ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಕರಭೂಷಣ ವನ್ನು ಸ್ವಲ್ಪ ಮಾತ್ರ ಸಂಗ್ರಹಿಸಿ « ಪೌರುಷಪ್ರಕಾಶ ವೆಂಬ ಹೆಸರಿನಿಂದ ಒಂದು ಗ್ರಂಧವನ್ನು, ನಮ್ಮ ಶ್ರೀಮನ್ಮಹಾರಾಜರವರ ಆಸ್ಟಾಸಪಂಡಿತ ರೊಬ್ಬರು, ಬಹುಕಾಲದ ಹಿಂದೆಯೇ ಮುದ್ರಿಸಿರುವರು. ಈಗ ಅವರಿಂದಲೇ ಈ ವಾಸಿಷ್ಠವು ಕರ್ಣಾಟಕ ಭಾಷಾ ಟೀಕಾತಾತ್ಸಲ್ಯಗಳೊಡನೆ ಮುದ್ರಿಸು ಲ್ಪಡುತಿರುವುದು, ತಮ್ಮ ಪ್ರಜೆಗಳನ್ನು ಹೇಗಾದರೂ ಮಾಡಿ ಮುಂದಕ್ಕೆ ತರಬೇಕೆಂಬ ದೃಢಸಂಕಲ್ಪವುಳ್ಳವರಾಗಿಯ, ತಮ್ಮ ರಾಜ್ಯವನ್ನು ರಾಮ ರಾಜ್ಯವೆಂದೆನ್ನಿ ಸಬೇಕೆಂದು ಶ್ರಮಪಡತಕ್ಕವರಾಗಿಯ ಇರುವ, ಪ್ರಾಜ್ಞ ಶಿರೋಮಣಿಗಳಾದ, ನಮ್ಮ ಶ್ರೀಮನ್ಮಹಾರಾಜರವರು, ಈ ಜ್ಞಾನ ವಾಸಿಷ್ಠದ ಟೀಕೆಗೆ ತಮ್ಮ ದಿವ್ಯನಾಮಾಂಕಿತವನ್ನು ಅನುಗ್ರಹಿಸಿರುವರು. ವಸಿಷ್ಠರು ಶ್ರೀರಾಮನಿಗೆ ಮಾಡಿದ ಉಪದೇಶವನ್ನು ವಿಸ್ತಾರವಾಗಿ ತಿಳಿದು ಕೊಳ್ಳಲಪೇಕ್ಷೆಯುಳ್ಳವರಿಗೆ, ಈ ಗ್ರಂಧಗಳು ಬಹಳಪ್ರಯೋಜನಕರವಾಗಿ ರುವುವು. « ತುಂಬಿದ ಕೊಡ ತುಳುಕುವುದಿಲ್ಲ' ಎಂಬ ಗಾದೆಯನ್ನು ಎಲ್ಲ ರೂ ಕೇಳಿರುವರು. ಆದರೆ, ಅದರ ಪ್ರಯೋಜನವನ್ನು ಹೊಂದಿರ ತಕ್ಕವರು ಬಹಳವಿರಳರಾಗಿರುವರು. ಈ ಪ್ರಪಂಚದಲ್ಲಿ ವ್ಯಾಸಂಗಮಾಡು ವುದಕ್ಕೆ ಯೋಗ್ಯವಾದ ಶಾಸ್ತ್ರಗಳು ಅಸಂಖ್ಯಾತವಾಗಿರುತ್ತವೆ ಈ ಭೂಮಿಯಂತೆ ಇರತಕ್ಕ ಲೋಕಗಳು, ಈ ಸೂರನ ಸುತ್ತಲೂ ಅನೇಕ ವಾಗಿರುವುವು ; ಇಂಥ ಸೂರಮಂಡಲಗಳೂ ಕೋಟ್ಯಂತರವಾಗಿರುವುವು, ಬರೀಕಣ್ಣಿಗೆ ಗೊತ್ತಾಗತಕ್ಕ ಭೂಮಂಡಲಗಳೂ, ಸೂರಮಂಡಲಗಳೂ, ಚಂದ್ರಮಂಡಲಗಳೂ ಎಷ್ಟೊ ಇರುವುವು. ನಮ್ಮ ಕಣ್ಣುಗಳಿಗಿರುವ