ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ.

    • ~

ಈಗ ಯಾರು ಬಾಲಕರೆನ್ನಿಸಿಕೊಂಡಿರುವರೋ, ಮುಂದೆ ಅವರೇ ದೊಡ್ಡ ಪ್ರಜೆಗಳಾಗಿ ದೇಶದಲ್ಲಿ ಬಾಳತಕ್ಕವರು ; ಅವರಿಂದಲೇ ದೇಶದ ಹಾನಿವೃದ್ಧಿಗಳೆಲ್ಲ ನಡೆಯಬೇಕಾಗುವುದು ; ದೇಶದ ಸುಖದುಃಖಭಾರ ವೆಲ್ಲ ಅವರಮೇಲೆಯೇ ಬಿದ್ದಿರುವುದು, ಈಚೀಚೆಗಂತು, ಆಂಗ್ಲಯ ರಾಜ್ಯ ಪದ್ಧತಿ ಹೆಚ್ಚುತ ಬಂದಹಾಗೆಲ್ಲ, ರಾಜಕೀಯ ವ್ಯಾಪಾರಗಳೂ ಪ್ರಜೆಗಳಮೇಲೆಯೇ ಹೆಚ್ಚಾಗಿ ಬೀಳುತಬಂದಿದೆ. ಭಾರಹೆಚ್ಚುತ ಬಂದ ಹಾಗೆಲ್ಲ, ಅದನ್ನು ಹೊರುವ ಸಾಮರ್ಧ್ಯವೂ ಹೆಚ್ಚುತ ಬಂದೇತೀರ ಬೇಕಲ್ಲವೆ ' ದೇಶದ ಕಾರಭಾಗವನ್ನೆಲ್ಲ ವಹಿಸುವ ಭಾರವು ಸಾಮಾನ್ಯ ವೆಂದು ತಿಳಿಯಕೂಡದು, ಅದಕ್ಕೆ ತಕ್ಕ ಸಾಮರ್ಥ್ಯವನ್ನು ಸಂಪಾದಿಸಲೇ ಬೇಕು, ಪ್ರಭುತ್ವವಾಡತಕ್ಕವರೂ ಕೂಡ, ದಿನದಿನಕ್ಕೆ ಪ್ರಜೆಗಳಿಗೆ ಹೆಚ್ಚು ಸ್ವಾತಂತ್ರವನ್ನು ಕೊಡುತ ಬಂದಿರುವರು. ಹೀಗೂ, ಪ್ರಜೆಗಳಿಗೆ, ಯೋಗ್ಯತಾಸಿದ್ದಿ ಹೆಚ್ಚುತ ಬರಬೇಕೆಂಬುದು ಸಿದ್ಧವಾಗುವುದು, ಪ್ರಜೆ: ಗಳಾದವರು, ತಮ್ಮ ಕರ್ತವ್ಯವನ್ನು ಸರಿಯಾಗಿ ನೆರವೇರಿಸಬೇಕಾದರೆ, > ಅದಕ್ಕೆ ತಕ್ಕಷ್ಟು ಜ್ಞಾನವಿದ್ದೇ ತೀರಬೇಕು. ಈ ಜ್ಞಾನವು ಸುಲಭವಲ್ಲ. ಬಾಲ್ಯದಿಂದಲೂ ಅಭ್ಯಾಸಮಾಡಿದವರಿಗೆ ಮಾತ್ರವೇ ಇದು ಸುಲಭವಾಗು ವುದು, ಈ ಗಿಡವಾಗಿ ಬೊಗ್ಗದಿದ್ದುದು ಮರವಾಗಿ ಬೊಗೀತೆ ?' ಎಂಬ ಗಾದೆಯ ಇರುವುದು, ಹೀಗಿರುವ ಕಾರಣ, ಈಗ ವಿದ್ಯಾರ್ಥಿದತೆಯಲ್ಲಿ