ಪರಿಚ್ಛೇದ ೨ ೧೨೭ ನಿ ಸತ್ವಭೂತದಯೆಯುಳ್ಳವನಾಗಿ, ವಿದ್ವಾಂಸನಾಗಿ, ಸಮರ್ಧನಾಗಿ, ಪ್ರಿಯ ವಾದ ವಾಕ್ಕೂ ದರ್ಶನವೂ ಉಳ್ಳವನಾಗಿ, ಶಾಸ್ತ್ರಜ್ಞಾನವನ್ನು ಪಡೆದವ ನಾಗಿ, ಕೋಪತಾಪಗಳನ್ನು ಗೆದ್ದವನಾಗಿ, ಅಸೂಯಾರಹಿತನಾಗಿ, ಸತ್ವ ರಲ್ಲಿಯೂ ಪ್ರೀತಿಯುಳ್ಳವನಾಗಿ, ಸಲ್ವರಿಗೂ ಅಭಯಂಕರನಾಗಿ ಇರತಕ್ಕ ಮನುಷ್ಯನು, ಕೋಟಿಗೊಬ್ಬನು ಸಿಕ್ಕುವುದು ಕಷ್ಟ, ಆದರೆ, ಈ ಗುಣಾ ತಿಶಯಗಳುಳ್ಳ ಮನುಷ್ಯರು, ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳ ಲ್ಲಿಯೂ ಅಲ್ಲಲ್ಲಿಯೇ ಇರುವುದುಂ', ಇವರನ್ನೇ, ಅವತಾರ ಪುರುಷ ರೆಂದು ಹೇಳುವರು. ತನ್ನಲ್ಲಿರತಕ್ಕ ಶತ್ರುಗಳನ್ನು ಗೆದ್ದವರು, ಲೋಕ ವನ್ನೂ ಗೆಲ್ಲಬಲ್ಲರು. ಈ ಗುಣಾತಿಶಯಗಳಲ್ಲದೆ, ಇಂದ್ರಿಯಪರವಶರಾಗಿ, ಮಾಡಬಾರದ ಕೆಲಸಗಳನ್ನು ಮಾಡಿ, ಮನುಷ್ಠಾಧನರಾಗಿರತಕ್ಕವರು, ದಿಗ್ವಿಜಯವಾಡಿದವರೆಂಬುದಾಗಿಯೂ, ಜಗದೇಕವೀರರೆಂಬುದಾಗಿಯೂ, ಜಗದೇಕಗುರುಗಳೆಂಬುದಾಗಿಯೂ ವಿಜೃಂಭಿಸುವುದನ್ನು ನೋಡಿದರೆ, ಒತ್ಸರವಾಗುತ್ತದೆ | ಚಂದ್ರಗುಪ್ತನು ತನ್ನ ಚಕ್ರಾಧಿಪತ್ಯವನ್ನೆಲ್ಲ ಒಪ್ಪಿಸುವುದಕ್ಕೆ ಸಿದ್ದ ನಾಗಿದ್ದರೂ, ಅವನಿಂದ ಒಂದು ಕಾಸನ್ನೂ ತೆಗೆದುಕೊಳ್ಳದೆ, ಕಂದ ಮೂಲಗಳನ್ನು ತಾನೇ ತಂದು ಆಹಾರಾರ್ಧವಾಗಿ ಉಪಯೋಗಿಸಿಕೊ ಳ್ಳುತ್ರ, ತಾನೇ ಸರ್ಣಶಾಲೆಯನ್ನು ಹಾಕಿಕೊಂಡು ಅದರಲ್ಲಿ ವಾಸಮಾ ಡುತ್ತ, ನಿರ್ದುಷ್ಟವಾದ ಧರ ದಿಂದ ಚಕ್ರಾಧಿಪತ್ಯದ ರಾಜ್ಯಭಾರಕ್ರಮ ಗಳು ನಡೆಯುವಂತೆ ಏರ್ಪಾಡುಮಾಡಿ, ಇಂಧ ಧರ್ಮರಾಜ್ಯದ ಭಾರವನ್ನು ವಹಿಸಿರತಕ್ಕ ಚಕ್ರವರ್ತಿಯನ್ನು ದ್ವಾರಪಾಲಕನನ್ನಾಗಿ ಮಾಡಿಕೊಂಡಿದ್ದ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.