ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂದೇಹಾಸ್ಪದ ಶಾಪವರಗಳು ೫೧೭ ಸಿಗಲಿಲ್ಲ. ಹೋದಲ್ಲೆಲ್ಲ ದರ್ಭೆಯು ಬೆನ್ನುಹತ್ತಿತು. ಕೊನೆಗೆ ಆ ಕಾಗೆ ಮರಳಿ ಬಂದು ರಾಮನಿಗೆ ಶರಣಾಯಿತು. ಪ್ರಾಣವನ್ನು ಉಳಿಸು ಎಂದು ಪ್ರಾರ್ಥಿಸಿತು. ಶರಣಾಗತರಿಗೆ ಅಭಯವನ್ನೀಯುವದು ರಾಮನ ತತ್ವವಾದ್ದರಿಂದ ಹಾಗೂ ಈ ಕಾಗೆಯ ಬಗ್ಗೆ ದಯೆ ಎನಿಸಿದ್ದರಿಂದ ರಾಮನು ಅದಕ್ಕೆ- ಮೋಘಮಸ್ತಂ ನ ಶಕ್ಯಂ ತು ಬ್ರಾಹ್ಮಣ ಕರ್ತುಂ ತದುಚ್ಯತಾಮ್ ||೩೪|| 'ಈ ಬ್ರಹ್ಮಾಸ್ತ್ರವು ಎಂದಿಗೂ ವ್ಯರ್ಥವಾಗಲಾರದು; ಅಂದಬಳಿಕ ಈ ಅಸ್ತದಿಂದ ನಿನ್ನ ಯಾವ ಭಾಗವು ನಾಶವಾಗಲಿ ಎಂಬುದನ್ನು, ಆ ಅವಯವದ ಆಸೆಯನ್ನು ಬಿಟ್ಟು ನೀನು ಹೇಳು! ಆಗ ಈ ಅಸ್ತವು ನಿಜವಾಗುವದು; ನಿನ್ನ ಪ್ರಾಣವು ಉಳಿಯುವದು.'- ಈ ರೀತಿ ನುಡಿದನು. ಆಗ ಆ ಕಾಗೆಯು, 'ಈ ಅಸ್ತವನ್ನು ಒಂದು ಕಣ್ಣಿನ ಮೇಲೆ ಸಾರ್ಥಕಗೊಳಿಸು' ಎಂದಿತು. ಆಗಿನಿಂದ ಕಾಗೆಯು ಒಂದು ಕಣ್ಣಿನದಾಯಿತು. ಈ ಸಂದರ್ಭವು ಶಾಪದಂತನಿಸಿದರೂ ಇದು ಶಾಪವಲ್ಲ. ರಾಮನು ಕಾಗೆಗೆ ಶಾಪವನ್ನು ಕೊಟ್ಟಿರದೇ ಅದರ ಅತಿಪ್ರಸಂಗತನಕ್ಕಾಗಿ ಶಿಕ್ಷೆ ವಿಧಿಸಿದ್ದಾನೆ. ರಾಮನಲ್ಲಿ ಶಾಪ ಕೊಡುವ ಸಾಮರ್ಥ್ಯವಿದ್ದರೂ ಆತನು ಯಾರಿಗೂ ಶಾಪವನ್ನು ಕೊಟ್ಟಿರುವದಿಲ್ಲ. ಅದೇ ರೀತಿ ಆತನಿಗೆ ಕೊಡಬಂದ ವರಗಳನ್ನು ಸಹ ವಿನಯ ಪೂರ್ವಕವಾಗಿ ನಿರಾಕರಿಸಿದ್ದಾನೆ. ರಾಮನು ಸ್ವೀಕರಿಸಿದ ವರಗಳು ಸ್ವಂತದ ಲಾಭ ಕ್ಯಾಗಿರಲಿಲ್ಲ. ಅವುಗಳನ್ನು ಸಮಾಜಕಾರ್ಯಕ್ಕಾಗಿ ಬಳಸಿಕೊಂಡಿದ್ದಾನೆ. ರಾಮನು ಪ್ರಸ್ರವಣಪರ್ವತಕ್ಕೂ ಮತ್ತು ನದಿಗೂ ಉದ್ದೇಶಿಸಿ ಆಡಿದ ಶಾಪಸಮವಾದ ನುಡಿಗಳು, ಒಂದು ಶರತ್ತನ್ನು ಇಟ್ಟು ಆಡಿದ್ದನು. ಈ ಪ್ರಕಾರ ಈತನು ಹಾಕಿದ ಶರತ್ತಿನ ಪಾಲನೆಯಾದ್ದರಿಂದ ಈ ಶಾಪವನ್ನು ಕೊಡುವ ಸಂದರ್ಭವೇ ಒದಗಲಿಲ್ಲ. ಕಾಗೆಯು ಮನುಷ್ಯರ ಭಾಷೆಯಲ್ಲಿ ಮಾತನಾಡುತ್ತಿತ್ತು ಎಂಬುದು ಸೂಚಕವಿದ್ದು ನಿಜಸ್ವರೂಪ ಬೇರೆಯೇ ಇರಬಹುದೆಂಬುದು ಸ್ಪಷ್ಟವಾಗುತ್ತದೆ. ವಾಲ್ಮೀಕಿಯು 'ಶಾಪ'ವೆಂಬ ಶಬ್ದವನ್ನು ಬಳಸಿಲ್ಲ. ಮರಾಠಿ ಭಾಷೆಯ ಅನುವಾದದಲ್ಲಿಯೂ ಶಾಪವೆಂಬ ಶಬ್ದವಿರದೇ 'ಶಿಕ್ಷೆ' ಎಂಬ ಶಬ್ದವನ್ನು ಬಳಸಲಾಗಿದೆ.*

  • ಈ ಕಥೆಯ ಅಯೋಧ್ಯಾಕಾಂಡ೯೫ರ ನಂತರ ಪ್ರಕ್ಷಿಪ್ತ ಸರ್ಗದಲ್ಲಿಯೂ ಬಂದಿದೆ.

ಪ್ರಸ್ತುತ ಸರ್ಗದ ಭಾಗವು ಗೀತಾ ಪ್ರೆಸ್‌, ಗೋರಖಪುರ ಪ್ರತಿಯಲ್ಲಿಲ್ಲ. ಮರಾಠಿ ಭಾಷೆಯ