ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ wwwmmmmmmmmmmmmmmmmmmmm ಪರಿಚ್ಛೇದ ೩ ಯವಾದುದು, ಚಿಂತನೆಯೇ ತಪಸ್ಸು, ವ್ಯಾಸಂಗಕ್ಕೆ ಸಂಬಂಧಪಟ್ಟ ವಿಷ ಯಗಳಲ್ಲಿ ಮನಸ್ಸು ನಿಲ್ಲುವಂತೆ ಮಾಡಿಕೊಂಡ ಹೊರತು, ವ್ಯಾಸಂಗವಿಷ ಯವಾದ ಗ್ರಂಧಗಳು ಸ್ವಾಧೀನಕ್ಕೆ ಬರುವುದಿಲ್ಲ, ಹೀಗೆ ಮನಸ್ಸನ್ನು ಗ್ರಂಧಗಳಲ್ಲಿ ಹೇಳಲ್ಪಟ್ಟಿರತಕ್ಕ ತಾತ್ಸರಗಳ ಮೇಲೆ ನಿಲ್ಲಿಸುವುದಕ್ಕೆ ಶಕ್ತಿ ಯಿಲ್ಲದವರು, ಎಂದಿಗೂ ಪಂಡಿತೋತ್ತಮರಾಗಲಾರರು. ಇದಲ್ಲದೆ ಚಿಂತ ನೆಗೆ ಆನುಕೂಲ್ಯಗಳನ್ನು ಕಲ್ಪಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಪ್ರಧನ ಕರ್ತವ್ಯವು, ಜನಸಂಮರ್ದವಿಲ್ಲದೆ ಏಕಾಂತವಾಗಿರತಕ್ಕ ಕೊಟಡಿಯನ್ನು ಸಂಪಾದಿಸಿಕೊಳ್ಳಬೇಕು, ಅನು ಕೂಲವಾದ ಪುಸ್ತಕಭಂಡಾರವನ್ನಿಟ್ಟು ಕೊ ಳ್ಳಬೇಕು, ಚಿಂತನೆಮಾಡುವ ಕಾಲದಲ್ಲಿ ಯಾರೂ ಅಲ್ಲಿಗೆ ಬಾರದಂತೆ ಏರ್ಪಾಡು ಮಾಡಿಕೊಳ್ಳಬೇಕು, ಸ್ನೇಹಿತರೂ ಬಂಧು ಮಿತ್ರರೂ ಅಲ್ಲಿಗೆ ಬಾರದಂತೆ ಮಾಡಿಕೊಳ್ಳಬೇಕು, ಮನೋಭಾವವೂ ಕೂಡ ವ್ಯಾಸಂಗ ಕ್ಕನುಸಾರವಾಗಿರುವಂತೆ ಮಾಡಿ ಕೊಳ್ಳಬೇಕು, ಇಷ್ಟು ಏರ್ಪಾಡುಗಳನ್ನು ಮಾಡಿಕೊಂಡು, ಅರ್ಧವತ್ತಾಗಿ ಗ್ರಂಧವನ್ನು ಓದಿ, ಅದು ಸಂಪೂರ್ಣವಾಗಿ ಸ್ವಾಧೀನಕ್ಕೆ ಬರುವವರೆಗೂ ಚಿಂತನೆಮಾಡುತ ಬಂದರೆ, ಅದು ಸ್ವಾಧೀ ನವಾಗುವದು, ಪ್ರತಿದಿವಸವೂ ಹಳೆಯ ಪಾರಗಳ ಚಿಂತನೆಗೆ ಆವಶ್ಯಕ ವಾದಷ್ಟು ಅವಕಾಶವನ್ನು ಮಾಡಿಕೊಳ್ಳಬೇಕು, ವಿದ್ಯೆ ಮೊದಲಾದುವುಗ ಳನ್ನು ಆರ್ಜಿಸುವುದು ಸುಲಭ; ಆರ್ಜಿಸಿಸುದನ್ನು ರಕ್ಷಿಸಿಕೊಂಡು ಉಪ ಯೋಗಕ್ಕೆ ಬರುವಂತೆ ಮಾಡಿಕೊಳ್ಳುವುದು ಕಷ್ಟ, ನೂರಕ್ಕೆ ತೊಂಬ ತೊಂಬತ್ತು ಜನಗಳು, ಕಷ್ಟ ಪಟ್ಟು ಆರ್ಜಿಸಿದ ವಿದ್ಯೆ ಮೊದಲಾದುವುಗ ಳನ್ನು ರಕ್ಷಿಸಿಕೊಳ್ಳುವುದಕ್ಕೆ ತಕ್ಕ ಪ್ರಯತ್ನವನ್ನು ಮಾಡುವುದಿಲ್ಲ. ಈ