ಈ ಪುಟವನ್ನು ಪ್ರಕಟಿಸಲಾಗಿದೆ

೫೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ವರವೆಂದೆನ್ನುವುದು ಸರಿಯಾಗಲಾರದು. ಇದು ಪ್ರಸಾದರೂಪವಾಗಿದೆ.
ಅನುಗ್ರಹವೆಂದೆನ್ನಬಹುದು. ಪಾಯಸದ ಪ್ರಭಾವ ಪರಿಣಾಮರೂಪವಾಗಿ ಮಕ್ಕಳು
ಹುಟ್ಟಿದ್ದರು. ವಾಲ್ಮೀಕಿ ರಾಮಾಯಣದಲ್ಲಿ ಸಂತಾನಪ್ರಾಪ್ತಿಗೆಂದು ಕೊಟ್ಟ ಹತ್ತು
ವರಗಳ ಉಲ್ಲೇಖವಿದೆ. ಅವುಗಳಲ್ಲಿಯ ಒಂದರಲ್ಲೂ ಸಂತಾನಕ್ಕಾಗಿ ಪಾಯಸದ
ಬಳಕೆ ಕಂಡುಬರುವದಿಲ್ಲ.
ವರಗಳ ಕ್ರಮಸಂಖ್ಯೆ ೬, ೮, ೯, ೧೦, ೧೧, ೧೨, ೧೩, ೧೪, ೨೦
ಮತ್ತು ೪೫ ಪರಿಶೀಲಿಸಿರಿ.

೪. ತ್ರಿಶಂಕುವಿನ ಸ್ವರ್ಗಗಮನ

ಬಾಲಕಾಂಡ/೯೦

ದೇಹಸಹಿತವಾಗಿ ಸ್ವರ್ಗಕ್ಕೆ ಹೋಗಬೇಕೆಂಬ ಉತ್ಕಟೇಚ್ಛೆಯನ್ನು
ಹೊಂದಿದವನಾಗಿ ಯಜ್ಞವನ್ನು ಕೈಕೊಂಡ ತ್ರಿಶಂಕುವಿಗೆ ಬಲುದುಃಖವಾಯಿತು.
ಆತನು ವಸಿಷ್ಠ ಪುತ್ರರ ಬಳಿಗೆ ಹೋದನು. ವಸಿಷ್ಠರ ಪುತ್ರರು ಸಹ ಈತನ
ವಿನಂತಿಯನ್ನು ಅಸಡ್ಡೆ ಮಾಡಿದ್ದಲ್ಲದೇ 'ನೀನು ಚಾಂಡಾಲನಾಗುವೆ!' ಎಂಬ
ಶಾಪವನ್ನು ಕೊಟ್ಟರು. ಚಾಂಡಾಲತ್ವವನ್ನು ಹೊಂದಿದ ತ್ರಿಶಂಕು ವಿಶ್ವಾಮಿತ್ರನಿಗೆ
ಶರಣು ಹೋದನು. ತನ್ನನ್ನು ರಕ್ಷಿಸಬೇಕು ಮತ್ತು ತನ್ನ ಕೋರಿಕೆಯನ್ನು ಈಡೇರಿಸಲು
ನೆರವಾಗಬೇಕೆಂದು ವಿನಂತಿಸಿದನು. ವಿಶ್ವಾಮಿತ್ರನು ತ್ರಿಶಂಕುವನ್ನು ರಕ್ಷಿಸುವ
ಹೊಣೆಯನ್ನು ಸ್ವೀಕರಿಸಿದನು. ತನ್ನ ಸ್ವಂತದ ತಪೋಬಲದಿಂದ, ವಸಿಷ್ಠಪುತ್ರರ
ಶಾಪದಿಂದ ಉಂಟಾದ ದೇಹಸಹಿತ ತ್ರಿಶಂಕುವಿಗೆ ಸ್ವರ್ಗವನ್ನು ದೊರಕಿಸಿಕೊಡುವ
ದೃಢಪ್ರತಿಜ್ಞೆಯನ್ನು ಮಾಡಿದನು. ವಿಶ್ವಾಮಿತ್ರನು ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿದನು.
ಆದರೆ, ಅಲ್ಲಿಯ ಇಂದ್ರಾದಿದೇವತೆಗಳು 'ಸ್ವರ್ಗದಲ್ಲಿ ಇರುವ ಯೋಗ್ಯತೆ ನಿನಗಿಲ್ಲ'
ಎಂದು ನುಡಿದು ತ್ರಿಶಂಕುವನ್ನು ತಲೆಕೆಳಗೆ ಮಾಡಿ ಸ್ವರ್ಗದಿಂದ ಪೃಥ್ವಿಯತ್ತ
ತಳ್ಳಿಹಾಕಿದರು. ಆಗ ಶರಣಾಗತನಾದ ತ್ರಿಶಂಕುವನ್ನು ರಕ್ಷಿಸುವ ಮತ್ತು ಆತನ
ಇಚ್ಛೆಯನ್ನು ಪೂರ್ತಿಗೊಳಿಸುವ ಪೂರ್ಣ ಹೊಣೆ ತನ್ನದೇ ಎಂದು ವಿಶ್ವಾಮಿತ್ರನು
ಬಗೆದನು. ಆತನು-
ಪಶ್ಯ ಮೇ ತಪಸೋ ವೀರ್ಯಂ ಸ್ವಾರ್ಜಿತಸ್ಯ ನರೇಶ್ವರ |
ಏಷಂ ತ್ವಾಂ ಸ್ವಶರೀರೇಣ ನಯಾಮಿ ಸ್ವರ್ಗಮೋಜಸಾ ‖೧೩‖
ದುಷ್ಟ್ರಾಪಂ ಸ್ವ ಶರೀರೇಣ ಸ್ವರ್ಗಂ ಗಚ್ಛ ನರೇಶ್ವರ |
ಸ್ವಾರ್ಜಿತಂ ಕಿಂಚಿದಪ್ಯಸ್ತಿ ಮಯಾ ಹಿ ತಪಸಃ ಫಲಮ್ ‖೧೪‖