ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೦೯ ಮಂಪರದಲ್ಲಿದ್ದ ತನಗೆ ದೇವತೆಗಳು ಆ ರೂಪದಲ್ಲಿ ಅಭಯವಿಯುತ್ತಿದ್ದಂತೆ ಭಾಸವಾಗಿತ್ತು. ಇನ್ನೂ ಸ್ವಲ್ಪ ಸಮಯ ಕಳೆಯುವುದರಲ್ಲಿ ಲಾಟೀನುಸಹಿತ ಹಗ್ಗ ಕಟ್ಟಿದ್ದ ಬಿದಿರುಗೊಟ್ಟಿಲನ್ನು ಮೇಲಿನಿಂದ ಇಳಿಬಿಟ್ಟಿದ್ದರು. ಲಕ್ಕ ಬಲು ಪ್ರಯಾಸದಿಂದ ತನ್ನನ್ನು ಬಿದಿರುತೊಟ್ಟಿಲಿನೊಳಗೆ ಸೇರಿಸಿದ್ದ. ಮೇಲಿನವರು ತನ್ನನ್ನು ಹೊತ್ತ ಬಿದಿರುತೊಟ್ಟಿಲನ್ನು ಮೇಲೆ ಎಳೆದುಕೊಳ್ಳುತ್ತಿರುವಂತೆ ತನ್ನ ಪ್ರಜ್ಞೆ ಮಂದವಾಗುತ್ತ, ಬಾವಿಯ ಮೇಲೆ ಕಪ್ಪು ಮಸಿಯ ಗುಂಡುಹಲಗೆಯ ಹಾಗೆ ಕಾಣುವ ಆಕಾಶ, ಅದರ ಕೆಳಗೆ ಬಾವಿಯ ಸುತ್ತಲೂ ಬೆಳಕು ಹಿಡಿದು ನಿಂತ ಜನ-ಇವೆಲ್ಲ ಕ್ರಮಕ್ರಮವಾಗಿ ಕರಗಿ ಇಲ್ಲವಾದವು... ಮುಂದೆ ನಡೆದುದೇನೂ ನನಗೆ ತಿಳಿಯದು. ಈ ವಿಚಾರವನ್ನೂ ಸಹ ಮುಂದೊಂದು ದಿನ ಲಕ್ಕನ ಕೊಟ್ಟಿಗೆಯಲ್ಲಿ “ಹಿಂಗಾಯ್ತು ಅಮಾರೆ” ಎಂದು ಕರೆ ಮಾಡಿ ಹೇಳಿದ್ದ. ಬಿದಿರುತೊಟ್ಟಿಲಿನಿಂದ ತನ್ನನ್ನ ಇಳಿಸಿದ ಬಳಿಕ ಲಕ್ಕನಿಗೂ ಮನಃ ಹಗ್ಗ ಬಿಟ್ಟಿದ್ದರಂತೆ. ಹಗ್ಗದ ಆಶ್ರಯದಲ್ಲಿ ಅವನು ಮೇಲೆ ಬಂದಾಗ, ಮಾವನವರು ತನ್ನುನ್ನು ಮಕಾಡೆ ಮಲಗಿಸಿ ದೇಹವನ್ನು ಎರಡೂ ಕೈಗಳಿಂದ ಬಲವಾಗಿ ಅದುಮಿ ತಾನು ಬಾವಿಯಲ್ಲಿ ಮುಳುಗಿದಾಗ ಕುಡಿದಿದ್ದ ನೀರನ್ನು ಹೊರಕ್ಕೆ ಕಡೆಸುತ್ತಿದ್ದರಂತೆ... -ಇದೇ ಚಿಂತನೆಯಲ್ಲಿ ಮುಳುಗಿದ್ದ ರುಕ್ಕಿಣಿಯನ್ನು “ಕಂಪಲಾಪುರ ಬಂತು” ಎಂಬ ಅಶ್ವತ್ಥನ ಮಾತು ಎಚ್ಚರಗೊಳಿಸಿತ್ತು. ಗಾಡಿ ಕಂಪಲಾಪುರವನ್ನು ದಾಟಿ ದರುಮನಳ್ಳಿಯನ್ನು ಸೇರುವ ವೇಳೆಗೆ ಕೋಳಿಗಳು ಕೂಗಿ ಅವರನ್ನು ಎಚ್ಚರಗೊಳಿಸುತ್ತಿದ್ದವು. ಮನೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ನೆರೆದ ನೆಂಟರು ಆಗಲೆ ಎದ್ದಿದ್ದು, ಹಟ್ಟಿ ಗಿಜಗುಡುತ್ತ ಸಾವಿನ ಮನೆ ಎಂಬ ಅಂಶವನ್ನು ಮರೆಸುವಂತಿತ್ತು. ಪ್ರೀತಿಯ ತಂಗಿಯನ್ನು ಕಳೆದಕೊಂಡವರಂತೆ ಶಾಸ್ತ್ರಿಗಳು ತಮ್ಮ ಎಂದಿನ ಲವಲವಿಕೆಯನ್ನೂ ಚಿತ್ತಸ್ಟ್ರವನ್ನೂ ಕಳೆದುಕೊಂಡವರಂತೆ ತೋರುತ್ತಿದ್ದರು. ಮಗ ತೀರಿಹೋದಾಗ ಇಂಥದೇ ಸ್ಥಿತಿಯಲ್ಲಿ ಶಾಸ್ತ್ರಿಗಳು ಪರಿತಾಪಪಡುತ್ತಿದ್ದುದನ್ನು ರುಕ್ಕಿಣಿ ಹಿಂದೆ ಕಂಡಿದ್ದಳು. ಮಂಕುಹಿಡಿದವರಂತೆ ಕುಳಿತ ಅವರನ್ನು ನೋಡಿದಾಗ ಅಯ್ಯೋ ಎನ್ನಿಸದಿರಲಿಲ್ಲ... ಅಸ್ಥಿಸಂಚಯನವಾಗಿ, ವೈಕುಂಠ ಮುಗಿಯುವುದನ್ನೆ ಕಾದಿದ್ದ ನೆಂಟರು ಇಷ್ಟರು ತಮ್ಮ ತಮ್ಮ ಊರುಗಳಿಗೆ ಹೊರಟು ನಿಂತರು. ಅಶ್ವತ್ಥ, ಸಾವಿತ್ರಿ ಮತ್ತು ಜಾನಕಿಯನ್ನು ರುದ್ರಪಟ್ಟಣಕ್ಕೆ ಹಿಂದಿರುಗಿಸುವ ಕಾರ್ಯಭಾರವು ಲಕ್ಕನ ಪಾಲಿಗೆ ಬಿದ್ದಿತ್ತು. ರುಕ್ಕಿಣಿಯನ್ನೂ ಇನ್ನೂ ಎರಡು ಮೂರು ತಿಂಗಳುಗಳವರೆಗಾದರೂ