ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

YG ವಾಗ್ಯೂಷಣ, CP ರಾಕ್ಷಸನು ಹೀಗೆ ಭ್ರಾಂತಿಯನ್ನುಂಟು ಮಾಡಿದನೆಂದು ತಿಳಿಯಲು, ಶ್ರೀಕೃಷ್ಣನು ಅವನನ್ನು ನಕುಲನಿಂದ ಹಿಡತರಿಸಿ ಕೊಲ್ಲಿಸಿದನು. ೧೧ ನೇ ಪ್ರಕರಣ. ವೇಣಿಬಂಧನ. ಹಿಂದಿನ ಪ್ರಕರಣದಲ್ಲಿ ವರ್ಣಿಸಿದಂತೆ ಧರ್ಮರಾಜನ ಭ್ರಾಂತಿಯು ದೂರವಾಯಿತು. ಎತ್ತ ನೋಡಿದ ಆನಂದವು ಮೊಳೆದೋರಿತು. ಆಗ ಭೀಮಸೇನನು ಧರ್ಮರಾಜನನ್ನು ಕುರಿತು ಅಣ್ಣಾ, ಇನ್ನೊಂದು ದೊಡ್ಡ ಕಾ ರ್ಯವು ಉಳಿದದೆ. ಅದನ್ನಷ್ಟು ತೀರಿಸಲಿಕ್ಕೆ ಬೇಗನೆ ಅಪ್ಪಣೆಯನ್ನು ದಯ ಪಾಲಿಸಬೇಕು ಎಂದು ಬಿನ್ನವಿಸಿದನು. ಧರ್ಮರಾಜನು ಅಂಥಾ ಮಹಾ ರ್ಯವು ಯಾವದು ? ಎಂದು ಕೇಳಲು, ಭೀಮಸೇನನು ದುರ್ಯೋಧನ ದುಃಶಾಸನರ ರಕ್ತದಲ್ಲಿ ಮುಳುಗಿದ ಈ ನನ್ನ ಕೈಗಳಿಂದ ದುಃಶಾಸನನು ಜಗ್ಗುವದರಿಂದ ಬಿಚ್ಚಿದ ಪಾಂಚಾಲಿಯ ಕೂದಲುಗಳನ್ನು ಒಟ್ಟುಗೂಡಿಸಿ ಹೆಳಲು ಹಾಕುವದು ನನ್ನ ಪ್ರತಿಜ್ಞೆಯ ಕಡೆಯ ಭಾಗವಲ್ಲವೆ? ಎಲೈ ಪಾಂಚಾಲಿಯೇ ಇತ್ತ ಬಾ, ನಿನಗೆ ಅವಮಾನವನ್ನು ಮಾಡಿದ್ದರಿಂದ ನನ್ನ ಮೈಯೆಲ್ಲ ನಿಟ್ಟಿನಿಂದ ಸಂತಪ್ತವಾಯಿತು. ಅದನ್ನು ಶಾಂತಗೊಳಿಸುವದಕ್ಕಾ ಗಿಯೇ ಆ ನೀಕರ ರಕ್ತವನ್ನು ನನ್ನ ಮೈಗೆಲ್ಲ ತೊಡಕೊಂಡಿದ್ದೇನೆ. ನೀನು ನನ್ನ ಕೈಗಳನ್ನು ಸ್ಪರ್ಶಮಾಡು, ಬಹುದಿವಸದಿಂದ ಹೆಳಲು ಹಾಕದೆ ಬಿಟ್ಟಿ ನಿನ್ನ ಕೇಶಪಾಶಗಳನ್ನು ಒಟ್ಟುಗೂಡಿಸಿಕೊಂಡು ಹೆಳಲು ಹಾಕಿಕೊ. ಎಂದು ಹೇಳಿದನು. ಆಗ ಅವಳ ದಾಸಿಯು ಹೆಳಲು ಹಾಕಿದಳು. ಆ ಸಮಯ ದಲ್ಲಿ ಕೆಳಗೆ ಕೊಟ್ಟಂತೆ ಅಶರೀರ ವಾಣಿಯಾಯಿತು. “ ಎಲೈ ಕುರುಪಾಂಡವ ಸೈನ್ಯದೊಳಗೆ ಉಳಿದ ವೀರರೇ, ಕೇಳಿರಿ, ದೌಪದಿಯ ಅಸ್ತವ್ಯಸ್ತವಾದ ಯಾವ ಕೇಶಪಾಶಗಳನ್ನು ಕಂಡು, ದಾಂಧರೂ ಅತುಲ ಪರಾಕ್ರಮ ಶಾಲಿಗಳೂ ಆದ ಪಾಂಡವರು ಎಲ್ಲ ಕೌರವರ ಹಾಗು ಎಷ್ಟೋ ವೀರರಾದ ಅರಸರ ಹೆಂಡಂದಿರ ಕೇಶಪಾಶಗಳನ್ನು ಬಿಚ್ಚಿಸಿದರೋ ಕೌರವಕುಲಕ್ಕೆ ಧೂಮಕೇತುವಿನಂತೆ ಇರುವ ಆ ಕೇಶಪಾಶವು ಈಗೆ ಕಟ್ಟಲ್ಪಟ್ಟಿತು. ಆದ