ಪರಿಚ್ಛೇದ ೩. ೧೫n ಒmmmmmmmmm ಅವೂಲ್ವೆ ; ಅಪರವಯಸ್ಸಿನಲ್ಲಿ ಬೆನ್ನು ಮೂಳೆ ನೆಟ್ಟಗಿರತಕ್ಕವರೂ ಅಪೂರೈ. ಬೆನ್ನು ಮೂಳೆಗಳು ಬೊಗ್ಗು ವುದಕ್ಕೆ, ಬೊಗ್ಗಿ ಕೊಂಡು ಕೆಲಸಮಾಡುವುದೂ ಬೊಗ್ಗಿ ಕೊಂಡು ಓದುವುದೂ ಮುಖ್ಯ ಕಾರಣಗಳು, ವಿದ್ಯಾರ್ಥಿಗಳು ಈ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿರಬೇಕು. ಅನೇಕ ವಿದ್ಯಾರ್ಥಿಗಳು, ನಿಂತುಗೊಂಡೂ ತಿರುಗಾಡುತಲೂ ಓದುವುದುಂಟು. ಇದು ಅತ್ಯುತ್ತಮ ವಾದ ಏಾಡು ಇದರಿಂದ ವ್ಯಾಸಂಗದಜತೆಗೆ ಸ್ವಲ್ಪ ಮಟ್ಟಿಗೆ ವ್ಯಾಯಾ ಮವೂ ಸೇರಿದಂತಾಗುವುದು, ವ್ಯಾಸಂಗಮಾಡುವಾಗ್ಗೆ, ಪುಸ್ತಕದ ಮೇಲೆ ಎಡಗಡೆಯಿಂದ ಬೆಳಕು ಬೀಳುವಂತೆ ಮಾಡಿಕೊಳ್ಳುವುದುತ್ತಮವು ಹಾಗಿಲ್ಲದಿದ್ದರೆ, ಸುಸ್ತುಕದಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ಕಣ್ಣಿನಮೇಲೆ ಬೀಳುವುದು, ಅದರಿಂದ ಕಣ್ಣಿಗೆ ಬಾಧಕವಾಗುವುದು, ವಿದ್ಯಾರ್ಥಿದಶಿ ಯಲ್ಲಿ ಕಣ್ಣಿನ ಆರೋಗ್ಯವನ್ನು ನೋಡಿಕೊಳ್ಳುವುದು ಎಲ್ಲರಿಗೂ ಮುಖ್ಯ ಕರ್ತವ್ಯವು, ಈ ವಿಷಯದಲ್ಲಿ ಉದಾಸೀನರಾದರೆ, ದೂರದೃಷ್ಟಿ ಕಡಮೆ ಯಾಗುವುದು ; ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಡಕವನ್ನು ಹಾಕಿಕೊಳ್ಳ ಬೇಕಾಗುವುದು ; ಇದಲ್ಲದೆ, ನೇತ್ರಪಾಟವವೇ ಕಡಮೆಯಾಗುವ ಸಂಭವ ವುಂಟಾಗುವುದು ವಿಶೇಷವಾಗಿ ವ್ಯಾಸಂಗಮಾಡತಕ್ಕವರು, ಎರಡು ಮರು ಘಂಟೆಗಳಿಂದಾವೃತ್ತಿ ನಿರ್ಮಲವಾದ ತಣ್ಣೀರಿನಿಂದ ಕಣ್ಣನ್ನು ತೊಳೆದುಕೊಳ್ಳುತಿರುವುದುತ್ತಮವು, ವ್ಯಾಸಂಗಮಾಡತಕ್ಕ ಕಾಲದಲ್ಲಿ, ಉಡುಗೆಗಳ ವಿಷಯದಲ್ಲಿ ಬಹಳಜಾಗರೂಕರಾಗಿರಬೇಕು, ಯಾವ ಉಡುಗೆಯ ಕೂಡ ಬಿಗಿಯಾಗಿರಕೂಡದು, ಹಾಗಿದ್ದರೆ ಶರೀರದಲ್ಲಿ ರಕ್ತಸಂಚಾರವು ಸರಿಯಾಗಿ ಆಗುವುದಿಲ್ಲ, ನಿರ್ಮಲವಾದ ರಕ್ತವು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.