ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೬೧ ಬಾಳೆಕಂಬದ ಬೆಳ್ಳಿಬುಡವನ್ನು ಕತ್ತರಿಸಿ ಹಾಕಿದ. ಆಗ ಆ ರಾಕ್ಷಸನ ಕಾಲುಗಳೂ ಕಡಿದು ಬಿದ್ದವು. ಅಷ್ಟಾದರೂ ಆ ದೈತ್ಯ ಬೋರ್ಗರೆಯುವ ಸಾಗರದಂತೆ ಉರುಳುತ್ತುರುಳುತ್ತಲೆ ಬರುತ್ತಿದ್ದ. ಇನ್ನೇನು ಹತ್ತಿರ ಹತ್ತಿರ ಬಂದ ಎನ್ನುವಾಗ, ಚಿನ್ನದ ನಡುವಿನ ಭಾಗವನ್ನೂ ಕೊಚ್ಚಿದ. ರಾಕ್ಷಸನ ಸೊಂಟದ ಪ್ರದೇಶವೂ ಕರಿಸಿ ಬಿತ್ತು. ಅಂಥ ಸ್ಥಿತಿಯಲ್ಲೂ ಕೂಡ ಆ ದೈತ್ಯನ ಹೂಂಕಾರ ಕಡಿಮೆಯಾಗಲಿಲ್ಲ. ಶಿರನ್ನೂ ಸೇರಿದಂತೆ ಅವನ ಸೊಂಟದ ಮೇಲ್ಬಾಗದ ಶರೀರವು ಇನ್ನೂ ಮಿತಿಮೀರಿದ ಠೇಂಕಾರದಿಂದ ಅವನತ್ತ ನುಗ್ಗಿ ಬಂತು ಆಗಲೀಗ ರಾಜಕುಮಾರ ಮುತ್ತಿನ ಗೊನೆಯನ್ನೂ ಸಹ ಕೊಚ್ಚಿ ಕೆಡವಿದ. ದೈತ್ಯನ ಶಿರಸ್ಸು ಎದೆಯ ಭಾಗದಿಂದ ಪ್ರತ್ಯೇಕಗೊಂಡು ರಾಜಕುಮಾರನ ಪಾದದ ಬಳಿ ನಿರ್ಜೀವವಾಗಿ ಬಂದು ಬಿತ್ತು. ಅಬ್ಬಬ್ಬ ಸದ್ಯ ತೋಲಗಿತಲ್ಲ ಪಿಶಾಚಿ!” ಎಂದು ನಿಟ್ಟುಸಿರುಟ್ಟು, ಆನಂದದಿಂದ “ಆಮೇಲಿನ್ನೇನು?... ನೀನು ಹೇಳೊ ಎಲ್ಲಾ ಕತೇಲೂ ಇರೋ ತರ, ಆ ರಾಜಕುಮಾರ ಆ ರಾಜಕುಮಾರೀನ ಮದ್ಯೆ ಆಗ್ತಾನೆ ಅಲ್ವಾ?” ಎಂದು ತನ್ನ ಜಾಣತವನ್ನು ಪ್ರದರ್ಶಿಸಿದ್ದಳು... ಹೌದೆಂದು ಒಪ್ಪಿ, ಆ ಕಥೆಯ ಗುಂಗಿನಲ್ಲಿ ಪರವಶಳಾದಂತಿದ್ದ ಸರಸಿಯನ್ನು ರುಕ್ಕಿಣಿಯು ಪ್ರಶ್ನಿಸಿದ್ದಳು: “ಒಂದು ಪಕ್ಷ ಈ ಹೊತ್ತಿನಲ್ಲಿ ಅಂಥ ರಾಕ್ಷಸ ಇಲ್ಲಿಗೆ ಬಂದ ಅಂತ ಇಟ್ಟುಕೊ, ಆಗ ನೀನೇನು ಮಾಡ್ತಿದ್ದೆ, ಸರಸಿ”? ತಟ್ಟನೆ ಆವೇಶ ಬಂದವಳಂತೆ, ರುಕ್ಕಿಣಿಯ ಕುತ್ತಿಗೆಯನ್ನು ಎರಡು ಕೈಗಳಿಂದಲೂ ಅಮುಕತ್ತ. “ಹಿಂಗೆ, ಹಿಂಗೆ ಅವನ ಕುತ್ತಿಗೇನ ಹಿಚುಕಹಾಕ್ತಿದ್ದೆ” ಎಂದಳು. ಆ ಗಳಿಗೆಯಲ್ಲಿ ಸರಸಿ ಅಡಗೂಲಜ್ಜಿ ಕಥೆಯ ರಾಜಕುಮಾರನೆ ಆದಂತಿತ್ತು.... “ಬಿಡೆ, ಬಿಡೆ ನನ್ನ ಕುತ್ತಿಗೇನ ಯಾಕೆ ಹೀಗೆ ಹಿಚುಕ್ತ ಇದ್ದೀಯೆ!... ನಾನೇನು ಆ ರಾಕ್ಷಸ ಅಲ್ಲ- ನಾನು ನಿನ್ನ ಅಕ್ಕ...” ಎಂದು ರುಕ್ಕಿಣಿಯು ಹೇಳುತ್ತಿದ್ದಂತೆ ಕಿಲಕಿಲನೆ ನಗುತ್ತ, ಅವಳ ಕುತ್ತಿಗೆಯಿಂದ ಸರಸಿ ತನ್ನ ಕೈಗಳನ್ನು ತೆಗೆದಿದ್ದಳು.... ಗುಡ್ಡ ವೋಳೀಕೆ ಮನಗದ ಲಕ್ಕ ಬೆಳಗ್ಗೆ ಏಳಕ್ಕೆ ಹೃಳ್ಳಾಡ್ತಾನೆ. ಹೃಳ್ಳಾಡ್ತಾನೆ ಆಯ್ತಾನೇ ಇಲ್ಲ... ಅವ್ವ ಬಂದು ಅಣೆ ಮುಟ್ಟಿ ಸ್ವಾಡುದ್ಲು. ಕುಟ್ಟೋಯ್ತ ಇತ್ತು...