ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಕರಭೂಷಣ ಲಾಯಿಸುತ, ಗೋಸುಂಬೆಯು ಹೇಗೆ ವರ್ಣವನ್ನು ಬದುಲುಮಾಡು ಇದೋ-ಹಾಗೆ ಸಂಕಲ್ಪಗಳನ್ನು ಬದಲಾಯಿಸು, ಯಾವ ಕೆಲಸವನ್ನೂ ಸಮರ್ಪಕವಾಗಿ ಮಾಡಲಾರದೆ, ಇವನು ನಿರರ್ಥಕವಾಗಿ ಕಾಲಹರಣ ಮಾಡುವನು. ಹಾಗೆ ಮಾಡತಕ್ಕವನು, ಭಗ್ನ ಮನೋರಥನಾಗಿ ಕೆಟ್ಟು ಹೋಗುವುದೇನೂ ಆಶ್ಚರವಲ್ಲ, ಇದೇ ವಿಷಯದಲ್ಲಿ, ರ್ಸ್ಪೇ ದೇಶದ ಜನಗಳಲ್ಲಿ ಒಂದು ಗಾದೆಯುಂಟು. ಮನುಷ್ಯನನ್ನು ದುರ್ಮಾರ್ಗಕ್ಕೆಳೆ ಯುವುದಕ್ಕೆ ಪಿಶಾಚಿಗಳು ಕಾದಿರುತ್ತವೆಂಬುದಾಗಿಯ, ಸೋಮಾರಿಯು ಅಂಧ ಪಿಶಾಚಗಳಿಗೆ ಔತಣವನ್ನು ಕೊಡುವನೆಂಬುದಾಗಿಯೂ, ಈ ಜನ ಗಳು ಹೇಳುವರು, ಮೇಲೆ ಹೇಳಿದ ಮಹಮ್ಮದೀಯರಿ ಗಾದೆಯಂತೆಯೇ, ಈ ಗಾದೆಯ ಕೂಡ, ಸ್ವೀರಸಂಕಲ್ಪವೂ ಸೈದ್ಯವೂ ಇಲ್ಲದವರು ಹೇಗೆ ಮಾಡಬಾರದ ಕೆಲಸಗಳನ್ನು ಮಾಡಿ ಕೆಟ್ಟು ಹೋಗುವರೋ-ಅದನ್ನು ತೋರಿಸುವುದು, ಜನಗಳು ಅದೃಷ್ಟ ಪರಾಧೀನರೆಂದು ಹೇಳುವುದುಂಟಷ್ಟೆ! ದೃಷ್ಟವೆಂದರೆ ಕಣ್ಣಿಗೆ ಕಾಣತಕ್ಕುದು ಅದೃಷ್ಟವೆಂದರೆ ಕಣ್ಣಿಗೆ ಕಾಣದಿ ರತಕ್ಕುದು ಒಳ್ಳೆಯ ಸಹವಾಸದಿಂದ ಉದ್ಯೋಗಿಗಳಾಗಿ ಅದರ ಫಲವನ್ನು ಹೊಂದುವುದಕ್ಕೆ ಜನಗಳು ಸಮರ್ಥರಾಗುವರು, ಕೆಟ್ಟ ಸಹವಾಸದಿಂದ ಮಾಡಬಾರದ ಕೆಲಸವನ್ನು ಮಾಡಿ ಯಶಸ್ಸನ್ನು ಕಳೆದುಕೊಳ್ಳುವುದಲ್ಲದೆ, ಮರಣಾಂತವಾದ ಅನರ್ಧಗಳಿಗೂ ಗುರಿಯಾಗುವುದುಂಟು. ಮನುಷ್ಯನ ಸಹವಾಸವನ್ನು ನೋಡಿದ ಕೂಡಲೆ, ಅವನ ಸ್ವಭಾವವಿಂತಹುದೆಂಬುದಾ ಗಿಯೂ, ಅವನ ಪರಿಣಾಮವು ಹೀಗಾಗುವುದೆಂಬುದಾಗಿಯ, ಧಾರಾಳ ವಾಗಿ ಹೇಳಬಹುದು. ಇಂದ್ರಿಯಗಳು, ಬದುಕುವುದಕ್ಕೆ ಹೇಗೋ-ಹಾಗೆ