ಪರಿಚ್ಛೇದ ೨ ೮೩. ಆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಬಹಳಮೇಧಾವಿಗಳಾಗಿಯೂ, ಬಹಳ ವೇಗದಿಂದ ಕೆಲಸಮಾಡತಕ್ಕವರಾಗಿಯೂ ಇರುವ ಅಜಾಗರೂಕರಿ ಗಿಂತಲೂ, ಬಹಳ ನಿಧಾನವಾಗಿಯಾದರೂ ಅವಿಚ್ಛಿನ್ನವಾಗಿಯೂ ಶ್ರದ್ಧೆ ಯಿಂದಲೂ ಕೆಲಸಮಾಡತಕ್ಕವರು, ಹಿಡಿದ ಕೆಲಸವನ್ನು ಜಾಗ್ರತೆಯಾಗಿ ಯೂ ಚೆನ್ನಾಗಿಯ ಮಾಡುವರು. ಬಹಳ ಚುರುಕಾದ ಕತ್ತಿಯನ್ನು ಬಂದು ಪದಾರ್ಧದ ಮೇಲೆ ಮೆಲ್ಲಗೆ ಇಟ್ಟರೆ, ಅದು ಕತ್ತರಿಸಿಹೋಗುವುದಿಲ್ಲ. ಮೊಂಡು ಕತ್ತಿಯನ್ನಿಟ್ಟು ಒಲವಾಗಿ ಅಮುಕಿದರೆ, ಆ ಪದಾರ್ಥವು ಕತ್ತರಿಸಿ ಹೋಗುವುದು, ಹಾಗೆಯೇ ಮೇಧಾವಿಗಳಾಗಿಯ ಚಟುವಟಿಕೆಯಾ ಗಿಯ ಇರತಕ್ಕವರು ಅನಾದರದಿಂದ ಮಾಡತಕ್ಕ ಕೆಲಸಕ್ಕಿಂತಲೂ, ಸಾಮಾನ್ಯರಾದ ಜನಗಳು ಶ್ರದ್ಧೆಯಿಂದ ಮನಸ್ಸಿಟ್ಟು ಮಾಡುವ ಕೆಲಸವು ಬಹಳ ಚೆನ್ನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅನೇಕ ಕೆಲಸಗಳನ್ನು ಮಾಡತಕ್ಕವರು, ತಮ್ಮ ಕೆಲಸಗಳನ್ನು ಮಾಡುವುದರಲ್ಲಿ ಕ್ರೈಸ್ತವಾದ ಕ್ರಮವನ್ನು ಏರ್ಪಡಿಸಿಕೊಳ್ಳುವರು, ಕೆಲಸಮಾಡುವುದಕ್ಕೆ ಅನುಕೂಲವಾದ ಕಾಲವನ್ನು ಗೊತ್ತು ಮಾಡಿಕೊಳ್ಳು ವುದರಲ್ಲಿಯೂ, ಬುಕ್ಕುಗಳನ್ನೂ ರಿಕಾರ್ಡು ಮೊದಲಾದುವುಗಳನ್ನೂ ವಿಂಗಡಿಸಿಕೊಳ್ಳುವುದರಲ್ಲಿಯ, ಇವರು ತೋರಿಸುವ ಕ್ರಮವೂ ಅದತ ವಾಗಿರುವುದು, ಜರಿಮಿಯಾ ಎವರ್ ರವರು, ದಿನಕ್ಕೆ ಹದಿನಾರು ಘಂಟೆ ಗಳಿಗೆ ಕಡಮೆಯಿಲ್ಲದೆ ಕೆಲಸಮಾಡತಕ್ಕವರಾಗಿದ್ದರು. ಇಂತಹ ನಿಮಿಷ ದಲ್ಲಿ ಅವರು ಇಂತಹ ಕೆಲಸವನ್ನೇ ಮಾಡುತಿರುವರೆಂದು, ಅವರ ಆಳುಗಳು ಮೊದಲುಗೊಂಡು ಎಲ್ಲರೂ ಹೇಳಬಹುದಾಗಿದ್ದಿತು ಇವರ ಪುಸ್ತಕಗಳೂ, ಭ
ಪುಟ:ವಿದ್ಯಾರ್ಥಿ ಕರಭೂಷಣ.djvu/೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.