೆಯ ಗೆಳತಿಯಾಗಿದ್ದಳು. ಹೇಮಾ ಸ್ವರ್ಗಕ್ಕೆ ಹೋಗುವಾಗ, ಮಯನಿಂದ ನಿರ್ಮಿಸಲ್ಪಟ್ಟ ಸ್ಥಳವನ್ನು ಸ್ವಯಂಪ್ರಭೆಗೆ ಒಪ್ಪಿಸಿ ಅದನ್ನು ರಕ್ಷಿಸುವ ಸಾಮರ್ಥ್ಯವನ್ನೂ ಕೊಟ್ಟಳು. ಸ್ವಯಂಪ್ರಭಾ ಅಂಗದ ಮೊದಲಾದ ವಾನರರನ್ನು ಸಮುದ್ರತೀರಕ್ಕೆ ತಲುಪಿಸಿದಳು. ರಾಮನ ದರ್ಶನವನ್ನು ಪಡೆದನಂತರ ಇವಳು ಸ್ವರ್ಗಕ್ಕೆ ಹೋದಳು. ಇವಳನ್ನು “ಪ್ರಭಾವತಿ' ಎಂಬ ಹೆಸರಿನಿಂದಲೂ ಕರೆಯುತ್ತಿದ್ದರೆಂದು ತೋರುತ್ತದೆ. ಹಸಿದು ಬಂದ ವಾನರರಿಗೆಲ್ಲ ಹಣ್ಣುಹಂಪಲುಗಳನ್ನು ಕೊಟ್ಟು ಅವರಿಗೆ ಚೆನ್ನಾಗಿ ಆದರ ಸತ್ಕಾರವನ್ನು ಸಲ್ಲಿಸಿದಳು. ಆಗ ಹನುಮಾನನು ಈ ಉಪಕಾರವನ್ನು ಯಾವ ರೀತಿಯಿಂದ ತೀರಿಸಬೇಕೆಂದು ಕೇಳಿದಾಗ ಸ್ವಯಂಪ್ರಭಾ, 'ಧರ್ಮನಿರತಳಾದ ನಾನು ಎಲ್ಲವನ್ನೂ ಪಡೆದಿದ್ದೇನೆ' ಎಂದು ಸಾರ್ಥಕತೆಯನ್ನು ವ್ಯಕ್ತಪಡಿಸಿದಳು. ಹನುಮಾನನಿಂದ ಯಾವುದನ್ನೂ ಸ್ವೀಕರಿಸಲು ಅವಳು ಸುವಿನಯವಾಗಿ ನಿರಾಕರಿಸಿದಳು.