ಪರಿಚ್ಛೇದ ೨ ೧೦೩ ಮಾಡುವುದಕ್ಕಾಗುವುದಿಲ್ಲ, ಕಾಲದ ಪಟ್ಟಿಯಂತೆ ತಪ್ಪದೆ ಕೆಲಸಮಾಡ ತಕ್ಕ ವರು, ಈ ಕಟ್ಟಳೆಯನ್ನು ಅತಿಕ್ರಮಿಸಿ ಕೆಲಸಮಾಡತಕ್ಕವರಿಗಿಂತ ಬಹಳ ಹೆಚ್ಚು ಕೆಲಸವನ್ನು ಮಾಡುವರು. ಹೆನ್ರಿ ಬ್ರಹಂ ಎಂಬವರು, ವಿಲಾಯತಿಯ ಲಾರ್ಡ್ ರ್ಛಾ ನಲರಾಗಿ, ಬ್ರಿಟಿಷ್ ಚಕ್ರಾಧಿಪತ್ಯದ ಭಾರವನ್ನೆಲ್ಲ ವಹಿಸಿದ್ದರು ; ಹೌಸ್ ಆಫ್ ಲಾರ್ಡ್ಸ್ ಎಂಬ ಪಾರಿ ಮೆಂಟಿನಲ್ಲಿ ಅಗ್ರಾಸನವನ್ನು ವಹಿಸುತಿದ್ದರು ; ರ್ಛಾ ಸರಿ ಕೋರ್ಟಿನಲ್ಲಿ ಮುಖ್ಯನ್ಯಾಯಾಧಿಪತಿಯ ಕೆಲಸವನ್ನು ಮಾಡುತಿದ್ದರು, ಪ್ರತಿದಿವಸ ದಲ್ಲಿಯೂ ಅನೇಕಜನ ಬ್ಯಾರೆಸ್ಟರ್ ಮೊದಲಾದವರ ವಿಜ್ಞಾಪನೆಗಳನ್ನು ಕೇಳುತ್ತಿದ್ದರು ; ಅನೇಕ ರೆವ್ಯೂಗಳನ್ನು ಪ್ರತಿದಿನವೂ ಬರೆಯ.ತಿದ್ದರು. ಕನಿಷ್ಠ ಪಕ್ಷ ದಿನಕ್ಕೆ ಹತ್ತು ಮಾಟಿಂಗುಗಳಲ್ಲಿ ಅಗ್ರಾಸನವನ್ನು ವಹಿಸಿ ಕೆಲಸಗಳನ್ನು ಜರುಗಿಸುತ್ತಿದ್ದರು ; ಇದಲ್ಲದೆ, ರಾಜ್ಯಭಾರಕ್ಕೆ ಸಂಬಂಧ ಪಟ್ಟ ಸಾವಿರಾರು ಕೆಲಸಗಳಿಗೆ ಗಮನವನ್ನು ಕೊಡುತ್ತಿದ್ದರು. ಕಾಲದ ಪಟ್ಟಿಯಲ್ಲಿ ಇವುಗಳನ್ನೆಲ್ಲ ಕಾಣಿಸಿ, ಪ್ರತಿಯೊಂದು ಕೆಲಸದಲ್ಲಿಯ ಕ್ಯಸ್ತವಾದ ಕಾಲಕ್ಕೆ ಸರಿಯಾಗಿ ಗಮನವನ್ನು ಕೊಡುತ, ಕೆಲಸಗಳನ್ನು ವ್ಯವಸ್ಥೆ ಮಾಡುತಿದ್ದರು. ಕಾಲವ್ಯವಸ್ಥೆಯಿಲ್ಲದೆ ಕೆಲಸಮಾಡತಕ್ಕವರು, ಪ್ರತಿಯೊಂದು ಕೆಲಸವನ್ನೂ ಮಾಡಿ ಪೂರಯಿಸುವುದು ಅಸಾಧ್ಯವು. ಬ್ರವರೆಂಬ ಒಬ್ಬ ದೊಡ್ಡ ಮನುಷ್ಯರು, ಹೆಬ್ರಹಂ ರವರಂತೆ ಕ್ರೈಸ್ತ ಕಾಲಕ್ಕೆ ಕೆಲಸಮಾಡತಕ್ಕವರಾಗಿದ್ದರು. ಒಂದಾನೊಂದು ದಿವಸ, ಅವರ ದೇವಸ್ಥಾನದಲ್ಲಿದ್ದ ಗಡಿಯಾರದ ಪ್ರಕಾರ ಕ್ರೈಸ್ತವಾದ ಹೊತ್ತಿಗೆ ಅವರು ಬರಲಿಲ್ಲ, ಅವರ ಜನ್ಮದೊಳಗಾಗಿ ಅವರೆಂದಿಗೂ ಒಂದು ನಿಮಿಷವೂ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.