೧೨ ಕರಭೂಷಣ ಲ್ಪಟ್ಟಿದ್ದಿತ), ವಿಲಾಯತಿಯ ವೆಂಚಸ್ಟರ್ ಮರಾಧಿಸತಿಯ ಭಂಡಾರದಲ್ಲಿ ಹದಿನೇಳು ಪುಸ್ತಕಗಳಿದ್ದುವು, ಸೇಂಟ್ ಸ್ವೀಥಿನ ಮರದಿಂದ ಬೈಬಲ್ ಎಂಬ ಕ್ರೈಸ್ತ ವೇದವನ್ನು ಕೆಲವು ದಿವಸಗಳವರೆಗೂ ಸಾಲವಾಗಿ ತೆಗೆದು ಕೊಳ್ಳುವುದಕ್ಕೆ, ಅವನು ಮರದ ಆಸ್ತಿಯನ್ನೆಲ್ಲ ಆಧಾರಮಾಡಿದನು. ಯಾವುದಾದರೂ ಮರಕ್ಕೆ ಒಂದು ಪುಸ್ತಕವನ್ನು ಕೊಟ್ಟರೆ, ಹಾಗೆ ಪುಸ್ತಕವನ್ನು ಕೊಟ್ಟ ವನು ಜಹಗೀರುಗಳನ್ನು ಕೊಟ್ಟವನಿಗಿಂತಲೂ ಹೆಚ್ಚಾಗಿ ಗಣಿಸಲ್ಪಡುತಿದ್ದನು. ರಾಚಸ್ಟರ್ ಮರಾಧಿನತಿಯು, ಅರಿಸ್ಕೋ ಟಲಿನ ಗ್ರಂಧವನ್ನು ಕದ್ದವನಿಗೂ, ಆ ಗ್ರಂಧವನ್ನು ಬಚ್ಚಿಟ್ಟವನಿಗೂ, ಭಯಂಕರವಾದ ಶಿಕ್ಷೆಯನ್ನು ಮಾಡಿದನು. ಒಂದೆರಡು ಪುಸ್ತಕಗಳು ಇದ್ದಾಗ್ಯೂ, ಅಂಧ ಪುಸ್ತಕಭಂಡಾರಗಳಿಗೆ ಒಲವಾದ ಕೊಟ್ಟಡಿಗಳನ್ನು ಮಾಡಿ, ಸರಕಾರದ ಖಜಾನೆಗೆ ಹಾಕತಕ್ಕ ಬೀಗಗಳನ್ನು ಹಾಕುತಿದ್ದರು. ಲಕರ್ಗಸ್ ಮತ್ತು ವಿಧಾಗೊರಾಸ್ ಎಂಬಿಬ್ಬರು, ಜನ್ಮಾಂತರ ವಿಷಯ ವನ್ನು ತಿಳಿದುಕೊಳ್ಳುವುದಕ್ಕೆ ಈಜಿಪ್ಟ್ ರ್ಪಾ ಇಂಡಿಯಾ ದೇಶಗಳಲ್ಲಿ ಯಾತ್ರೆಯನ್ನು ಮಾಡಿದರು. ಸೋರ್ತಿ ಮತ್ತು ಪ್ಲೇಟೋ ಎಂಬವರು, ಈಜಿಪ್ಟ್ ದೇಶಕ್ಕೆ ಹೋಗಿ, ಒಳ್ಳೆಯ ಪಾಂಡಿತ್ಯವನ್ನು ಸಂಪಾದಿಸಿಕೊಂಡು ಬಂದರು. ಹೆರಡೋಟಿನ್ ಮತ್ತು ಸೈಬೋ ಎಂಬವರು, ದೇಶಾಟನ ವನ್ನು ಮಾಡಿ, ಚರಿತ್ರೆಯನ್ನೂ ಭೂಗೋಳವನ್ನೂ ತಿಳಿದುಕೊಂಡರು. ಪೂರೈಕಾಲದಲ್ಲಿ, ಹತ್ತು ಹನ್ನೆರಡು ಪುಸ್ತಕಗಳುಳ್ಳವನು, ಚಕ್ರವರ್ತಿಗಿಂ ತಲೂ ದೊಡ್ಡವನೆಂದು ಗಣಿಸಲ್ಪಡುತ್ತಿದ್ದನು. ಆ ಕಾಲದಲ್ಲಿ ಪುಸ್ತಕ ಗಳಿಗೆ ಇಷ್ಟು ಅಭಾವವಿದ್ದಾಗ್ಯೂ, ಜನಗಳು ನಮಗಿಂತಲೂ ಬುದ್ಧಿಶಾಲಿ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.