೧೩೪ ೧೩೪ ವಿದ್ಯಾರ್ಥಿ ಕರಭೂಷಣ ಗಳಲ್ಲೆಲ್ಲ ಈ ವಿಷಯವನ್ನು ಪರಾಲೋಚಿಸುತ್ತಿದ್ದನು. ಒಂದಾನೊಂದು ದಿವಸ ಸೇಬಿನಗಿಡದ ಕೆಳಗೆ ಯೋಚಿಸುತ್ತ ಮಲಗಿರುವಾಗ, ಒಂದು ಸೇಬಿನಹಣ್ಣು ಗಿಡದಿಂದ ಇವನಮೇಲೆ ಬಿದ್ದಿತು. ಆಗ ಅದು ಬಿದ್ದುದಕ್ಕೆ ಕಾರಣವನ್ನು ಪರಾಲೋಚಿಸಲುಸಕ್ರಮಮಾಡಿದನು ; ಕೂಡಲೆ ವಾಸ್ತ್ರ ವಾಂಶ ಗೊತ್ತಾಯಿತು. ಈ ಭೂಮಿಯಲ್ಲಿ ಪ್ರತಿಯೊಂದು ವಸ್ತುವಿಗೂ ಆಕರ್ಷಣಶಕ್ತಿಯಿರುವುದು, ಈ ಶಕ್ತಿಯು ವಸ್ತುಗಳ ಗಾತ್ರಕ್ಕೂ ತೂಕಕ್ಕೂ ಅನುಸಾರವಾಗಿರುವುದು, ಅಣುವಿನಲ್ಲಿ ಅಣುವಿನಷ್ಟು ಶಕ್ತಿಯ, ಭೂಮಂಡಲದಲ್ಲಿ ಭೂಮಂಡಲದಷ್ಟು ಶಕ್ತಿಯೂ ಇರು ವುದು, ಅಣು ಮೊದಲಾದ ಚಿಕ್ಕ ಪದಾರ್ಥಗಳು ಭೂಮಿಯನ್ನು ಆಕರ್ಷಿಸುವುವು ; ಭೂಮಿಯ ಆ ಪದಾರ್ಥಗಳನ್ನು ಆಕರ್ಷಿಸುವುದು. ಭೂಮಿಯ ಆಕರ್ಷಣಶಕ್ತಿ ಬಹಳ ಪ್ರಬಲವಾದುದರಿಂದ, ಪದಾರ್ಧಗಳು ಭೂಮಿಯಕಡೆಗೆ ಬೀಳುವುವು, ಭೂಮಿ ಮೊದಲಾದ ಗ್ರಹಗಳೂ, ಸೂರ ಮೊದಲಾದ ನಕ್ಷತ್ರಗಳೂ ಪರಸ್ಪರ ಆಕರ್ಷಣಶಕ್ತಿಯಿಂದ ತಮ್ಮ ತಮ್ಮ ಮಾರ್ಗಗಳಲ್ಲಿ ಸಂಚಾರಮಾಡುತ್ತಿರುವುವು, ಅವುಗಳಲ್ಲಿಯೂ ಒಂದರ ಆಕರ್ಷಣಶಕ್ತಿ ಮತ್ತೊಂದರ ಶಕ್ತಿಗಿಂತ ಹೆಚ್ಚಾದರೆ, ಹೆಚ್ಚಾದ ಆಕರ್ಷಣ ಶಕ್ತಿಯುಳ್ಳು ವುಗಳಲ್ಲಿ, ಕಡಮೆಯಾದ ಶಕ್ತಿಯುಳ್ಳು ವುಗಳು ಐಕ್ಯ ಹೊಂದುವುವು. ಈ ವಿಷಯಗಳೆಲ್ಲವೂ, ಏಕಾಗ್ರವಾಗಿ ಯೋಚನೆಮಾಡಿ ದುದರಿಂದ ಆಗ ನ್ಯೂಟನ್ನಿಗೆ ಗೊತ್ತಾದುವು. ವಿಚಾರಮಾಡುವುದರಿಂದ, ತಿಳಿಯದಿರತಕ್ಕೆ ಅನೇಕ ವಿಷಯಗಳು ತಿಳಿಯುತ್ತವೆ ; ಅನೇಕ ಭಾಗಗಳಲ್ಲಿ ಅಜ್ಞಾನಪರಿಹಾರವಾಗುತ್ತದೆ ;
ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.