ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೯೫ ಕೆಡುವುದಕ್ಕೆ ಕೂಡ ಸಹಕಾರಿಗಳಾಗುವುವು. ಇವುಗಳಿಗೂ, ಮತ್ತು ವಿಷಯಗಳಿಗೂ ನಾವು ಸಂಬಂಧಪಟ್ಟವರಾಗಿರುತ್ತೇವೆ. ಕೆಟ್ಟ ವಿಷಯ ಗಳ ದೆಸೆಯಿಂದ ಇಂದ್ರಿಯವ್ಯಾಪಾರಗಳನ್ನು ಹಿಂದಿರುಗಿಸಿ ಒಳ್ಳೆಯ ವಿಷಗಳಲ್ಲಿ ನಿಲ್ಲಿಸಿದರೆ, ನಾವು ಒಳ್ಳೆಯ ಸ್ಪಿತಿಗೆ ಬರುತ್ತೇವೆ. ಹಾಗಿಲ್ಲ ದಿದ್ದರೆ, ಕೆಟ್ಟ ವಿಷಯಗಳು ನಮ್ಮ ಬುದ್ದಿ ಯನ್ನಾ ಕರ್ಷಿಸಿ ನಮ್ಮನ್ನು ಅತ್ಯಂತ ಶೋಚನೀಯವಾದ ಸ್ಥಿತಿಗೆ ತರುತ್ತಿವೆ, ದುರ್ವಿಷಯಪರಾಧೀನ ರಾದವರು, ತಾವು ಕೆಡುವುದಲ್ಲದೆ, ತಮ್ಮ ಬಂಧುಮಿತ್ರವರ್ಗವನ್ನೂ ಕೆಡಿಸುತ್ತಾರೆ ; ಮತ್ತು, ಅವರು ಹೀನಸ್ಥಿತಿಗೆ ಬರುವಂತೆಯೂ ಮಾಡು ತಾರೆ, ಆದುದರಿಂದ, ಇಹಪರಸೌಖ್ಯದಲ್ಲಿ ಆಸಕ್ತರಾದವರು, ಪ್ರತಿ ಯೊಂದು ರಾತ್ರಿಯಲ್ಲಿಯ ಮಲಗುವದಕ್ಕೆ ಮುಂಚೆ . ಈ ದಿವಸ ನಾನು ಮಾಡಿದ ಯೋಚನೆಗಳೂ, ಆಡಿದ ಮಾತುಗಳೂ, ಮಾಡಿದ ಕೆಲಸ ಗಳೂ ಸಮಿಾಚೀನವಾದುವುಗಳೇ ? ಅಥವಾ ಅಲ್ಲವೆ ? ಇವುಗಳ ಪರಿ ಣಾಮ ಫಲವೇನು ? " ಎಂದು ಪರಾಲೋಚಿಸಿ, ಮಾರನೆಯ ದಿವಸ ಮಾಡತಕ್ಕ ಯೋಚನೆಯನ್ನೂ ಆಡತಕ್ಕ ಮಾತನ್ನೂ ಅವಲಂಬಿಸತಕ್ಕ ಉದ್ಯೋಗವನ್ನೂ ನಿಷ್ಕರ್ಷೆ ಮಾಡಿಕೊಂಡು ಮಲಗಬೇಕು, ಮಾರನೆಯ ದಿವಸ ಎದ್ದ ಕೂಡಲೆ, ರಾತ್ರಿಯ ಸಂಕಲ್ಪವನ್ನು ಸರಿಯಾಗಿ ನೆರವೇರಿಸುವ ಪ್ರಯತ್ನವನ್ನು ಮಾಡಿ, ಪುನಃ ಸಾಯಂಕಾಲ ಮಲಗುವಾಗ್ಗೆ, ಆ ದಿನ ತನ್ನ ಸಂಕಲ್ಪಗಳು ಎಷ್ಟು ಮಟ್ಟಿಗೆ ನೆರವೇರಿಸಲ್ಪಟ್ಟು ಎಂದು ಪರೀಕ್ಷಿಸುತ್ತ 'ಬರಬೇಕು. ಇಷ್ಟಾರ್ಧಸಿದ್ದಿ ಯನ್ನು ಹೊಂದಬೇಕೆಂಬ ಅಪೇಕ್ಷೆಯುಳ್ಳವರು, ಹಿಡಿದ ಕೆಲಸವನ್ನು ಬೇಸರಿಕೆಯಿಲ್ಲದೆ ಫಲೋದಯವಾಗುವವರೆಗೂ ಅಭಿ