ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ವಿದ್ಯಾರ್ಥಿ ಕರಭೂಷಣ ಅನಂತರ ಅವನು, ಮನುಷ್ಯನ ಕರ್ತವ್ಯವನ್ನೂ, ಇಷ್ಟಾರ್ಥಗಳ ಸ್ವಭಾವ ಗಳನ್ನೂ, ಧಾಧರಗಳ ಸ್ವರೂಪವನ್ನೂ, ಧರ್ಮಪ್ರವರ್ತನದಿಂದುಂಟಾ ಗತಕ್ಕೆ ಪ್ರಯೋಜನಗಳನ್ನೂ, ಅಧರಪ್ರವರ್ತನದಿಂದುಂಟಾಗತಕ್ಕ ಅನರ್ಧ ಗಳನ್ನೂ, ತನ್ನ ಶಕ್ತಿಯನ್ನೆಲ್ಲ ಬಿಟ್ಟು ಗಟ್ಟಿಯಾಗಿ ಹೇಳುವುದನ್ನು ಸಕ್ರ ಮುಸಿದನು. ಇವನ ಉಪನ್ಯಾಸದ ಶಬ್ದವನ್ನು ಕೇಳಿ, ಶಿಬಿರದಿಂದ ಒಬ್ಬೊ ಬ್ಬರಾಗಿ ಬರುವುದಕ್ಕಪಕ್ರಮವಾಯಿತು ಇವನ ವಾಖ್ಯಾಧುರದಿಂದ ಪರವಶರಾದ ಆ ಕಟುಗರು, ಏಕಾಗ್ರಚಿತ್ತರಾಗಿ ಅವನ ಧಮ್ಮೋಪದೇಶ ವನ್ನು ಕೇಳುತ್ತಿದ್ದರು. ಬೆಳಗ್ಗೆ ಏಳುಘಂಟೆಯವರೆಗೂ ಉಪನ್ಯಾಸ ನಡೆ ಯಿತು. ಇಷ್ಟ ರೊಳಗಾಗಿ, ಲಕ್ಷಾಂತರ ಜನ ಯೋಧರು ಬಂದು ಸೇರಿ ದರು ಆಗ ಉಪನ್ಯಾಸವನ್ನು ಉಪಸಂಹರಿಸಿ, ಆ ಕಟುಗರನ್ನು ಕುರಿತು, ಈಗ ನನ್ನ ಶಿರದವನ್ನು ಮಾಡಿ ನೀವು ಪ್ರತಿಯೊಬ್ಬರೂ ಎರಡನೆಯ ಅಪ್ಪನಿಂದ ಕೊಡಲ್ಪಡತಕ್ಕೆ ಬಹುಮಾನ ವನ್ನು ಹೊಂದಬಹುದೆಂದು, ಡಿಮಾಸ್ತನೀಸನು ಹೇಳಿದನು. ಅವರು ಭಯಭ್ರಾಂತರಾಗಿ ಓಡಿಹೋಗು ವುದಕ್ಕೆ ಸಕ್ರಸಿದರು, ಅಲ್ಲಿನ ಯೋಧರು, ಇವರನ್ನು ಹಿಡಿದು ವಿಚಾ ರಣೆಮಾಡಿ, ನಡೆದ »ದ್ಯಮಾನಗಳು ಗೊತ್ತಾದ ಕೂಡಲೆ, ಅಲ್ಲಿಯೇ ಆ ಐದುಜನಗಳಿಗೂ ಶಿರಶ್ನೆದನವನ್ನು ಮಾಡಿ, ಚಕ್ರವರ್ತಿಯಾದ ಎರಡನೆಯ ಹಿಲಿಪ್ಪನನ್ನು ಹಿಡಿದು ತಂದು ಡಿಮಾಸ್ತನೀನನಿಗೆ ಒದುಲಾಗಿ ಅವನ ಶಿರಚ್ಚೇದ ವನ್ನು ಮಾಡಬೇಕೆಂದು ಅರಮನೆಯ ಕಡೆಗೆ ಹೊರಡಲಾಗಿ, ಚಕ್ರವರ್ತಿ ಯಾದ ಫಿಲಿಪ್ಪನು, ರಾಜಧಾನಿಯನ್ನು ಬಿಟ್ಟು ಓಡಿಹೋದನು. ಈ ಅದ್ಭು ತವಾದ ವಾಖ್ಯಾಧುರ್ ಶಕ್ತಿಯು ಡಿಮಾಸ್ತನೀಸನಿಗೆ ಹೇಗೆ ಬಂದಿತೋಅದನ್ನು ತಿಳಿದುಕೊಳ್ಳುವುದು, ವಿದ್ಯಾರ್ಥಿಗಳಿಗೆ ಆವಶ್ಯಕವಾದುದು.