೧೩v ಕಾವ್ಯಕಲಾನಿಧಿ ಪಾದಿಯಲ್ಲಿ ತೇಲಿದ ಹೊತ್ತಿಗೂ ಆಯಾಕಾಶಾದಿಗಳ ಸಂಗಡ ಪೃಥಿವ್ಯಾ ದಿಗಳಿಗೆ ಹೇಗೆ ಸಂಗವಿಲ್ಲವೋ, ಹಾಗೆ ಆತ್ಮನು ಭ್ರಾಂತಿಯಿಂದ ದೇಹೇಂದಿ) ಯಾದಿ ಪ್ರಪಂಚದೊಡನೆ ಕೂಡಿಕೊಂಡಿದ್ದವನೋಪಾದಿಯಲ್ಲಿ ತೋರಿದ ಹೊತ್ತಿಗೂ ಆತ್ಮನು ಅಸಂಗಿಯೇ ಸರಿ, ವ್ಯವಹಾರಕಾಲದಲ್ಲಿ ಪರವುತ ವನು ಅನುಸರಿಸಿ ಆ ಖಾಕಾಶಾದಿಗಳಿಗೆ ನಿರವಯವನನು ಅಂಗೀಕರಿಸಿ ಈ ಪ್ರಕಾರವಾಗಿ ಹೇಳಿದೆವು, ಪರಮಾರ್ಥ ವಾಗಿ ವಿಚಾರಿಸುವಲ್ಲಿ ಆ ಯಾಕಾಶಾದಿಸರ್ವ ಪದಾರ್ಥಗಳು ಭಾಂತಿಯಿಂದ ಆತನಲ್ಲಿ ಆರೋಪಿತಗ ೪ಾಗಿ ಇವೆಯಾದಕಾರಣ ಆರೋಪಿಗಳಾದ ಪದ ರ್ಥಗಳಿಗೆ ರಜದಿಗ ಇಲ್ಲಿ ತೋಟವಂಥ ಸರ್ಪದಿಗಳೋಪಾದಿಯಲ್ಲಿ ಅಧಿನವಾದಂಥ ಆತ್ಮ ಸತ್ತೇ ಸ್ವರೂಪವಾಗಿ ಇದೆಯಾಗಲಾಗಿ, ಆತ್ಮನು ಕಾಲಶ್ರಯದಲ್ಲಿ ಅದ್ದಿ ತೀಯನೇ ಸರಿ, ಅದರಿಂದ ಅಸಂಗನೆಂದು ಸಿದ್ಧವಾಯಿತು. ಈ ಪ್ರಕಾರವಾಗಿ ವಿಚಾರಿಸಿ ಆ ಅಸಂಗನಾದ ಆತ್ಮನೇ ನಾನುಯೆಂದು ಮುಮುಕ್ಷುವಿಗೆ ತಿಳಿಯಬಹುದಲ್ಲಿ, ಹೀಗೆ ಯಾವವ ತಿಳಿಯುತ್ತಿದ್ದಾನೆಯೋ ಆತನೇ ಮುಕ್ತನೆಂದು ವೇದಾಂತಸಿದ್ದಾಂತ, ಇನ್ನು ಆತ್ಮನಿಗೆ ಅಕರತವು ಹೇಗೆಯೆಂದು ವಿಚಾರಿಸುತ್ತ ಇ ದೈವೆ, ಅದಂತಿರಲಿ, ಆತ್ಮನಿಗೆ ಕರ್ತೃತ್ವವು ಪ್ರಸಕ್ತವಾದರಷ್ಟೆ ಆ ತ್ಮನಿಗೆ ಅಕರ್ಮವು ಹೇಗೆಯೆಂದು ವಿಚಾರಿಸಬೇಕು, ಕರ್ತೃತ್ಯವು ಪ್ರಸಕ್ತವಾಯಿತೆ? ಎಂದರೆ ಪ್ರಸಕ್ತವಾಯಿತು, ಅದೆಂತೆಂದರೆ-ದೇಹೇಂ ದಿಯಾದೃಧ್ಯಾಸದಿಂದ ನಾನು ಸ್ನಾನವ ಮಾಡಿದೆನು, ನಾನು ಸ್ನು ನವ ಮಾಡಹೋಗುತ್ತಿದ್ದೇನೆ, ನಾನು ಜಪವ ಮಾಡಿದೆನು, ಜಪವ ಮಾಡ ಹೋಗುತ್ತಿದ್ದೇನೆ; ನಾನು ಅಗ್ನಿಹೋತ್ರವ ಮಾಡಿದೆನು, ಅಗ್ನಿಹೋತ್ರ ವ ಮಾಡಹೋಗುತ್ತಿದ್ದೇನೆ; ನಾನು ಯಜ್ಞವ ಮಾಡಿದೆನು, ಯಜ್ಞನ ಮಾಡಹೋಗುತ್ತಿದ್ದೇನೆ~ಎಂದು ಕರ್ತೃತ್ವವು ಅಧ್ಯಾಸದಿಂದ ಆತ್ಮನಿಷ ವಾಗಿ ತೋಯುತ್ತಿದೆಯಾದಕಾರಣ ಈ ಕರ ತೃವು ಇಲ್ಲವೆಂದು ತಳ್ಳು ವುದಕ್ಕೋಸ್ಕರ ವಿಚಾರಿಸಬೇಕಾಯಿತು. ಲೋಕದಲ್ಲಿ ಕರವೆಂದ ರೇನೆಂದರೆ, ಕ್ರಿಯಾಶ್ರಯತ್ನವೆನಿಸುವುದು, ಆ ಕರ್ತೃತ್ವವು ಪರಿಚ್ಛಿನ್ನ ವಾಗಿ ಸಾವಯವವಾಗಿ ವಿಕಾರಿಯಾದಂಥ ವಸ್ತುವನ್ನು ಆಶ್ರಯಿಸಿಕೊಂಡಿ
ಪುಟ:ವೇದಾಂತ ವಿವೇಕಸಾರ.djvu/೧೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.