೬ ೨ ಕರಭೂಷಣ MMw/ Mommmmmmmmmmmmmmmm ಇವುಗಳೆಲ್ಲ, ಸ್ವಲ್ಪಮಟ್ಟಿಗೆ ಗುರುಕುಲಗಳಾಗಿಯೇ ಪರಿಣಮಿಸುವುವು. ಮನೆಗಳಲ್ಲಿ ವ್ಯಾಸಂಗಮಾಡತಕ್ಕ ಹುಡುಗರಿಗೆ ಜ್ಞಾಪಕ ಶಕ್ತಿಯನ್ನು ವೃದ್ಧಿ ಪಡಿಸುವುದಕ್ಕೆ ಇರುವ ಸೌಲಭ್ಯಗಳಿಗಿಂತಲೂ, ಈ ವಿದ್ಯಾರ್ಧಿನಿಲಯಗ ಇಲ್ಲಿ ಹೆಚ್ಚು ಸೌಲಭ್ಯಗಳಿರುತ್ತವೆ. ಈ ನಿಲಯವನ್ನು ಇನ್ನೂ ಉತ್ತಮ ಸ್ಥಿತಿಗೆ ತರುವುದು ಸಾಧ್ಯವೆಂದು ತೋರುವುದು, ಇವರಿಗೆ ಪಟ್ಟಣಗಳ ಸಂಸರ್ಗ ತಪ್ಪುವಂತೆ ಮಾಡಲ್ಪಟ್ಟರೆ, ಇವರ ವ್ಯಾಸಂಗವೂ ಹೆಚ್ಚಾದ ಏಕಾಗ್ರತೆಯಿಂದ ನಡೆಯಿಸಲ್ಪಡುವುದು ಸಾಧ್ಯವ. ವೀರನಿಗ್ರಹದ ಮಹಿಮೆಯಿಂದ, ಅನೇಕವಾಗಿ ಏಕಸಂಧಿಗ್ರಾಹಿಗಳು ಹೆಚ್ಚಬಹುದು. ಇಂಗ್ಲೀಷ್ ಭಾಷೆಯನ್ನು ಅತ್ಯಂತ ಲಲಿತವಾಗಿಯ ಅಸಾಧಾರಣಗಾಂಭೀರ್ಯುಕ್ತವಾಗಿಯೂ ನವರಸಭರಿತವಾಗಿಯೂ ಬರೆ ದಿರುವವರಲ್ಲಿ, ಲಾರ್ಡ್ ಮೆಕಾಲೆ ಎಂಬಾತನು ಒಬ್ಬನಾಗಿರುವನು. ಈತನು ಯಾವ ಹೊಸ ಗ್ರಂಧವನ್ನು ಕೈಗೆ ಕೊಟ್ಟಾಗೂ ಒಂದಾವತಿ ಓದಿ ಚಾಜೂ (ಚ ತು) ತಪ್ಪಿಲ್ಲದಂತೆ ಒಪ್ಪಿಸುತ್ತಿದ್ದನು. ಇವನ ಶೈಲಿಯು ಅಸಾಧಾರಣವಾಗಿ ಪರಿಣಮಿಸುವುದಕ್ಕೆ, ಈ ಜ್ಞಾಪಕ ಶಕ್ತಿಯೇ ಮುಖ್ಯ ಕಾರಣವು, ಭೋಜರಾಯನ ಅರಮನೆಯಲ್ಲಿ ಏಕಸಂಧಿಗ್ರಾಹಿಗಳು ಅನೇ ಕರಿದ್ದರು. ಭೋಜನು ಮಹಾಕವಿಗಳಿಗೆ ಬಹು ದ್ರವ್ಯವನ್ನು ಕೊಡುತ್ತಿದ್ದನು. ಒಂದಾನೊಂದು ಕಾಲದಲ್ಲಿ ಖಜಾನೆಯೊಳಗೆ ಹಣವಿಲ್ಲದಿದ್ದಾಗ ಒಬ್ಬ ಮಹಾಕವಿ ಬರುತ್ತಾನೆಂದು ಭೋಜನಿಗೆ ತಿಳಿಯಬಂದಿತು, ಆಗ ಇವನು ವಿಚಾರಪರನಾಗಿರುವುದನ್ನು ನೋಡಿ ಇವನ ದ್ವಾರಪಾಲಕನೊಬ್ಬನು ಬಂದು, ಖಜಾನೆಗೆ ಹಣಬರುವವರೆಗೂ ತಮಗೆ ಈ ಮಹಾಕವಿಗಳ
ಪುಟ:ವಿದ್ಯಾರ್ಥಿ ಕರಭೂಷಣ.djvu/೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.