ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಇಲ್ಲಿ ವಿಸರ್ಜಿಸಿದನು. ಇಂದ್ರನ ಮಲವು ಈ ಪ್ರದೇಶದಲ್ಲಿ ಬಿದ್ದ ಕಾರಣ ಈ ಪ್ರದೇಶಕ್ಕೆ ಮಲದವೆಂದು ಮತ್ತು ಹಸಿವನ್ನು ಇಂಗಿಸಿದ ಪ್ರದೇಶಕ್ಕೆ ಕರುಷವೆಂದು ಹೆಸರು ಬಂದಿತು. ಮಧ್ಯಪ್ರದೇಶದಲ್ಲಿಂಯ ಶೋಣ ಮತ್ತು ಕೇನ ನದಿಗಳ ದುಆಬ್ ಪ್ರದೇಶವಾದ ರೇವಾ ನಗರದ ಸುತ್ತಲಿನ ಪ್ರದೇಶವು ಇದಾಗಿರಬಹುದು. ಪಶ್ಚಿಮಕ್ಕೆ ಕೇನ ನದಿ, ಪೂರ್ವಕ್ಕೆ ಬಿಹಾರ ಪ್ರಾಮತ್ಯ, ದಕ್ಷಿಣಕ್ಕೆ ಕೈಮೂರ ಹಾಗೂ ಉತ್ತರಕ್ಕೆ ವಿಂಧ್ಯಪರ್ವತ- ಹೀಗೆ ಈ ಪ್ರದೇಶದ ಮೇರೆಗಳಿದ್ದವು. ಈ ಪ್ರದೇಶದಲ್ಲಿ 'ಕರುಷ' ಜನರು ವಾಸಿಸುತ್ತಿದ್ದರು. ಮನುವೈವಸ್ವತಪುತ್ರನಾದ “ಕರುಷ'ನೆಂಬಾತನು ಈ ದೇಶವನ್ನು ಸ್ಥಾಪಿಸಿದನು. ಈ ಪ್ರದೇಶಕ್ಕೆ ನಂತರ ಅನೇಕ ಹೆಸರುಗಳು ನಾಮಾಂತರವಾದಂತಿವೆ. ಇಲ್ಲಿ ದಂತವಕ್ರನ ತಂದೆಯಾದ ವೃದ್ದ ಶರ್ಮನ್ ಎಂಬಾತನು ಕರುಣಾಧಿಪತಿಯಾಗಿದ್ದನು. ಈ ಪ್ರದೇಶಕ್ಕೆ 'ಅಂಗಮಾಲಜ'ವೆಂಬ ಹೆಸರೂ ಇತ್ತು. ಅಗಸ್ಯ ಮುನಿಯು ಇದನ್ನು ತನ್ನ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದನು. ೧೯. ಮಿಥಿಲಾ ಮಿಥ ಎಂದರೆ ಯುಗ (ಜೊತೆ), ವಿದೇಹ ಹಾಗೂ ವೈಶಾಲಿ ಇವೆರಡನ್ನೂ ಸೇರಿ ಮಿಥಿಲಾ ಎಂದು ಕರೆಯುವ ಒಂದು ಅಭಿಪ್ರಾಯವಿದೆ. ನಿಮಿರಾಜನ ದೇಹವನ್ನು ಕೊರಡಿನಿಂದ ಉಜ್ಜಿದ ನಂತರ ಹುಟ್ಟಿದ ಪುತ್ರನಾದ ಮಿಥನು ಈ ನಗರವನ್ನು ರಚಿಸಿದನು; ಆದ್ದರಿಂದ ಮಿಥಿಲಾ ಎಂದು ಹೆಸರು ಬಂದಿದೆ ಎಂಬ ಇನ್ನೊಂದು ಅಭಿಪ್ರಾಯವಿದೆ. ಇದು ಜನಕರಾಜನ ರಾಜಧಾನಿಯಾಗಿತ್ತು. ಗೌತಮನ ಆಶ್ರಮವು ಇಲ್ಲಿಗೆ ಸಮೀಪವಾಗಿತ್ತು. ಜನಕಪುರವೆಂಬುದು ನೇಪಾಳದಲ್ಲಿಯ ಒಂದು ಕ್ಷೇತ್ರಸ್ಥಾನವಿದೆ. ಅದಕ್ಕೆ ವಿದೇಹನಗರವೆಂಬ ಇನ್ನೊಂದು ಹೆಸರಿದೆ. ಇದು ವಿದ್ಯಾಕೇಂದ್ರವಾಗಿತ್ತು. ಬೌದ್ದ ಹಾಗೂ ಜೈನರಿಗೂ ಇದು ಧಾರ್ಮಿಕ ಮಹತ್ವದ ನಗರವಾಗಿದೆ. ೨೦. ಮೇರು ಜಂಬೂದ್ವೀಪದಲ್ಲಿಯ ಏಳು ಪರ್ವತ ಸಮೂಹದಲ್ಲಿ ಮೇರುಪರ್ವತ ಮೊದಲಿನದಾಗಿದೆ. ಸುದರ್ಶನವೆಂಬುದು ವಿಕಲಿತ ಹೆಸರು. ಮಹಾಮೇರು, ಸುಮೇರು ಈ ಹೆಸರುಗಳು ನಂತರ ನಾಮಾಂತರವಾದವಾಗಿವೆ. ಇದು ಸುವರ್ಣ ಮಯವಾಗಿದ್ದು, ಇಲ್ಲಿ ಪವಿತ್ರಸ್ಥಾನಗಳಿದ್ದವು; ಪುಣ್ಯವಂತರ ವಿಹಾರಸ್ಥಾನ