೧೭೮ ೧೭೮ ವಿದ್ಯಾರ್ಥಿ ಕರಭೂಷಣ ಕ್ರಮಿಸಿದ್ದಾರೆ. ಆದರೆ ಉತ್ತಮಗ್ರಂಧಗಳು ಬಹಳ ವಿರಳವಾಗಿವೆ. ಮಧ್ಯಮ ವಾಗಿಯೂ ಅಧಮವಾಗಿಯೂ ಇರತಕ್ಕ ಗ್ರಂಧಗಳು, ಅಸಂಖ್ಯಾಕವಾಗಿ ಮುದ್ರಿಸಲ್ಪಡುತ್ತಲಿವೆ. ಯಾವ ಪುಸ್ತಕವನ್ನು ಓದಬೇಕೋ, ಯಾವು ದನ್ನು ಬಿಡಬೇಕೋ, ಅದನ್ನು ಗೊತ್ತು ಮಾಡುವುದೇ ಕಷ್ಟವಾಗಿದೆ. ಆದಾಗ್ಯೂ, ಸದ್ಧಂಧವ್ಯಾಸಂಗಮಾಡಬೇಕೆಂಬ ಅಪೇಕ್ಷೆಯುಳ್ಳವರು, ಯಾವುದು ಅವಲೋಕನಕ್ಕ ರ್ಹ ವೋ-ಯಾವುದು ಅಲ್ಲವೋ-ಅದನ್ನು ಗೊತ್ತುಮಾಡಿಕೊಳ್ಳಬೇಕು, ಹಾಗೆ ಗೊತ್ತುಮಾಡಿಕೊಳ್ಳುವುದಕ್ಕೆ ಉಪಾಯಗಳುಂಟು, ಅವುಗಳನ್ನು ಪಯೊಗಿಸಿದವರು, ಅವುಗಳ ವಿಷಯ ವನ್ನು ಹೇಳುವುದುಂಟು. ಹಾಗೆ ಹೇಳ೨ಕ್ಕವರು ಗುಣದೋಷಗಳನ್ನು ತಿಳಿದು ಕೊಳ್ಳುವುದಕ್ಕೆ ಸಮರ್ಥರಾಗಿದ್ದರೆ, ಅವರ ಅಭಿಪ್ರಾಯದಂತೆ ನಡೆಯಬಹುದು ; ಹಾಗಿಲ್ಲದಿದ್ದರೆ, ಪ್ರಸ್ತುಕದ ವಿಷಯಸೂಚಿಕೆಯನ್ನು ನೋಡಿ ಯಾವುದಾದರೊಂದೆರಡು ಭಾಗವನ್ನು ಪರೀಕ್ಷಿಸಿ, ಅದರಿಂದ ಪುಸ್ತಕದ ಯೋಗ್ಯತೆಯನ್ನು ಗೊತ್ತು ಮಾಡಬಹುದು ಸ್ಟಾಲೀಪುಲಾಕ ನ್ಯಾಯ ದಂತೆ, ಇಂಧ ಪರೀಕ್ಷೆಯು ಪ್ರಾಯಕವಾಗಿ ಸಾಧುವಾಗಿರು ವುದು, ಭಕ್ಷ್ಯ ಭೋಜ್ಯಗಳನ್ನು ಬೇಕಾದಹಾಗೆ ಮಾಡಿರುತ್ತಾರೆ; ಅವುಗಳು ಚೆನ್ನಾಗಿ ಮಾಡಲ್ಪಟ್ಟಿವೆಯೇ ಇಲ್ಲವೇ ಎಂಬುದನ್ನು ಪರೀಕ್ಷಿ ಸುವುದಕ್ಕೆ, ಹೊಟ್ಟೆ ತುಂಬುವವರೆಗೂ ಭೋಜನಮಾಡತಕ್ಕ ಆವಶ್ಯಕವಿಲ್ಲ. ರುಚಿನೋಡುವುದರಿಂದ, ಪಾಕ ಸರಿಯಾಗಿ ಆಗಿರುವುದೋ ಇಲ್ಲವೋ ಎಂಬುದನ್ನು ಗೊತ್ತು ಮಾಡಬಹುದು. ಹೀಗೆ ಗ್ರಂಧಗಳ ಗುಣದೋಷ ಗಳನ್ನೂ ಕೂಡ ಸುಲಭವಾಗಿ ಗೊತ್ತು ಮಾಡಬಹುದು, ನಿಖಿಲರೋಗಹರ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.