ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ನಿರದುಖೆ ಕೇಶಾಕೇಶಿಯಿ ನೆರಡುಂ ಬಲಮುರ್ಕಿನಿಂದೆ ಪೊಣರ್ದಾಗಳ್ | ಇರಿವಿಟ್ಟ ಪೊಳ್ಳ ಲೌಡಿಯ ಕರೆವಂಬಿನ ದೃಷ್ಟಿ ಮೋದುವಡ್ಡಾಯುಧದುಖೆ | ತರಿವ ಕೃಪಾಣದ ಕುಂತದ ಬರುಜಂಗಾ ದೈತ್ಯಬಲಮದಕ್ಕಿದುದಾಗಳ್ | ಸಿಂಗದ ಜಂಗುಳಿಯೊಳ್ತಾ ತಂಗಂಗಳ್ಳೆಣಸಲಾರ್ಪುವೇ ಗಣಬಲದಿಂ ! ಭಂಗಂಬತ್ತೋಡಿತ್ತು ಸಮ ರಾಂಗಣದಿಂದಸುರಸೇನೆ ಜವದಿಂದಾಗಳ್ || ತನ್ನ ಬಲಂ ಭಯದಿಂದಂ ಬೆನ್ನಿತ್ತುದನೀಕ್ಷಿಸುತ್ತಭಯಮಂ ಕುಡುತುಂ | ಪನ್ನತಿಕೆಯನು ಬೀರು ತುನ್ನಡೆದಂ ಸಂಗರಕ್ಕೆ ಕುಂಜರದೈತ್ಯಂ || ನೆಗಪುತ್ತಾನನಮಂ ಕರಾಗ್ರದೆ ಮಹಾನಿಃಶ್ಯಾಸಮುಚ್ಚಾಸದಿಂ ಖಗಮುಖ್ಯಗ್ರಹರಾಶಿಯಂ ಖಚರರಂ ನಕ್ಷತ್ರಸಂದೋಹವಂ | ತೆಗೆವುತ್ತುಂ ಬಿಡುತುಂ ಭಯಂಗೊಳಿಸುತುಂ ತಾಂ ಬೃಂಹಿತಧ್ಯಾನದಿಂ ಜಗಮಂ ಕಾಳಗಕೊಲ್ಲು ಬಂದನದಟಿಂದಂ ಮತ್ತನಾಗಾಸುರಂ || ಕೆಲರಂ ಶುಂಡಾಗ್ರದಿಂದಂ ಪಿಡಿದುರದಿಡುತು ಮೇಘಮಾರ್ಗಕ್ಕೆ ಸಿಕ್ಕಿಂ ಕೆಲರಂ ವಾಲಾಂತದಿಂದಂ ಪೊಡೆದು ಕೆಡವುತುಂ ಭೂಮಿಭಾಗಕ್ಕೆ ಯಾರ್ಪಿo | ಕೆಲರಂ ದಂತಂಗಳಿಂದೀಡಿರಿದುಬೆ ದೆಸೆಗೀಡಾಡುತುತಾಹದಿಂದಂ ಮಲೆವುತ್ತೆಂದನಾಗಳ್ಳರಬಲನಳಿನೀಕುಂಜರಂ ದಾನವೇಂದ್ರಂ || ೩೭ ನೆರೆ ಕೈವೀಸುತೆ ದೆಸೆದೆಸೆ ಯರೆಯರನಾ ತಾಣಬರಂ ಮಾಡುತೆ ಬಾಂ | ದೊರೆಯಂ ಕಲಂಕುತುಂ ದೊ ಬೀರಿವುತ್ತಿರ್ದಂ ರಣಾಗ್ರದೊಳಜದನುಜಂ || ೩೮