ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 . 01 + 0 = ದ್ವಿತೀಯಾಂಕ (ಸಂಭ್ರಾಂತನಾದ ಕಂಚುಕಿಯು ಪ್ರವೇಶಿಸಿ) ಕಂಚು ಕಿ:-ಮುರಿಯಿತು' ಮುರಿಯಿತು! (ಎಲ್ಲರೂ ಭಯದಿಂದ ಕೊಡವರು) ದುರೂ ಧನ:-ಏನದು? ಕಂಡುಕಿ...ಸ್ವಾಮಿ, ನೀನು ದುರೋ ಧನ:ನು ಬೊಗಳುವಿ? ಭಾನುಮತಿ: -ಆರನೆ, ಏಸು ಕೆಟ್ಟದ್ದನ್ನು ಹೇಳುವಿ? ಕಂಡುಕಿ-(ಭಯದಿಂದ) ದೇವಿಯೇ ಹೇಳುತ್ತೆನಲ್ಲಾ. ಎಲ್ಲವೂ ಮುರಿಯಿತು. ಭೀಮದುರೊ, ಧನ-ಛ, ಪ್ರಲಾಪಿಯೆ', ಹಾಳು ವೃದ್ದನೆ, ಏನು ನಿನ್ನ ಮಧ್ಯ? ಕಂಡುಕಿ:-ಮಧ್ಯವೆನೂ ಇಲ್ಲ. ಇದು ನಿಜ. ಸತ್ವವೂ ಮುರಿಯಿತು. ಭೀಮಮಾರುತದಿಂದ ನಿನ್ನ ಧ್ವಜವು ಮುರಿದು ಗಂಟೆಗಳ ಸದ್ದಿ ನೋಂ ದಿಗೆ ಭೂಮಿಯಲ್ಲಿ ಬಿತ್ತು. ದುಯ್ಯೋ ಧನ: ಗಾಳಿಯ ವೇಗಕ್ಕೆ ಪ್ರಪಂಚವೇ ನಡುಗುತ್ತಿರುವಾಗ, ರಥದ ಧ್ವಜವು ಮುರಿದ ಮಾತ್ರಕ್ಕೆ ಮುರಿಯಿತು, ಮುರಿಯಿತು ಎಂದು ಸುಮ್ಮನೆ ಕೂಗುವೆ. ಕಂಡುಕಿ:ಏನೂ ಇಲ್ಲ. ಈ ದುರ್ನಿಮಿತ್ರದ ಶಾಂತಿಗೆ ಏನಾದರೂ ಮಾಡಬೇ ಕೆಂದು ಸ್ವಾಮಿಭಕ್ತಿಯು ನನ್ನನ್ನು ಈ ರೀತಿ ವಿಜ್ಞಾಪನೆ ಮಾಡುವಂತೆ ಮಾಡಿತು. ಭಾನುಮತಿ:ಆರಪುತ್ರನೇ, ಈ ದುರ್ನಿಮಿತ್ತವನ್ನ ಪ್ರಸನ್ನರಾದ ಬ್ರಾಹ್ಮಣರು ಗಳು ಸ್ವಸ್ತಿ ವಾಹನಗಳಿಂದ ಪರಿಹರಿಸಿಕೊಳ್ಳಬೇಕು. ದುಕ್ಕೋಧನ:-(ಅಲಕ್ಷ್ಯದಿಂದ) ಹೋಗು, ಪುರೋಹಿತನಾದ ಸುಮಿತ್ರನಿಗೆ ತಿಳುಹಿಸು. (ಪ್ರತೀಹಾರಿಯು ಪ್ರವೇಶಿಸುವನು.) ಪ್ರತೀಹಾರಿ:-ಮಹಾರಾಜನಿಗೆ ಜಯವಾಗಲಿ. ಮಹಾರಾಜನೇ, ಅಳಿಯನಾದ ಸೈಂಧವನ ತಾಯಿಯು ದುಶ್ಯಳೆಯೊಂದಿಗೆ ಬಾಗಿಲಲ್ಲಿ ನಿಂತಿರುವಳು.