೧೩೦ ೧೩೦ ವಿದ್ಯಾರ್ಥಿ ಕರಭೂಷಣ ನಾಗಿ ಪರಿಣಮಿಸುವನು, ನಿವಾರಣೀಯವಾದ ವಿಘ್ನಗಳಿಂದ ಹಿಡಿದ ಕೆಲಸಗಳನ್ನು ಬಿಡತಕ್ಕವರು, ಸಾಮಾನ್ಯರೆನ್ನಿ ಸುವರು. ಎಂಧ ವಿಘ್ನಗಳು ಬಂದರೂ ಧೈರವನ್ನವಲಂಬಿಸಿ ಹಿಡಿದ ಕೆಲಸವನ್ನು ಸಾಧಿಸತಕ್ಕವರು, ಮಹಾಪುರುಷರೆನ್ನಿ ಸುವರು, ಪ್ರತಿಯೊಬ್ಬ ಮನುಷ್ಯನೂ, ತಾನು ಇಂಧ ಮಹಾಪುರುಷನಾಗಬೇಕೆಂದು ಪ್ರಯತ್ನ ಮಾಡಬೇಕು, ಹಾಗೆ ಪ್ರಯತ್ನ ಮಾಡತಕ್ಕವರ ಉದ್ಯೋಗವು, ಫಲಕಾರಿಯಾಗದೆ ಹೋಗುವುದಿಲ್ಲ. ಒಂದು ಸಂಕಲ್ಪವನ್ನು ಮಾಡಿ, ಆ ಸಂಕಲ್ಪವನ್ನು ಸಾಧಿಸುವುದಕ್ಕೋಸ್ಕರ ಮನಸ್ಸನ್ನು ವಿಷಯಾಂತರಗಳಲ್ಲಿ ಬಿಡದೆ, ಪೂರಯಿಸುವವರೆಗೂ ಕೆಲಸ ಮಾಡತಕ್ಕವರಲ್ಲಿ ಯಾರೂ ಭಗ್ನ ಮನೋರಧರಾಗಿರುವುದಿಲ್ಲ, ಈ ವಿಷಯ ವನ್ನು ಮನಸ್ಸಿನಲ್ಲಿಟ್ಟುಗೊಂಡು, ಸಲ್ವರೂ ತಮ್ಮ ಇಷ್ಟಾರ್ಥಸಿದ್ಧಿಗೋಸ್ಕರ ಸೈಯ್ಯದಿಂದ ಕೆಲಸಮಾಡುವುದನ್ನು ಅಭ್ಯಾಸಮಾಡಬೇಕು, ನಿಶ್ಚಲವಾದ ತಪಸ್ಸು, ಸಕಲವಾದ ಇಷ್ಟಾರ್ಥ ಸಿದ್ಧಿಗಳಿಗೂ ಮುಖ್ಯ ಕಾರಣವು. ಇದನ್ನು ಎಲ್ಲರೂ ತಿಳಿದುಕೊಂಡು ಆಚರಣೆಗೆ ತಂದುಕೊಳ್ಳಬೇಕು. ಪೂರ್ವಾಪರಗಳನ್ನು ಪರಾಲೋಚಿಸಿ ಕೆಲಸಮಾಡುವ ಶಕ್ತಿಯು, ಇತರ ಎಲ್ಲ ಶಕ್ತಿಗಳಿಗಿಂತಲೂ ಬಹಳದೊಡ್ಡದು, ತಿರmಂತುಗಳಿಗೂ ನಮಗೂ ಇರತಕ್ಕೆ ಭೇದವನ್ನು ಪರಾಲೋಚಿಸಿದರೆ, ನಮಗೆ ಈ ಶಕ್ತಿ ಯಿರುವುದೆಂಬುದಾಗಿಯೂ, ಅವುಗಳಿಗೆ ಈ ಶಕ್ತಿಯಿಲ್ಲ ಎಂಬುದಾಗಿಯ ಸ್ಪಷ್ಟವಾಗಿ ಗೊತ್ತಾಗುವುದು, ಯೋಚನೆಯನ್ನು ಮಾಡುವ ಮನುಷ್ಯ ರಿಗೆ, ತಾವು ಮಾಡತಕ್ಕ ಕೆಲಸಗಳ ಪರಿಣಾಮಫಲವು ಗೊತ್ತಾಗುವುದು. ತಿರಸ್ಟಂತುಗಳಿಗೆ ಇದು ಚೆನ್ನಾಗಿ ಗೊತ್ತಾಗುವುದಿಲ್ಲ, ತಿರಸ್ಟಂತು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.