ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಂಕ ಭೀಮ :ಕಟ್ಟಿದನೊ ? ಕಂಚುಕಿ :-ಇಲ್ಲ, ಇಲ್ಲ, ಕಟ್ಟುವುದಕ್ಕಾ ರಂಭಿಸಿದನು. ಭೀಮ :ಅನಂತರದಲ್ಲಿ ಭಗವಂತನೇನು ಮಾಡಿದನು ? ಕಂಡುಕಿ :-ಅನಂತರದಲ್ಲಿ ಆ ಮಹಾತ್ಮನಾದ ಕೃಷ್ಣನು ವಿಶ್ವರೂಪವನ್ನು ತೋ ಸಿ, ಎಲ್ಲರನ್ನೂ ಮೂರ್ಛಗೊಳಿಸಿ, ಕುರುಒಲವನ್ನು ಕೊಡಹಿ, ನನ್ನ ಶಿಬ ರಕ್ಕೆ ಬಂದನು. ಆದ್ದರಿಂದ ಜಾಗ್ರತೆಯಾಗಿಯೇ ಭಗವಂತನು ನಿನ್ನನ್ನು ನೋಡಲಪೇಕ್ಷಿಸುತ್ತಾನೆ. ಭೀಮು :--- (ನಗು) ದುರಾತ್ಮನು ಭಗವಂತನಾದ ವಾಸುದೇವನನ್ನು ಕಟ್ಟುವುದ ಕ್ಯಾರಂಭಿಸಿದನಲ್ಲ ! ಎಲೈ ದುರಾತ್ಮನೆ', ಕುರುಕುಲಕ್ಕೆ ಅಪಾತಿಯನ್ನು ತರತಕ್ಕವನೇ ? ಹೀಗೆ ನೀನು ಮರಾದೆ ತಪ್ಪಿ ನಡೆಯುವಾಗ ವಾಂಡವರ ಕೋಪವು ನಿನ್ನ ವಿಷಯದಲ್ಲಿ ನಿಮಿತ್ತ ಮಾತ್ರವು, ಸಹದೇವ :---ಆ ದುರಾತ್ಮನಾದ ದುಯ್ಯೋಧನನು ಭಗವಂತನಾದ ವಾಸುದೇವನ ಸ್ವರೂಪವನ್ನ ರಿಯನೆ ? ಭೀಮು :-ವತ್ಥ, ಆ ದುರಾತ್ಮನು ಶುದ್ದ ಮಥನು. ಹೇಗೆ ತಿಳಿಯುವನು ? ನೋಡು, ಆತ್ಮಾರಾನುರಾಗಿರುವ ಋಷಿಗಳು ಜ್ಞಾನಾಧಿಕ್ಯದಿಂದ ರಜಸ್ತ್ರ ನೋಗುಣಗಳನ್ನಳಿದು, ಶುದ್ಧ ಸತ್ವರಾಗಿ ಅಸಂ ಪ್ರಜ್ಞಾವಸಮಾಧಿಯಲ್ಲಿ ತ್ರಿಗುಣಾತಿ' ತಸ್ಥಾನದಲ್ಲಿ ಪ್ರಕಾಶಿಸುವ ಯಾನ ಮಹಾತ್ಮನನ್ನು ನೋಡು ತಾರೆಯೋ ಅಂತಹ ಪುರಾಣಪುರುಷನನ್ನು ಮೋಹಾಂಧನಾದ ಇವನು ಹೇಗೆತಾನೇ ತಿಳಿಯುವನು ? ಆರನೇ, ಮೈತ್ರೇಯನೇ, ಗುರುವಾದ ಧರ ರಾಯನು ಈಗ ಏನು ಮಾಡಬೇಕೆಂದಿದ್ದಾನೆ ? ಕಂಡುಕಿ :-ಕುಮಾರಸ್, ಮಹಾರಾಜನ ಅಧ್ಯವಸಾಯವನ್ನು ನೀನೇ ಹೋಗಿ ತಿಳಿಯಬಹುದು. (ಎಂದು ಹೊರಟು ಹೋಗುವನು.) (ತೆರೆಯಲ್ಲಿ) ದ್ರುಪದ, ವಿರಾಟ, ವೃಷ್ಟಾಂಧಕ, ಸಹದೇವರೇ ಮೊದ ಲಾದ ಎಲೈ ನನ್ನ ದಳಪತಿಗಳಿರಾ, ನೀವುಗಳೂ, ಕೌರವ ಸೈನ್ಯ ಪ್ರಧಾನ ಯೋಧರುಗಳೂ ಸಹ ಇದನ್ನು ಕೇಳತಕ್ಕದ್ದು. ಏನೆಂದರೆ ಸತ್ಯವ್ರತಕೆ