ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಂಕ _71 ಕೌಶಾಂಬರಗಳನ್ನು ಎಳಸಿದವನಾಗಿಯೂ, ದುಶನನಾದಿಗಳಿಗೆ ಮೊರೆ ಯಾಗಿಯ, ಅನುಜ ಶತಕ್ಕೆ ಜೈಷ್ಟ ನಾಗಿಯ, ಅಂಗರಾಜನಿಗೆ ಪರಮ ಮಿತ್ರನಾಗಿಯ ಇರುವ ದುರೊ: ಧನನು ಎಲ್ಲಿರುವನು? ಕೋಪದಿಂದಲ್ಲ. ನೋಡುವುದಕ್ಕೆ ಬಂದಿದ್ದೆ ನೆ. ಧೃತರಾಷ್ಟ್ರ:ಸಂಜಯನೇ, ಈ ಪಾಪಿಯ ಅಧಿಕ್ಷೇಪವು ಎಷ್ಟು ಕ್ರೂರವಾಗಿ ರುವುದು, ಸಂಜಯ:ಕೆಲಸದಿಂದ ಅನೇಕ ವಿಲವನ್ನುಂಟುಮಾಡಿ ಈಗ ನತಿಸಿದ ನೋಯಿಸುತ್ತಿರುವನು. ದುರೊಧನ:-ಸಾರಥಿಯೆ?, ಇವನಿಲ್ಲಿದಾನೆಂದು ಅವನಿಗೆ ಹೊಗಿ . ಸಾರಥಿ:-ಎಲೆ, ಭೀಮಾರ್ಜುನರುಗಳಿರಾ, ಇಗೋಮಹಾರಾಜನು ತಂದೆತಾಯ ಗಳೊಂದಿಗೆ ಆಲದ ಮರದ ನೆರಳಿನಲ್ಲಿ ಕುಳಿತಿರುವನು. ಅರ್ಜುನ:ಆಣ್ಣನೆ:, ಪ್ರಸನ್ನನಾಗು, ಪುತ್ರಶೋಕದಿಂದ ಪೀಡಿತರಾದ ತಂದೆ ತಾಯಿಗಳನ್ನು ನಾವು ಕಾಣಿಸಿಕೊಂಡು ಇನ್ನೂ ಹೆಚ್ಚಾಗಿ ಗುಡಿ ಸುವುದು ಯೋಗ್ಯವಲ್ಲ, ಆದಕಾರಣ ಹಿಂತಿರುಗಿ ಹೋಗೋಣ ಭೀಮು:-ಮೂಢನೆ, ಪೂರ್ವಾಚಾರವನ್ನು ಅತಿಕ್ರಮಿಸಬಾರದು. ಗುರುಗ ಇನ್ನು ನಮಸ್ಕಾರ ಮಾಡದೆ ಹೋಗುವುದು ಸರಿಯಲ್ಲ (ಎಂದು ರಥ ದಿಂದಿಳಿಯುವನು.) ಭೀನು: ಸಂಜಯನೆ', ತಾಯಿ ತಂದೆಗಳಿಗೆ ನಮಸ್ಕಾರವನ್ನು ತಿಳಿದು, ಅಥವಾ ಇರು. ನಾವೆ ತಿಳಿಸುತ್ತೇವೆ. ನತ್ರನೆ:, ನನ್ನ ಹೆಸರನ್ನೂ ನಮ್ಮ ಕೆಲಸ ನನ್ನೂ ಹೇಳಿ ಗುರುಗಳಿಗೆ ನಮಸ್ಕಾರ ಮಾಡಬೇಕು. ಅರ್ಜುನ: ಮಾತೆಯೆ, ತಂದೆಯೆ, ನಿನ್ನ ಮಕ್ಕಳುಗಳು ಸಮಸ್ತ ಶತ್ರುಗಳನ್ನೂ ಜಯಿಸುವೆನೆಂಬ ಆಶೆಯನ್ನು ಯಾರಲ್ಲಿ ಇಟ್ಟಿದ್ದ ರೊ?, ಯಾವನು ತನ್ನ ಅಹಂಕಾರದಿಂದ ಲೋಕವನ್ನು ತಿರಸ್ಕಾರ ಮಾಡಿದ್ದ ನೋ, ಆ ರಾಧಾ ಪುತ್ರನಾದ ಕರ್ಣನನ್ನು ಯುದ್ಧದಲ್ಲಿ ಕೊಂದಿರುವ ಪಾಂಡುಪುತ್ರನಾದ ಅರ್ಜುನನು ನಿಮ್ಮ ಗಳಿಗೆ ನಮಸ್ಕಾರ ಮಾಡುವನು.