ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಹನುಮಾನನು ಇನ್ನಷ್ಟು ಬಲಶಾಲಿಯಾದನು. ಇವನಿಗೆ ಲಂಕೆಯ ಪ್ರವಾಸವು ಸುಲಭವಾಯಿತಲ್ಲದೆ, ಯಾವ ಭಯವೂ ಇಲ್ಲದಂತಾಯಿತು. ವರಗಳನ್ನು ಪಡೆದ ನಂತರ ಈತನು ಭೈಗು ಮತ್ತು ಅಂಗೀರಸ ಗೋತ್ರದ ಋಷಿಗಳಿಗೆ ಬಲು ಉಪಟಳ ಕೊಡಲಾರಂಭಿಸಿದ ಕಾರಣ 'ನಿನ್ನ ಸ್ವಂತದ ಸಾಮರ್ಥ್ಯದ ಅರಿವು ನಿನಗೆ ಉಳಿಯಲಾರದು!” ಎಂಬ ಶಾಪವನ್ನು ಈತನಿಗೆ ಅವರು ಕೊಟ್ಟರು. ಹನುಮಾನನು ಬಲು ಬುದ್ದಿವಂತ, ವ್ಯಾಕರಣ, ಸೂತ್ರವೃತ್ತ, ಭಾಷ್ಯ, ಸಂಗ್ರಹ ಇತ್ಯಾದಿಗಳನ್ನು ಉತ್ತಮವಾಗಿ ತಿಳಿದುಕೊಂಡಿದ್ದನು. ವಾಕಟುತ್ತ ಹಾಗೂ ದೂತ ಕಾರ್ಯದಲ್ಲಿ ನಿಪುಣನಾಗಿದ್ದನು. ಸೀತೆಯ ಶೋಧ ಮತ್ತು ಲಂಕೆಯಲ್ಲಿಯ ಪರಿಸ್ಥಿತಿಯ ಕೂಲಂಕಷ ಮಾಹಿತಿ ಇವೆರಡೂ ಕಾರ್ಯಗಳು ಈತನಿಂದಲೇ ಸಾಧ್ಯವಾದವು. ಈತನು ರಾಮನ ಪರಮಭಕ್ತನಾಗಿದ್ದನು. ರಾಮ ಮತ್ತು ಸುಗ್ರೀವರಲ್ಲಿ ಸ್ನೇಹವುಂಟಾಗಲು ಕಾರಣನಾದನು. ಆ ಸ್ನೇಹವನ್ನು ಭದ್ರವಾಗಿಟ್ಟುಕೊಳ್ಳಲು ಸೂಕ್ತ ಸಲಹೆಯನ್ನು ಸುಗ್ರೀವನಿಗೆ ಕೊಟ್ಟನು. ಹನುಮಾನನು ಅನೇಕ ರಾಕ್ಷಸರನ್ನು ಕೊಂದನು; ಲಂಕಾ ನಗರವನ್ನು ಸುಟ್ಟು ನಾಶಗೊಳಿಸಿದನು. ಇಂದ್ರಜಿತನು ಬ್ರಹ್ಮಾಸ್ತ್ರದಿಂತ ಈತನನ್ನು ಬಂಧಿಸಿದಾಗ ಇವನು ನಿಶ್ಲೇಷ್ಟನಾದನು. ಅದನ್ನು ಕಂಡ ರಾಕ್ಷಸರು ಇವನನ್ನು ಬೇರೆ ಹಗ್ಗ ಮುಂತಾದ ಬಂಧನಗಳಿಂದ ಬಿಗಿದು ಕಟ್ಟಿದರು. ಈ ಎರಡನೆಯ ಬಂಧನವು ಹನುಮಾನನಿಗೆ ಆದ್ದರಿಂದ ಬ್ರಹ್ಮಪಾಶದ ಬಂಧನವು ತಾನಾಗಿ ಇಲ್ಲದಂತಾದ್ದರಿಂದ ಮುಕ್ತನಾದನು. ಮೃತಪಟ್ಟ ವಾನರ ವೀರರನ್ನು ಜೀವಿತಗೊಳಿಸಲು ಹಾಗೂ ಮೂರ್ಛ ಹೋದ ಲಕ್ಷಣನ ಸಲುವಾಗಿ ಹನುಮಾನನು ದ್ರೋಣಗಿರಿ ಪರ್ವತವನ್ನೇ ಎತ್ತಿ ತಂದು ಗಿಡಮೂಲಿಕೆ ಔಷಧಿಗಳನ್ನು ಒದಗಿಸಿದನು. ಲಂಕೆಯಿಂದ ಅಯೋಧ್ಯೆಯತ್ತ ಮರಳುವಾಗ ಭರತನಿಗೆ ವಾರ್ತೆಯನ್ನು ತಿಳಿಸಲು ರಾಮನು ಈತನನ್ನೇ ಕಳುಹಿದ್ದನು. 'ನನ್ನ ಕಥೆಗಳು ಈ ಭೂಲೋಕದಲ್ಲಿ ಪ್ರಚಾರದಲ್ಲಿರುವವರೆಗೆ ನನ್ನ ಆಜ್ಞೆಯನ್ನು ಪರಿಪಾಲಿಸಿ ನೀನು ಸುಪ್ರಸನ್ನನಾಗಿ ಈ ಭೂತಲದಲ್ಲಿ ಸುಖವಾಗಿರು!” ಎಂಬ ಆಶೀರ್ವಾದವನ್ನು ರಾಮನು ಈತನಿಗೆ ಕೊಟ್ಟನು. ಆಗ ಹನುಮಾನನಿಗೆ ಹಿಡಿಸ ಲಾರದಷ್ಟು ಸಂತೋಷವಾಯಿತು. ೧೬೦. ಹೇತಿ-ಪ್ರಹೇತಿ ಇವರಿಬ್ಬರೂ ಅಣ್ಣತಮ್ಮಂದಿರು. ಪ್ರಹೇತಿ ಧಾರ್ಮಿಕ ವೃತ್ತಿಯವನಾಗಿದ್ದ ರಿಂದ ರಾಕ್ಷಸರ ಅಧಿಪತಿಯಾಗಿದ್ದರೂ ಈತನು ತಪಸ್ಸನ್ನಾಚರಿಸಲು ಕಾಡಿಗೆ