ಪರಿಚ್ಛೇದ ೨ ೧೦೯ ಘಂಟೆಯವರೆಗೂ ಏಕಾಗ್ರಚಿತ್ತದಿಂದ ವ್ಯಾಸಂಗಮಾಡತಕ್ಕವರು, ಹದಿನೈ ದಿಪ್ಪತ್ತು ವರುಷಗಳವರೆಗೂ ಹೆಚ್ಚಾಗಿ ಬದುಕಿದಂತಾಗುವುದೆಂದು, ಡಾಡ್ರಿಜ್ ಎಂಬ ಮಹಾವಿದ್ವಾಂಸರು ಅಪ್ಪಣೆ ಕೊಡಿಸಿರುವರು. ಪ್ರಷ್ಯಾ ದೇಶದ ಚಕ್ರವರ್ತಿಗಳಾದ ಎರಡನೆಯ ಫ್ರೆಡರಿಕ್‌ರವರು, ಬೆಳಗ್ಗೆ ನಾಲ್ಕು ಘಂಟೆಗಳಮೇಲೆ ಎಂದಿಗೂ ಹಾಸಿಗೆಯಲ್ಲಿರುತ್ತಿರಲಿಲ್ಲ. ಲಂರ್ಡ್ರ ಪಟ್ಟಣದ ಕಾರ್ಖಾನೆಯಲ್ಲಿ ಕೂಲಿಯವರಂತೆ ವೇಷವನ್ನು ಹಾಕಿಕೊಂಡು ಬಡಗಿಯ ಕೆಲಸವನ್ನು ಮಾಡುತ್ತ, ಹಡಗುಗಳ ರಚನೆಯನ್ನು ಕಲಿತುಕೊಂಡ ಪೀಟರ್ ದಿ ಗ್ರೇಟ್ ಎಂಬ ಪ್ರಷ್ಯಾದೇಶದ ಚಕ್ರವರ್ತಿಗಳು, ಬೆಳಗ್ಗೆ ಐದು ಘಂಟೆಯೊಳಗಾಗಿ ಎದ್ದು ರಾಜ್ಯಭಾರದ ಕೆಲಸಗಳನ್ನು ಮಾಡುತ್ತಿದ್ದರು. ನಮ್ಮ ಶ್ರೀರ್ಮ ಮಹಾರಾಜರವರೂ ಕೂಡ, ಐದುಘಂಟೆಗೆ ಮುಂಚೆಯೇ ಎದ್ದು, ಆರು ಘಂಟೆಯೊಳಗಾಗಿ ಕುದುರೆಯ ಸವಾರಿ ಮೊದಲಾದ ವ್ಯಾಯಾಮಗಳನ್ನು ಮಾಡಿಕೊಂಡು ಬಂದು, ರಾಜ್ಯಭಾರದ ಆಡಳಿತ ಗಳಿಗೆ ಗಮನಕೊಡುತಿರುವರು, ನಮ್ಮ ಪೂರ್ವದ ಮಹರ್ಷಿಗಳೂ, ರಾಜ ರ್ಷಿಗಳೂ, ಉಷಃಕಾಲಕ್ಕೆ ಸರಿಯಾಗಿ ಎದ್ದು, ಸ್ನಾನವನ್ನೂ ನಿತ್ಯ ಕರ್ಮಾ ದಿಗಳನ್ನೂ ಪೂರಯಿಸಿಕೊಂಡು, ಸೊದ್ಯೋದಯವಾಗುವುದರೊಳಗಾಗಿ ತಮ್ಮ ಕೆಲಸವನ್ನು ಮಾಡುವುದರಲ್ಲಿ ನಿರತರಾಗುತಿದ್ದರು, ನಮ್ಮ ಮೊದ ಅನೆಯ ದಿರ್ವಾರಾಗಿದ್ದ ಮೆ|| ರಂಗಾಚಾರ್ರವರು, ಬೆಳಗ್ಗೆ ನಾಲ್ಕು ಘಂಟಿಗೆದ್ದು, ತಿರುಗಿ ರಾತ್ರಿ ಹನ್ನೆರಡು ಘಂಟೆಯವರೆಗೂ ರಾಜ್ಯ ಕಾರ್ ಗಳಲ್ಲಿ ಕೆಲಸಮಾಡಿ, ತಮ್ಮ ಇಪ್ಪತ್ತೆರಡು ತಿಂಗಳ ದಿವಾನಗಿರಿಯೂ ರಾಮ ರಾಜ್ಯವಾಗಿ ಪರಿಣಮಿಸುವಂತೆ ಮಾಡಿದರು.
ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.