ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೬೯

ಕಡಿಮೆ ಇವೆ. ಒಂದು ರಣಹದ್ದು ಒಂದು ಗುಬೆಯ ಮನೆಯನ್ನು ಅಪಹರಿಸಿದೆ ಎಂದು ದೃಢವಾದಾಗ ರಾಮನು ರಣಹದ್ದಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದನು. ಆಗ ಆಕಾಶವಾಣಿಯಾಯಿತು (ಶಾಪ ಕ್ರ. ೪೬). ಸೀತೆ ಭೂದೇವಿಯನ್ನು ಪ್ರಾರ್ಥಿಸಿ ತನ್ನನ್ನು ಒಡಲಿನಲ್ಲಿ ಇಟ್ಟುಕೊಳ್ಳಬೇಕೆಂದು ಬೇಡಿಕೊಂಡಾಗ, ಭೂಮಿ ಇಬ್ಭಾಗವಾಗ ಒಂದು ಸಿಂಹಾಸನವು ಮೇಲೆ ಬಂದಿತು. ಭೂದೇವಿಯು ಸಿಂಹಾಸನವು ಮೇಲೆ ಬಂದಿತು. ಭೂದೇವಿಯು ಸಿಂಹಾಸನದ ಮೇಲೆ ಕುಳಿತಿದ್ದಳು. ಭೂದೇವಿಯು ಸೀತೆಯನ್ನು ಎತ್ತಿಕೊಂಡು ಸಿಂಹಾಸನದಲ್ಲಿ ಕುಳ್ಳಿರಿಸಿದಳು. ಆಗ ಸ್ವರ್ಗನಿವಾಸಿಗಳಾದ ದೇವತೆಗಳು ಆಕಾಶದಿಂದ ಪುಷ್ಟ ವೃಷ್ಟಿಯನ್ನು ಮಾಡಿ ಆಶೀರ್ವದಿಸಿದರು.

           ಸಾಧುಕಾರಶ್ಚ ಸುಮಹಾನ್ ದೇವಾನಾಂ ಸಹಸೋತ್ಥಿತಃ |
           ಸಾಧುಸಾಧ್ವಿತಿ ವೈ ಸೀತೇ ಯಸ್ಯಾಸ್ತೇ ಶೀಲಮೀದೃಶಮ್ ||೨೧||
           ಏವಂ ಬಹುವಿಧಾ ವಾಚೋ ಹ್ಯಂತರಿಕ್ಷಗತಾಃ ಸುರಾಃ |
           ವ್ಯಾಜ್ಯಹನುಕೃಷ್ಣನನಸೋ ದೃಷ್ಟ್ವಾ ಸೀತಾಪ್ರವೇಶನಮ್ ||೨೨||

(ಉತ್ತರ. ೯೭)

“ದೇವದೇವತೆಗಳು ಭಲೇಭಲೇ ಎಂದು ಸಂತೋಷದ ಧ್ವನಿ ಮಾಡಿದರು. 'ಸದಾಚರಣೆಯುಳ್ಳ ಹೇ ಸೀತೆ! ನೀನೇ ಧನ್ಯೆ' ಎಂದು ಸೀತೆಯನ್ನು ಶ್ಲಾಘಿಸಿದರು.”

ಆಕಾಶವಾಣಿಯಾದೊಡನೆ ಪುಷ್ಪವೃಷ್ಟಿ ಆಗಲೇಬೇಕು ಎಂದೇನೂ ಇಲ್ಲ. ಪುಷ್ಪವೃಷ್ಟಿ ಎಂದರೆ ಸದ್ಭಾವನೆಯನ್ನು ವ್ಯಕ್ತಪಡಿಸುವ ಒಂದು ಪ್ರಕಾರವಿದ್ದು, ಇದರಲ್ಲಿ ಶಬ್ದಗಳ ಬದಲು ಹೂಗಳಿಂದ ಭಾವನೆಯನ್ನು ಪ್ರಕಟಿಸಲಾಗುತ್ತದೆ. ಕೆಲವೊಮ್ಮೆ ಮಂಗಲವಾದ್ಯಗಳ ಮೊಳಗುವಿಕೆ, ನೃತ್ಯಗಾಯನಾದಿಗಳಿಂದ ಈ ಭಾವನೆಯನ್ನು ಪ್ರಕಟಿಸಲಾಗುತ್ತದೆ. ಈ ಕೆಳಗಿನ ಪ್ರಸಂಗಗಳಲ್ಲಿ ಪುಷ್ಪವೃಷ್ಟಿಯಾದ ಉಲ್ಲೇಖವಿದೆ. ರಾಮಜನ್ಮ (ಬಾಲಕಾಂಡ, ೧೮), ರಾಮಲಕ್ಷ್ಮಣರ ವಿವಾಹ (ಬಾಲಕಾಂಡ, ೭೫), ವೇದವತಿಯ ಅಗ್ನಿಪ್ರವೇಶ (ಉತ್ತರಕಾಂಡ, ೧೭), ರಾಮನಿಂದ ನಡೆದ ಶಂಬೂಕನ ವಧೆ (ಉತ್ತರಕಾಂಡ, ೩೬) ಮತ್ತು ರಾಮನ ಮಹಾಪ್ರಸ್ಥಾನದ ಸಮಯ. ರಾವಣನ ವಧೆಯನಂತರವೂ (ಯುದ್ಧಕಾಂಡ, ೧೦೮) ಪುಷ್ಪವೃಷ್ಟಿಯಾಗಿದೆ.