ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಷಣ, wwwwwwwwwwwww.rr.. ರಿತವಾದ ಉದ್ವಾರಗಳನ್ನು ಕೇಳಿ ದುರ್ಯೋಧನನಿಗೆ ಸುಮ್ಮನೆ ಕೂಡುವದು ಆಗಲಿಲ್ಲ. ಆಗ ಅವನು ನಾನು ಬಹಳ ಪಾಪಿಸ್ಮನು ನನ್ನ ನೂರುಮಂದಿ ತಮ್ಮಂದಿರ ಮರಣವನ್ನು ನಾನು ಕಣ್ಮುಟ್ಟಿ ನೋಡುತ್ತಿದ್ದರೂ ಅವರನ್ನು ಉಳಿಸಿ ಕೊಳ್ಳುವದು, ನನ್ನಿಂದಾಗಲಿಲ್ಲ. ನಿಮ್ಮನ್ನು ಕಣ್ಣೀರು ಸುರಿಸಲಿಕ್ಕೆ ಹಚ್ಚಿದವನು ನಾನೇ ಇಂಥಾ ನೀತನಾದನನಗೆ ಬಾಳಾ, ಬಾಳಾ, ವತ್ಸಾ, ವತ್ಸಾ, ಎಂದು ಯಾಕೆ ಕರೆಯುತ್ತೀರಿ? ಎಂದು ಅಂದನು. ಗಾಂಧಾರಿಯು ಅವನನ್ನು ಸಮಾಧಾನ ಪಡಿಸುತ್ತ ಮಗನೇ, ಈ ದುಃಖವನ್ನು ಸಾಕುವಾಡು; ಉಳಿದ ನೀನೊಬ್ಬನಾದರೂ ಉದಂಡ ಆಯುಷ್ಯವಂತನಾಗು; ನಿನಗೆ ಕೈ ಮುಗಿದು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ, ಈ ಯುದ್ಧವನ್ನು ಮುಗಿಸಿ ಬಿಡು. ಎಂದು ಹೇಳಿದಳು. ಧೃತರಾಷ್ಟ್ರನು ಕಂದಾ, ದುರ್ಯೋಧನಾ ನಿನ್ನ ಹಡೆದ ವಳ ಮಾತಿಗೆ ಮಾನಕೊಟ್ಟು ನಮ್ಮಿಬ್ಬರನ್ನು ಸಮಾಧಾನ ಪಡಿಸು; ಯಾಕಂ ದರೆ ಕಾಲವು ಈಗ ನಮಗೆ ಅನುಕೂಲವಾಗಿಲ್ಲ. ಪರಾಕ್ರಮ ಪಾಲಿಗಳಾದ ಭೀಷ್ಮದ್ರೋಣರು ಕೂಡ ಸಂಗ್ರಾಮದಲ್ಲಿ ಮಡಿದುಹೋದರು. ವೃಷಸೇನ ನನ್ನು ಅರ್ಜುನನು ಕೊಲ್ಲುತ್ತಿರಲು ಅವನನ್ನು ಉಳಿಸಿಕೊಳ್ಳುವದು ಕರ್ಣ ನಿಗೂ ಕೂಡ ಅಸಾಧ್ಯವಾಯಿತು. ಆ ನೀಲಕನಾದ ಭೀಮಸೇನನ ಪ್ರತಿಜ್ಞೆಗೆ ಳೆಲ್ಲ ಬಹುಶಃ ನೆರವೇರಿದಂತಾಗಿರುವವು. ಕೇವಲ ನಿನ್ನ ಸಂಬಂಧದ ಪ್ರತಿಜ್ಞೆ ಯೋಂದು ಮಾತ್ರ ಉಳಿದಿರುವದು. ಆದಕಾರಣ ಇನ್ನು ವೈರವನ್ನು ಬಿಟ್ಟು ಅಂಧರಾದ ನಮ್ಮ ಸಂರಕ್ಷಣೆಯನ್ನು ಮಾಡು ಎಂದು ಹೇಳಿದನು. ಸಂಜ ಯನು ಅದರಂತೆಯೇ ಹೇಳಿ? ಧೃತರಾಹ್ಮನ ಮಾತಿಗೆ ಬಲಿಕೊಟ್ಟನು. ದುರ್ಯೋಧನನು ಎಲ್ಲರ ಮಾತುಗಳನ್ನು ಸಾಂತಮನಸಿನಿಂದ ಕೇಳಿಕೊಂಡು ತಂದೆಗಳೇ, ಪುತ್ರವಾತ್ಸಲ್ಯದಿಂದ ಮೋಹಕ್ಕೊಳಗಾಗಿ ತಾಯಿಯವರು ಹೀಗೆ ಹೇಳುವದು. ಯೋಗ್ಯವೇಸರಿ, ಸಂಜಯನಂತೂ ಹೇಳಿ ಕೇಳಿ ಗಾವಿಲನು; ಅವನಿಗೆ ಭಾಜನೀತಿಯ ವಿಚಾರವು ಎತ್ತಣದು ? ಆದರೆ ರಾಜನೀತಿಯನ್ನು ಬಲ್ಲಂಥ ಹಿರಿಯರಾದ ನೀವು ಸಹ ಮೋಹಕ್ಕೆ ಒಳಗಾದದ್ದನ್ನು ಕಂಡು ನನಗೆ ಬಹಳ ಆಶ್ಚರ್ಯವಾಗುತ್ತದೆ. ನನ್ನ ನೂರುಮಂದಿ ತಮ್ಮಂದಿರು ಜೀವದಿಂದಿರುವಾಗಲೇ ಸ್ವತಃ ವಾಸುದೇವನು ಒಪ್ಪಂದದ ಸಂಧಾನವನ್ನು ಹಚ್ಚಿದಾಗ ನಾನು ಒಪ್ಪಿಕೊಳ್ಳಲಿಲ್ಲ. ಈಗ ನನ್ನ ಎಲ್ಲ ಬಂಧು ಬಾಂಧವರೂ ಗುರುಹಿರಿಯರೂ ಗೆಳೆಯರಾದ ಅರಸರೂ ಮರಣಹೊಂದಿರಲು ಕುದ್ರವಾದ