ಈ ಪುಟವನ್ನು ಪ್ರಕಟಿಸಲಾಗಿದೆ

೪೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಆದರೆ, ಪ್ರತಿಜ್ಞೆಯಲ್ಲಿ ಶಪಥವು ಇರಲೇಬೇಕು ಎಂತಿಲ್ಲ. ಶಪಥದಲ್ಲಿ ಶಾಪದ ಛಾಯೆ ಇರುವ ಹಾಗೆ ಪ್ರತಿಜ್ಞೆಯಲ್ಲಿರುವದಿಲ್ಲ. ಶಪಥ ಮತ್ತು ಪ್ರತಿಜ್ಞೆ ಈ ಶಬ್ದಗಳಲ್ಲಿಯ ಅರ್ಥ ಭಿನ್ನತೆ, ಅರ್ಥವ್ಯಾಪಕತೆ ಇವುಗಳನ್ನು ಸರಿಯಾಗಿ ಅರಿತ ವಾಲ್ಮೀಕಿಯು ಈ ಶಬ್ದಗಳನ್ನು ತಪ್ಪಾಗದಂತೆ ಬಳಸಿದ್ದಾನೆ. ರಾಮಾಯಣದಲ್ಲಿ ಅನೇಕ ಪ್ರತಿಜ್ಞೆಗಳ ದಾಖಲೆಯಿದೆ. ವೇದವತಿಯ ಪ್ರತಿಜ್ಞೆಯು ಎಲ್ಲರಿಗೂ ಗೊತ್ತಿದೆ.


            ಯಸ್ಮಾತ್ತು ಘರ್ಷಿತಾ ಚಾಹಂ ತ್ವಯಾ ಪಾಪಾತ್ಮನಾ ವನೇ ॥೩೧||
            ತಸ್ಮಾತ್ತವ ವಧಾರ್ಥಂ ಹಿ ಸಮುತ್ಪತ್ಸ್ಯೇ ಹ್ಯಹಂ ಪುನಃ ॥೩೨||

“ದುರಾತ್ಮನಾದ ನೀನು ಕಾಡಿನಲ್ಲಿ ನನ್ನ ಅಂಗಸಂಗ ಮಾಡಿರುವುದರಿಂದ ನಿನ್ನನ್ನು ವಧಿಸಲು ನಾನು ಪುನರ್ಜನ್ಮ ತಾಳುವೆ.”೨೯ ಭರತನು ಭೇಟಿಯ ಸಮಯದಲ್ಲಿ ರಾಮನಿಗೆ ಅಯೋಧ್ಯೆಗೆ ಮರಳಲು ಪರಿಪರಿಯಾಗಿ ಆಗ್ರಹಪಡಿಸುತ್ತಾನೆ: ರಾಮನು ಅಷ್ಟೇ ನಿಖರವಾಗಿ ನಿರಾಕರಿಸುತ್ತಾನೆ. ರಾಮನು ಭರತನಿಗೆ ನುಡಿದದ್ದು:


            ಪುರಾ ಭ್ರಾತಃ ಪಿತಾ ನಃ ಸ ಮಾತರಂ ತೇ ಸಮುದ್ವಹನ್ |
            ಮಾತಾಮಹೇ ಸಮಾಶ್ರೌಷೀದ್ರಾಜ್ಯಶುಲ್ಕಮನುತ್ತಮಮ್ ॥೩॥

“ಹಿಂದೆ, ನಮ್ಮ ತಂದೆ ನಿನ್ನ ತಾಯಿಯ ಪಾಣಿಗ್ರಹಣವನ್ನು ಮಾಡಿದಾಗ ನಿನ್ನ ಅಜ್ಜನಿಗೆ ಇವಳಲ್ಲಿ ಹುಟ್ಟಿದ ಮಗನಿಗೆ ರಾಜ್ಯವನ್ನು ಕೊಡುತ್ತೇನೆಂದು ಪ್ರತಿಜ್ಞೆ ಮಾಡಿದ್ದಾರೆ.”೩೦ ರಾಮಲಕ್ಷ್ಮಣರು ದಂಡಕಾರಣ್ಯದಲ್ಲಿ ವಾಸವಿದ್ದಾಗ ಮುನಿವ್ರತವನ್ನು ಅಂಗೀಕರಿಸಿದ್ದರು. ಅಲ್ಲಿದ್ದ ಋಷಿಗಳು ವಿನಂತಿಸಿದ ಕಾರಣ, ಅವರಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರ ಸಂಹಾರವನ್ನು ಮಾಡಲು ರಾಮನು ಸಿದ್ಧನಾದನು. “ಯಾವ ಅಪರಾಧವನ್ನೂ ಮಾಡದ ರಾಕ್ಷಸರನ್ನು ಹಿಂಸಿಸುವುದು ಸರಿಯಲ್ಲವಾದ್ದರಿಮದ ದಂಡಿಸಕೂಡದು!” ಎಂದು ಸೀತೆಯು ರಾಮನಿಗೆ ವಿನಂತಿಸಿದಳು. ಆಗ ರಾಮನು ಸೀತೆಗೆ ನುಡಿದದ್ದು:


            ಋಷೀಣಾಂ ದಂಡಕಾರಣ್ಯೇ ಸುಶ್ರುತರ ಜನಕಾತ್ಮಜೇ |
            ಸಂಶ್ರುತ್ಯ ಚ ನ ಶಕ್ಷ್ಯಾಮಿ ಜೀವಮಾನಃ ಪ್ರತಿಶ್ರವಮ್ ॥೧೭॥

——————

೨೯. ಉತ್ತರಕಾಂಡ, ೧೭.
೩೦. ಅಯೋಧ್ಯಾಕಾಂಡ, ೧೦೭.