ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾew (ತೆರೆಯಲ್ಲಿ ಕಲಕಲವೃನಿಯಾಗುವುದು.) ರಾಕ್ಷಸಿ:-(ಕೇಳಿ ಹೆದರಿಕೆಯಿಂದ) ರುಧಿರಪ್ರಿಯನೇ, ಏನು ಕಲಕುಧ್ವನಿ? ರಾಕ್ಷಸ:-ದೃಷ್ಟದ್ಯುಮ್ಮನು ದ್ರೋಣನನ್ನು ಕೇಶಪಾಶಗಳಲ್ಲಿ ಹಿಡಿದುಕೊಂಡು ಖಡ್ಗ ದಿಂದ ಛೇದಿಸುತ್ತಿರುವನು. ರಾಕ್ಷಸಿ:-(ಸಂತೋಷದಿಂದ) ಹಾಗಾದರೆ ನಾವೂ ಅಲ್ಲಿಗೆ ಹೋಗಿ ದ್ರೋಣನ ರಕ್ತವನ್ನು ಕುಡಿಯೋಣ, ರಾಕ್ಷಸ:-(ಭಯದಿಂದ) ಅದು ಬ್ರಾಹ್ಮಣನ ರಕ್ತನಲ್ಲವೆ? ಗಂಟಲನ್ನು ಸುಡು ಇದೆ. ಆದುದರಿಂದ ಅದು ಏಕೆ? (ಪುನಃ ತೆರೆಯಲ್ಲಿ ಕಲಕಲಧ್ವನಿಯಾಗುವುದು.) ರಾಕ್ಷಸಿ:-ಇದು ಏನು ಪುನಃ ಕಲಕಧ್ವನಿ ಕೇಳುತ್ತದೆ? ರಾಕ್ಷಸ:-( ತೆರೆಯಕಡೆ ನೊಡಿ) ವಸಾಂಗದೆಯೇ, ಅಶ್ವತ್ಥಾಮನು ಕತ್ತಿಯನ್ನು ಹಿಡಿದುಕೊಂಡು ಬರುತ್ತಿರುವನು. ಇವನು ದೃಷ್ಟದ್ಯುಮ್ಮನ ಮೇಲಿನ ಕೊಪದಿಂದ ನಮ್ಮನ್ನು ಎಲ್ಲಿಯಾದರೂ ಕೊಂದಾನು? ಆದುದರಿಂದ ಬಾ ಹಿಡಿಂಬಾ ದೇವಿಯ ಅಪ್ಪಣೆಯಂತೆ ನಡೆಯೋಣ, (ಎಂದು ಹೊರಟುಹೋ ಗುವರು.) ಕಲಕಲ ಧ್ವನಿಯನ್ನು ಕೇಳುತ್ತಾ ಖಡ್ಗಧಾರಿಯಾದ ಅಶ್ವತ್ಥಾಮನು ಬರುವನು. ಅಶ್ವತ್ಥಾಮ:-ಪ್ರಳಯಕಾಲದ ಗಾಳಿಗೆ ಸಿಕ್ಕಿದ ಪ್ರಚಂಡವಾದ ಪುಷ್ಕಲಾವರ್ತಕ ಮೇಳಗಳ ಗುಡಿಗಿನಂತೆ ಭೂಮಾಕಾಶಗಳನ್ನು ಮುಚ್ಚುವ, ಕೇಳುವುದಕ್ಕೆ ಭಯಂಕರವಾದ, ಸಮರ ಸಂಹಾರದ ಧ್ವನಿಯು ಅಪೂರ್ವವಾಗಿರುವುದು. (ಹಾಗೆಯೆ ಯೋಜಿಸಿ) ನಿಜವಾಗಿಯೂ, ಅರ್ಜುನನೊ, ಸಾತ್ಯಕಿಯೊ, ಅಥವಾ ಭೀಮಸೇನನೊ, ಯವ್ವನದ ಕೊಬ್ಬಿನಿಂದ ಮಿತಿಮೀರಿರಬೇಕು, ಅದಕ್ಕೆ ನಮ್ಮ ತಂದೆಯು ಕೋಪಿಸಿಕೊಂಡು, ಶಿಷ್ಯ ಪ್ರೀತಿಯನ್ನೂ ಬಿಟ್ಟು, ಅದಕ್ಕೆ ತಕ್ಕ ಸಾಹಸವನ್ನು ತೋರಿಸುತ್ತಿಧಾನೆ. ದುದ್ದೋಧನನಲ್ಲಿರುವ ಪಕ್ಷಪಾತಕ್ಕೂ, ಶಸ್ತ್ರವನ್ನು ಹಿಡಿದದ್ದಕ್ಕೂ, ಪರುಶುರಾಮನಿಂದ ಲಬ್ಬ