ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ್ರಮೋಗ್ಯ ಶೀತ ನಾಟಕ ಪಚನಾಕಂ. (ಅನಂತರ ವಿದೂಷಕನು ಪ್ರವೇಶಿಸಿ ಸಂತೋಷದಿಂದ). ವಿ.- *ಭಾಪು ! ಭಾಪು ! ನಮ್ಮ ಮಹಾರಾಜನು ಊರ್ವಶೀಸ ಹಿತನಾಗಿ ನಂದನವನ ಮೊದಲಾದ ದೇವತಾವನಗಳಲ್ಲಿ ವಿಹಾರಮಾಡಿ ಕಂಡು, ಬಹುಕಾಲಕ್ಕೆ ರಾಜಧಾನಿಗೆ ಬಂದು ಸೇರಿದನು. ಈಗ ಪ್ರಜೆಗ ಳನ್ನೆಲ್ಲಾ ಸತ್ಕರಿಸಿ ಸಂತೋಷಪಡಿಸುತ್ತಾ, ರಾಜ್ಯ ಪರಿಪಾಲನೆಯನ್ನು ಮಾ ಡುತ್ತಿರುವನು. ಈತನ ವಿಷಯದಲ್ಲಿ ಸಂತಾನವಿಲ್ಲದೇ ಇರುವುದೊಂದೇ ಪ್ರಜೆಗಳ ಕೊರತೆಗೆ ಕಾರಣವೇ ಹೊರತು ಇನ್ನಾವುದೂ ಇಲ್ಲ, ಈವೊ ತೇನೋ ಪುಣ್ಯಕಾಲವೆಂರು ಗಂಗಾಯಮುನಾ ಸಂಗಮದಲ್ಲಿ ಮಹಾರಾಣಿ ಯೊಡನೆ ಮಂಗಳ ಸ್ನಾನವನ್ನು ಮಾಡಿ, ಅಲಂಕಾರವಾಡಿಕೊಳ್ಳುವುದೆ ಕೂಸ್ಕರ ಅಲಂಕಾರಮಂಟಪಕ್ಕೆ ಬಂದಿರುವನು ; ಈಗಲೇ ನಾನು ಅಲ್ಲಿಗೆ ಹೋಗದೇ ಇದ್ದರೆ ಗಂಧಪುಷ್ಪಗಳಲ್ಲಿ ನನಗೆ ಬರುವ ಅಗ್ರಭಾಗವು ತಪ್ಪಿ ಹೋಗುವುದು ಆದ್ದರಿಂದ ಜಾಗ್ರತೆಯಾಗಿ ಅಲ್ಲಿಗೆ ಹೋಗುವೆನು. (ಎ೦ದು ನಡೆದು ಬರುತ್ತಿರಲು) ತೆರೆಯಲ್ಲಿ -ಅಯ್ಯೋ ! ಅಯ್ಯೋ ! ಪಟ್ಟೆ ಬಟ್ಟೆಯನ್ನು ಹಾಕಿದ ಚಿನ್ನದ ತಟ್ಟೆಯಲ್ಲಿಟ್ಟುಕೊಂಡು ತರುತ್ತಿದ್ದ ಊರ್ವಶಿಯಾ ಚೂಡಾಭರಣ ರತ್ನವನ್ನು ಮಾಂಸಭಾಂತಿಯಿಂದ ಹನ್ನೆತ್ತಿಕೊಂಡು ಹೋಯಿತು. ವಿದೂ-(ಕೇಳಿ) ಆಹ ! ಇದೇನು! ಆ ರತ್ನವು ಮಹಾರಾಜನು ಅತ್ಯಂತ ಬಹುಮಾನದಿಂದ ಇಟ್ಟುಕೊಂಡಿದ್ದ ಸಂಗಮನೀಯವೆಂಬ ಚೂಡಾರತ್ನ ವ

  • ನೋಟು-ರಾಗ ಶಂಕರಾಭರಣ-ಎಕತಾಳ | ಈಗ ನನ್ನ ಮನವು ದೈವ ಯೋಗದಿಂದಲಿ ನೀಗಿ ಚಿಂತೆಯನ್ನು ಚೆ | ನ್ನಾಗಿ ಸುಖಿವುದು |೧|| ನಂದನಾದಿ ವನವಿಹಾರ | ದಿ೦ದ ಸುಖಿಸಿತಾಂ ! ಇಂದು ನಮ್ಮ ರಾಯವುರಕ | ಬಂದು ಸೇರ್ದನು ||೨|| ಎಂ ಸಿ೦ಹಸೀಠವನ್ನು | ಭೂರಿತೋಷದಿ | ಸೇರಿಸಚಿವರೊಡನೆ ರಾಜ್ಯ | ಭಾರಗೈವನು ||೩||