ಪರಿಚ್ಛೇದ ೧ ೪೫ ವಿದ್ಯಾರ್ಧಿಗಳಿಗೆ ಮಾರ್ಗದರ್ಶನವು ಅತ್ಯಂತ ಅವಶ್ಯಕವಾದುದು. ಈ ಚರಾಚರಾತ್ಮಕವಾದ ಪ್ರಪಂಚದಲ್ಲಿ, ತಿಳಿದುಕೊಳ್ಳುವುದಕ್ಕೆ ಅರ್ಹ ವಾದ ವಿಷಯಗಳು ಗೊತ್ತಿಲ್ಲದಷ್ಟಿರುತ್ತವೆ, ವಿದ್ಯಾರ್ಧಿದಶೆಯಲ್ಲಿ ಯಾವ ದನ್ನು ಮೊದಲು ತಿಳಿದು ಕೊಳ್ಳಬೇಕೋ, ಯಾವಯಾವ ಗ್ರಂಧಗಳನ್ನು ಯಾವಯಾವ ರೀತಿಯಲ್ಲಿ ವ್ಯಾಸಂಗಮಾಡಿದರೆ ಸುಲಭವಾಗಿ ಜ್ಞಾನವುಂ ಟಾಗುವುದೋ, ಯಾವ ರೀತಿಯಲ್ಲಿ ವ್ಯಾಸಂಗಮಾಡಿದರೆ ಗ್ರಂಥಗಳು ಸ್ವಾಧೀನವಾಗುವುದಿಲ್ಲವೋ, ಇವುಗಳೆಲ್ಲ ಗುರುಮುಖದಿಂದ ತಿಳಿದುಕೊ ಳ್ಳಲ್ಪಡಬೇಕು. ಯಾರು ತಾವು ಪಾಠಹೇಳತಕ್ಕ ಗ್ರಂಥಗಳ ಪೂರಾ ವರಗಳನ್ನೂ ರಹಸ್ಯ ವನ್ನೂ ಸಮಗ್ರವಾಗಿ ತಿಳಿದು ಕೊಂಡಿರುವರೋ, ಅವರೇ ಅಂತಹ ಗ್ರಂಧಗಳನ್ನು ಪಾರಹೇಳುವುದಕ್ಕೆ ಸಮರ್ಥರು, ಗ್ರಂಧಗಳನ್ನು ಉಪರಿಸ್ಥವವಾಗಿ ತಿಳಿದುಕೊಂಡು ಪಾರಹೇಳತಕ್ಕವರು, ಗುರುಗಳಾಗು ವುದಕ್ಕೆ೦ದಿಗೂ ಅರ್ಹರಲ್ಲ. ಅಂಧವರಲ್ಲಿ ವ್ಯಾಸಂಗಮಾಡತಕ ವಿದ್ಯಾರ್ಥಿಗಳೂ, ತಾವು ಓದತಕ್ಕ ಶಾಸ್ತ್ರಗಳ ಮರ್ಮವನ್ನು ಸಮಗ್ರ ವಾಗಿ ತಿಳಿದುಕೊಳ್ಳುವುದಕ್ಕೆಂದಿಗೂ ಶಕ್ತರಾಗುವುದಿಲ್ಲ, ಅನೇಕವಾದ ಪಬ್ಲಿಕ್ ಸ್ಕೂಲುಗಳಲ್ಲಿ ಯ ಕಾಲೇಜುಗಳಲ್ಲಿಯೂ ಒಳ್ಳೆಯ ಪಾಠಕ ರಲ್ಲಿ ವ್ಯಾಸಂಗಮಾಡಿದವರು, ಅದ್ವಿತೀಯ ಪಾಂಡಿತ್ಯವನ್ನು ಹೊಂದಿ, ಅಸಾಧಾರಣವಾದ ಪದವಿಗೆ ಬಂದಿರುವರು, ನಮ್ಮ ವೈಸ್‌ರಾಯರಾ ಗಿದ್ದ ಲಾರ್ಡ್ ಕರ್ಜ೯ರವರು, ವಿಲಾಯಿತಿಯ ಪಬ್ಲಿಕ್ ಸ್ಕೂಲಿನಲ್ಲಿ ಶಿಕ್ಷೆಯನ್ನು ಹೊಂದಿದವರು, ಇವರಿಗೆ ಪಾರವನ್ನು ಹೇಳಿದವರು, ಬಹಳ ಸಮರ್ಥರಾಗಿದ್ದರು. ಗುರುವಿನಂತೆ ಶಿಷ್ಯನೆಂಬ ಗಾದೆಗೆ, ಇವರೇ
ಪುಟ:ವಿದ್ಯಾರ್ಥಿ ಕರಭೂಷಣ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.