ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೫೦೩ ೧೦. ತಾಟಕಾ ವನ ಅಗಸ್ಯ ಋಷಿಯು ಶಾಪವನ್ನು ಕೊಟ್ಟ ನಂತರ ತಾಟಕಿಯ ಮಲದ ಮತ್ತು ಕರುಷ ಪ್ರದೇಶಕ್ಕೆ ಬಂದು ವಾಸವಾಗಿದ್ದಳು. ಈ ಪ್ರದೇಶವು ಮರುಭೂಮಿ. ಇದೇ ತಾಟಕಾವನ, ವಿಶ್ವಮಿತ್ರನ ಆಶ್ರಮವು ಈ ವನದ ಸಮೀಪದಲ್ಲಿತ್ತು. ಅಲಹಾಬಾದದಿಂದ ಶಹಾಬಾದ ಜಿಲ್ಲೆಯವರೆಗಿನ ಗಂಗನದಿಯ ದಕ್ಷಿಣದ ಕಾಡು ಭೂಪ್ರದೇಶವೆಂದರೆ ಮೊದಲಿನ ಕಾಲದ ತಾಟಕವನವಿರಬಹುದು. ೧೧. ದಂಡಕಾರಣ್ಯ ಪ್ರಾಚೀನ ಸಂಸ್ಕೃತ ವಾಜ್ಯದಲ್ಲಿ ವಿಂಧ್ಯಪರ್ವತದ ದಕ್ಷಿಣದ ಭಾಗಕ್ಕೆಲ್ಲ ದಕ್ಷಿಣಾಪಥವೆಂಬ ಹೆಸರಿತ್ತು. ಬಹುಶಃ ಅದೇ ದಂಡಕಾರಣ್ಯವೆನಿಸಿರಬಹುದು. ಭಾರ್ಗವನು ಶಾಪಕೊಟ್ಟ ಪ್ರದೇಶವು ವಿಂಧ್ಯ ಹಾಗೂ ಶೈವಲ ಇವುಗಳ ಮಧ್ಯದಲ್ಲಿದೆ ಎಂದು ವಾಲ್ಮೀಕಿ ಬಣ್ಣಿಸಿದ್ದಾನೆ. ಈ ಅರಣ್ಯದಲ್ಲಿ ತಪಸ್ವಿಗಳು ವಾಸವಿದ್ದರೆಂಬ ಕಾರಣದಿಂದ ಇದು ಜನ್ಮಸ್ಥಾನವೆಂದು ಖ್ಯಾತಿಪಡೆಯಿತು. ದಂಡರಾಜನು ಈ ಅರಣ್ಯದಲ್ಲಿ ಭಾರ್ಗವನ ಕನ್ಯಯಾದ 'ಅರಜಾ' ಇವಳನ್ನು ಬಲಾತ್ಕರಿಸಿದನು. ಭಾರ್ಗವನು ದಂಡರಾಜನಿಗೆ ಶಾಪವನ್ನು ಕೊಟ್ಟನು. ಜೊತೆಗೆ ದಂಡರಾಜನು ವಾಸವಿದ್ದ ದಂಡಕಾರಣ್ಯಕ್ಕೂ ಶಾಪದ ಝಳ ತಗುಲಿತು. ಇಂದ್ರನ ಧೂಳಿಯ ವೃಷ್ಟಿಯಿಂದ ಈ ಪ್ರದೇಶವು ಸ್ಥಾವರ ಜಂಗಮ ಪ್ರಾಣಿಗಳ ಸಮೇತ ಪೂರ್ತಿ ಹಾಳುಪ್ರದೇಶವಾಯಿತು. ಈ ರಾಜನ ಹೆಸರಿನಿಂದ ಈ ಪ್ರದೇಶಕ್ಕೆ ದಂಡಕಾರಣ್ಯ ವೆಂದಾಯಿತು. ರಾಮಾಯಣಕಾಲದಲ್ಲಿ ಈ ಅರಣ್ಯದಲ್ಲಿ ರಾಕ್ಷಸ ಮತ್ತು ವಾನರರು ವಾಸವಿದ್ದರು. ಆರ ಹಾಗೂ ದ್ರಾವಿಡರ ಪ್ರಥಮ ಭೇಟಿಯು ಈ ದಂಡಕಾರಣ್ಯದಲ್ಲಿ ನಡೆಯಿತೆಂದು ಕೆಲವು ಸಂಶೋಧಕರ ಮತವಿದೆ. ಮಹಾಭಾರತ ಕಾಲದಲ್ಲಿ ಉಲ್ಲೇಖಿಸಲ್ಪಟ್ಟ ವಿದರ್ಭ, ಅಶಕ, ಮುಲೂಕ, ಕುಂತಲ, ಗೋಪರಾಷ್ಟ್ರ ಮಲ್ಲರಾಷ್ಟ್ರ ಈ ಭಾಗಗಳು ಈ ಪ್ರದೇಶದ ಭಾಗಗಳೇ ಇರಬಹುದು. ಇಲ್ಲಿ ಯಾದವ ವಂಶದವರ ಭಿನ್ನ ಭಿನ್ನ ಗುಂಪುಗಳ ರಾಜ್ಯಗಳು ಇದ್ದವು. ಈ ಅರಣ್ಯವು ನರ್ಮದಾ ಮತ್ತು ಗೋದಾವರಿ ನದಿಗಳು ನಡುವಣ ಪ್ರದೇಶದಲ್ಲಿ ಹಬ್ಬಿತ್ತು. ಚಿತ್ರಕೂಟ ಪರ್ವತದಿಂದ ಹಿಡಿದು ಗೋದಾವರಿಯ ಮುಖದವರೆಗೆ ಇದರ ವಿಸ್ತೀರ್ಣವೆಂದು ತಿಳಿಯಲಾಗುತ್ತದೆ. ಈ ಕಾಡಿನಲ್ಲಿ ರಾಮನು ಹತ್ತು ವರ್ಷಗಳವರೆಗೆ ವಾಸಿಸಿದ್ದನು.