ಸರಿಟ್ಟೆಗ ೧ ಪ್ರದೋ-ಹಾಗೆಯೇ ಕೆಟ್ಟ ವ್ಯಾಪಾರವೂ ಇರುವುದು, ಇಂದ್ರಿಯಗಳು ನಮ್ಮನ್ನು ಕೆಟ್ಟ ವ್ಯಾಪಾರಕ್ಕೆ ಎಳೆಯದಂತೆ ಮಾಡುವ ಶಕ್ತಿ ಬುದ್ದಿಗೆ ಬರುವಹಾಗೆ ನಾವು ಮಾಡಿ ಕೊಳ್ಳಬೇಕು, ಹಾಗೆ ಮಾಡಿಕೊಳ್ಳುವ ಶಕ್ತಿಯು ಬುದ್ಧಿಗೆ ಬಾರದಿದ್ದರೆ, ಈ ಯಿಂದ್ರಿಯಗಳು ಮನುಷ್ಯನನ್ನು ದುರ್ವ್ಯಾಪಾರಗಳಿಗೆ ಎಳೆಯುವುವು. ಹಾಗೆ ಎಳೆಯಲ್ಪಟ್ಟು ಇಂದ್ರಿಯ ಪರವಶರಾದವರು, ತಮ್ಮ ಅಧೀನದಲ್ಲಿರತಕ್ಕವರಿಗೆ ಸವಿಾಚೀನವಾದ ಮೇಲುನಂಕ್ತಿಯನ್ನು ಹಾಕಲು ಎಂದಿಗೂ ಅರ್ಹರಾಗುವುದಿಲ್ಲ. ಜಿತೇಂ ದ್ರಿಯರಾದವರು ಮನುಷ್ಯರೆನ್ನಿಸಿಕೊಳ್ಳುವುದಕ್ಕೆ ಅರ್ಹರೇ ಹೊರತು, ಅಜಿತೇಂದ್ರಿಯರು ಎಂದಿಗೂ ಪುರುಷರೆನ್ನಿಸಿಕೊಳ್ಳಲಾರರು. ಇಂದ್ರಿಯ ಪರವಶರಾದವರಿಗೂ ಪಶುಗಳಿಗೂ ವಿಶೇಷ ತಾರತಮ್ಯವಿರುವುದಿಲ್ಲ. ಮನುಷ್ಯನು, ಜನ್ಮವನ್ನೆತ್ತಿದುದು ಮೊದಲುಗೊಂಡು ಕಳೇಬರವನ್ನು ಬಿಡುವವರೆಗೂ, ಯಾವುದಾದರೊಂದು ಉದ್ಯೋಗವನ್ನು ಮಾಡು ತಲೇ ಇರಬೇಕು , ಹಾಗೆ ಮಾಡದೆ ಇರುವುದಕ್ಕಾಗುವುದೂ ಇಲ್ಲ ಕೈಕಾಲು ಗಳಿಗೆ ಕೆಲಸವನ್ನು ಕೊಡದಿದ್ದರೆ, ಅವುಗಳು ಸ್ವಲ್ಪ ಮಟ್ಟಿಗೆ ಚೇಷ್ಟೆ ಯಿ ಅದೆ ಇರಬಹುದು ; ಬುದ್ದಿಗೆ ಕೆಲಸವನ್ನು ಕೊಡದಿದ್ದರೋ, ಅದು ತಾನಾಗಿಯೇ ಕೆಲಸವನ್ನು ಸಂಪಾದಿಸಿಕೊಳ್ಳುವುದು ಬುದ್ಧಿಗೂ ಕೈಕಾಲು ಗಳಿಗೂ ಒಳ್ಳೆಯ ಕೆಲಸಗಳಲ್ಲಿ ಪ್ರವೇಶವನ್ನುಂಟುಮಾಡುವುದು, ಪ್ರಧಮತಃ ತಾಯಿ ತಂದೆಗಳ ಕೆಲಸ ; ತರುವಾಯ ಸರಕಾರದವರ ಕೆಲಸ, ಇವರೆ ಲ್ಲರೂ ಉಪೇಕ್ಷೆ ಮಾಡಿದರೆ, ಲಕ್ಷಕ್ಕೊಬ್ಬ ವಿದ್ಯಾರ್ಥಿಯು, ತನ್ನ ಸಂಸ್ಕಾರ ಬಲದಿಂದ, ಸ್ವಶಕ್ತಿಯಿಂದಲೇ ತನ್ನ ಬುದ್ಧಿಗೂ ಕೈ ಕಾಲುಗಳಿಗೂ ಒಳ್ಳೆಯ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.