ಪರಿಚ್ಛೇದ ೨ ଟ୍ ಯನ್ನು ಮಾಡುತ್ತಾರೋ, ಹಾಗೆ ಗಣಿತಶಾಸ್ತ್ರರಸವನ್ನು ಅಪೇಕ್ಷಿಸತಕ್ಕ ವರೂ ಕೂಡ ನಿಶ್ಚಲವಾಗಿ ಶೋಧನೆಯನ್ನು ಮಾಡಬೇಕು' ಎಂದು ಹೇಳಿದನು. ವಿದ್ಯಾರ್ಥಿಗಳು ಈ ವಿಷಯವನ್ನು ಸದಾ ಸ್ಮರಣೆಯಲ್ಲಿಟ್ಟು ಕೊಂಡಿರಬೇಕು, ಗಣಿತಶಾಸ್ತ್ರವು ಇತರ ಶಾಸ್ತ್ರಗಳಂತೆ ದಿವ್ಯದೃಷ್ಟಿಗೆ ಸಮಾನವಾದುದು, ಪಾಮರರಿಗೆ ತಿಳಿಯದಿರತಕ್ಕೆ ಅನೇಕ ವಿಷಯಗಳು ಪಂಡಿತರಿಗೆ ಗೊತ್ತಾಗುವುವು. ಸಕಲ ಶಾಸ್ತ್ರಜ್ಞರಾದ ಪಂಡಿತರು, ತಮ್ಮ ಪಾಂಡಿತ್ಯವನ್ನು ಆಚರಣೆಯಲ್ಲಿಟ್ಟು ಕೊಂಡು ಆಚಾರಿ ಪದವಿಗೆ ಅರ್ಹರಾ ದರೆ, ಅಪ್ರತಿಹತವಾದ ಶಕ್ತಿಯನ್ನು ಸಂಪಾದಿಸುವರು. ಚಕ್ರವರ್ತಿಪದವಿ ಗಿಂತಲೂ ಆಚಾರಪದವಯು ಅತ್ಯಂತ ಉತ್ತಮವಾದುದು. ಚಕ್ರವರ್ತಿಗಳು ಜಡಪ್ರಪಂಚಕ್ಕೆ ಅಧಿಪತಿಗಳಾಗಿರುವರು; ಶಾಸ್ತ್ರದೃಷ್ಟಿಯುಳ್ಳ ವಿದ್ವಾಂಸರು ಜ್ಞಾನವ್ರಪಂಚಕ್ಕೆ ಚಕ್ರವರ್ತಿಗಳಾಗುವರು. ಜಡಪ್ರಪಂಚದ ಚಕ್ರವರ್ತಿ ಪದವಿಗಿಂತಲೂ, 'ಜ್ಞಾನಪ್ರಪಂಚಕ್ಕೆ ಚಕ್ರವರ್ತಿಯಾಗಿರುವುದು ಉತ್ತಮ ವೆಂದು ಹೇಳಬೇಕಾದುದೇ ಇಲ್ಲ. ಈ ಚಕ್ರವರ್ತಿಪದವಿಯನ್ನು ಹೊಂದು ವುದು ಸರ್ವರಿಗೂ ಸಾಧ್ಯವು, ಈ ವಿಷಯಕ್ಕೆ ಎಲ್ಲರ ಗಮನವೂ ಕೊಡಲ್ಪಡಬೇಕು. - ಪ್ರತಿಯೊಬ್ಬನಿಗೂ, ಅವನ ಇಷ್ಟಾರ್ಧಪ್ರಾಪ್ತಿಗೆ ಸಾಧಕವಾದ ಕೆಲಸಗಳು ಗೊತ್ತಿಲ್ಲದಷ್ಟಿರುವುವು. ಪ್ರತಿಯೊಬ್ಬನೂ, ಅವುಗಳಲ್ಲಿ ತನಗೆ ಯಾವುದರಲ್ಲಿ ಸುಲಭವಾಗಿ ಪ್ರವೇಶ ದೊರೆಯುವುದೋ ಅದನ್ನು ಗೊತ್ತು ಮಾಡಿಕೊಂಡು ಕೃಷಿಮಾಡುವುದಕ್ಕು ಸಕ್ರಮಿಸಿದರೆ, ಬಹಳ ಸುಲಭವಾಗಿ ಅವನು ತನ್ನ ಇಷ್ಟಾರ್ಧವನ್ನು ಪಡೆಯಬಹುದು. ಆದರೆ, ಜನಗಳು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.