ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ೫೦ ವಿದ್ಯಾರ್ಥಿ ಕರಭೂಷಣ ಗಳೂ, ಪಾಠ ಕರೂ, ಸಹಾಧ್ಯಾಯಿಗಳೂ, ಯಾವ ದುರಭಿಮಾನದಿಂದ ತುಂಬಿರುತ್ತಾರೋ, ಆ ದುರಭಿಮಾನವು, ವಿದ್ಯಾರ್ಥಿಗಳಿಗೂ ಪ್ರಯತ್ನ ವಿಲ್ಲದೆಯೇ ಬರುವುದು, ಯಾವ ವಿಷಯಗಳನ್ನು ಹೇಳಬೇಕಾದರೂ, ಗುಣದೋಷಗಳನ್ನು ಸಾವಧಾನವಾಗಿ ಪರಿಶೀಲಿಸಿ ಸಾರಭೂತವಾದುದನ್ನು ಪರಿಗ್ರಹಿಸಿ ಯುಕ್ತಿಗೆ ವಿರುದ್ಧವಾದುದನ್ನು ಪರಿತ್ಯಾಗಮಾಡುವ ಶಕ್ತಿ ಯನ್ನು ಪ್ರಧಮತಃ ಗುರುಪದವಿಯಲ್ಲಿರತಕ್ಕವರು ಸಂಪಾದಿಸಿಕೊಳ್ಳಬೇಕು. ಹಾಗೆ ಸಂಪಾದಿಸಿಕೊಳ್ಳತಕ್ಕವರೇ ನಿಜವಾದ ಗುರುಗಳು, ಅಂಧ ಗುರು ಗಳೇ ಪರಬ್ರಹ್ಮನಿಗೂ ಸಮಾನರು ; ಅವರೇ ನರ್ವರಿಗೂ ಪೂಜ್ಯರು. ಮೂರ್ತಿಭವಿಸಿದ ದುರಭಿಮಾನದೇವತೆಗಳು, ಗುರುಪದವಿಗೆಂದಿಗೂ ಅರ್ಹ ರಾಗುವುದಿಲ್ಲ, ಅಂಧವರಲ್ಲಿ ಶಿಷ್ಯರಾಗುವುದರಿಂದ, ಅಧೋಗತಿಗೆ ಸೋಪಾನಗಳನ್ನು ಕಟ್ಟಿದಂತಾಗುವುದೆಂದು ಸಾರಾಸಾರವಿಚಾರಜ್ಞರು ಅಭಿಪ್ರಾಯಡುವರು. ಎಲ್ಲ ಜ್ಞಾನಗಳಿಗಿಂತಲೂ, ಲೋಕವ್ಯವಹಾರಜ್ಞಾನವು ಅತ್ಯಂತ ಪ್ರಯೋಜನಕರವಾದುದು, ಗ್ರಂಧಾವಲೋಕನದಿಂದ ಬರತಕ್ಕೆ ಜ್ಞಾನದಲ್ಲಿ ನ್ಯೂನಾತಿರಿಕ್ತಗಳಿರುವುದುಂಟು. ಸಾಕ್ಷಾತ್ತಾಗಿ ಜನಗಳಲ್ಲಿ ಸೇರಿ, ಅವರ ಮಾತುಗಳಲ್ಲಿಯ ಕೆಲಸಗಳಲ್ಲಿಯೂ ತೋರುವ ಮನೋಧರ್ಮಗಳನ್ನೂ, ಆಶೆಯೆಂಬ ಪಿಶಾಚದಿಂದ ಹಿಡಿಯಲ್ಪಟ್ಟವರು ಯಾವಯಾವ ಸಂದರ್ಭ ಗಳಲ್ಲಿ ಹೇಗೆಹೇಗೆ ನಡೆದುಕೊಳ್ಳುವರೋ ಅದನ್ನೂ ಸಾಕ್ಷಾತ್ತಾಗಿ ನೋಡು ವವರಿಗೆ ಲಭ್ಯವಾಗತಕ್ಕೆ ಜ್ಞಾನದಲ್ಲಿ, ವಿಶೇಷವ್ಯೂನಾತಿರಿಕ್ತಗಳಿರುವುದಿಲ್ಲ. ಗ್ರಂಥಾವಲೋಕನದಿಂದ ಪಡೆಯಬೇಕಾದ ಜ್ಞಾನವನ್ನು ಪ್ರಥಮತಃ