ಫರಿಚೆದ ೨ ೧೧೩ ವಶದಿಂದಲೂ, ಪ್ರಭುಪದವಿಗೂ ನಚಿವಸದವಿಗೂ ಬೇಕಾದ ಕೆಲವು ಮುಖ್ಯ ವಿಷಯಗಳಲ್ಲಿ ಜ್ಞಾನವಿಹೀನರಾಗಿರುವುದರಿಂದಲೂ, ಇವರು ದೊಡ್ಡ ಪದವಿಗೆ ಬರುವುದಕ್ಕವಕಾಶವಿಲ್ಲವಾಗುವುದು. ಆದಾಗ್ಯೂ, ಪ್ರಭುಪದವಿಗೂ ಸಚಿವಪದವಿಗೂ ಯಾವ ಜ್ಞಾನವತ್ಯಾವಶ್ಯಕವೋ, ಅಂಧ ಜ್ಞಾನವು ಇವರಲ್ಲಿ ವಿಶೇಷವಾಗಿರುವುದು ಪ್ರಭುಗಳೂ ಸಚಿವರೂ ಪ್ರಜಾ ರಂಜನೆಯನ್ನು ಮಾಡಿ ಕೃತಾರ್ಥರಾಗಬೇಕಾದರೆ, ಇವರಿಂದಲೂ ತಿಳಿದು ಕೊಳ್ಳತಕ್ಕ ವಿಷಯಗಳು ವಿಶೇಷವಾಗಿರುವುವು. ಹೀನಸ್ಥಿತಿಯಲ್ಲಿರತಕ್ಕೆ ವರು ನಿರಕ್ಷರಕುಕ್ಷಿಗಳೆಂದು ಭಾವಿಸಿ ಯಾರು ಅವರನ್ನು ನಿರಾವರಿಸು ತಾರೋ, ಅವರು ಲೋಕವ್ಯವಹಾರಜ್ಞಾನವುಳ್ಳವರೆಂದು ಹೇಳುವುದಕ್ಕಾ ಗುವದಿಲ್ಲ. ಬಾಲ್ಯದಿಂದಲೂ ಯಾರು ಸಮಸ್ಯರೊಡನೆಯ ಸಂಭಾಷಣೆ ಮಾಡುತ, ಯಾರು ಯಾರಿಗೆ ಯಾವ ಯಾವ ಎಷಯದಲ್ಲಿ ಪರಿಶ್ರಮವಿರು ವುದೋ ಅದನ್ನು ತಿಳಿದುಕೊಳ್ಳುತ ಬರುವರೋ, ಅವರು, ಸರ್ವಜ್ಞತೆ ಯನ್ನು ಹೊಂದದಿದ್ದಾಗ ಇತರಜನಗಳಿಗಿಂತ ಹೆಚ್ಚಾದ ಪ್ರಜ್ಞೆಯನ್ನು ಹೊಂದಿ ಲೋಕೋತ್ತರವಾದ ಪದವಿಗೆ ಬರುವರು, ಪುಸ್ತಕಗಳಿಂದ ಬರ ತಕ್ಕ ಜ್ಞಾನಕ್ಕಿಂತಲೂ, ಜನಗಳೊಡನೆ ಸಂಭಾಷಣದಿಂದ ಅತ್ಯುತ್ತಮವಾದ ಜ್ಞಾನವು ಲಭ್ಯವಾಗುವುದು, ಪುಸ್ತಕದ ಜ್ಞಾನವು ಗ್ರಂಥಕರ್ತನ ಅಭ ಪ್ರಾಯವನ್ನು ಒಳಗೊಂಡಿರುವುದು, ಮಹಾಜನಗಳ ಸಂಭಾಷಣದಿಂದ ಉಂಟಾಗತಕ್ಕ ಅಭಿಪ್ರಾಯವಾದರೋ, ಅನೇಕಮುಖವಾಗಿರುವುದು. ಆದುದರಿಂದ, ವಿದ್ಯಾರ್ಥಿಗಳು, ಕೂಡಿದಮಟ್ಟಿಗೂ ಸದ್ಧಂಧಗಳಿಂದ ಲಭ್ಯ ವಾಗತಕ್ಕೆ ಜ್ಞಾನದ ಜತೆಗೆ, ಮಹಾಜನಗಳ ಸಂಭಾಷಣದಿಂದುಂಟಾಗತಕ್ಕ 11 ಕ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.