ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೬೯ ತಾನೆ?” -ಎಂದು ಲೋಕಾಭಿರಾಮವಾಗಿ ಕೇಳಿದ. “ಊ. ಇಲ್ಲಿ ಇನ್ನೇನ ಜಂಬರ?- ನಡೀರಿ. ಅಲ್ಲೊಂದು ಇಲ್ಲೊಂದು ಮ್ಯಾಡ ಗುರಕಾಯಿಸ್ತಾ ಅದೆ. ಜಟಜಟ್ಟೆ ಊರು ಸೇರುಕಳಾವ” ಎಂದವನು “ಸಂತೇಲಿ ತುಸ ಕೆಲ್ಸ ಇತ್ತು...” ಸಿವುನಿ ರಾಗ ಎಳೆದಳು. “ಸಂತೇಲಿ ಇನ್ಯವ ಜಂಬರ ಇದ್ದು?” ಸುಳಿವು ತಿಳಿಯದೆ ನಿಂಗಯ್ಯ ಕೇಳಿದ. ಅದುಕ್ಕುತ್ತರವಾಗಿ ಸಿವುನಿ. “ಯಾನಿಲ್ಲ. ಒಂದು ಕುರಿ ಕಳ್ಳನಾಂತ...” ಎಂದಳು. ನಿಂಗಯ್ಯನಿಗೆ ಮೈಯೆಲ್ಲ ಕಿವಿಯಾಯಿತು. “ಸಾಜವಾಗೂವೆ”? ಅದುಕೆ ದುಡ್ಡು?” “ನಂಜನಗೂಡ್ನಿಂದ ಬಾಗ ವಸಿ ದುಡ್ಡ ತಂದಿದ್ದೆ. ಅಲ್ಲಿ ನಾನು ಕಂಬಳದಲ್ಲಿ ಮಿಗುಸ್ಟ ದುಡ್ಡು, ಅದ್ರೆ ಬಳಸಿ ತಕ್ಕಳಾದು” ಎಂದು ಬಿರಬಿರನ ಹೆಜ್ಜೆ ಹಾಕಿದಳು. ಸ್ವಲ್ಪ ಹಿಂದಕ್ಕಾದ ನಿಂಗಯ್ಯ, ಲಕ್ಕನೊಡನೆ, - “ಕಾಲದಿಂದ್ಲವೆ ನಮ್ಮಣ್ಣಿನ ಸೊಬಾವಾನೆ ಇಂಗೆ, ಕಷ್ಟದಲ್ಲಿ ರೋರೆ ಸಾಯ ಮಾಡಾದು. ತಾನು ಆಸಿಗಂಡಿದ್ರೂವೆ ಇನ್ನೊಬ್ಬರೆ ಮಾಡಿದ್ದೆಲ್ಲ ಇಕ್ಕಿ ಸಮತರಿಸಾದು?... ಚಿನ್ನದಂತಾ ಗುಣ. ಆ ದ್ಯಾವರು ಕಡೆಗಾಲಲ್ಲಿ ಅಯ್ಯನ ಸುಸೂಸೆ ಮಾಡೀಂತ ಕರಕಂಬಂದನೊ ಯಾನೊ ಇಲ್ಲೀಗಿವಳ!” ಹೇಳುತ್ತ ಹೇಳುತ್ತ ಹಿಗ್ಗಿದ. ಸಂತೆಮಾಳದಲ್ಲಿ ಅಳೆದೂ ಸುರಿದೂ ಅತ್ತ ಹೋಗಿ ಇತ್ತಬಂದು, ಮಾರುವವನ ಸಂಗಡ ಚೌಕಾಶಿ ಮಾಡಿ, ಒಂದು ಕುರಿಮರಿಯನ್ನು ಎಂಟು ರೂಪಾಯಿಗೆ ಕೆಡವಿಕೊಳ್ಳುವುದರ ಒಳಗೆ ಪಡುವಳಿಂದ ಕತ್ತಲು ತನ್ನ ಸೆರಗನ್ನು ಹೊದ್ದಿಸುತ್ತ ಬರತ್ತಿತ್ತು. ಕೊಂಡು ಮುಗಿದ ಬಳಿಕವೂ ಬೆಲೆ ಜಾಸ್ತಿಯಾಯ್ಕೆ. ಹೆಂಗೆ, ಎಂದು ಸಂತೆಗೆ ಬಂದಿದ್ದ ಪರಿಚಯಸ್ಥರನ್ನೆಲ್ಲ ಕೇಳಿ, ಅವರು “ಪರವಿಲ್ಲ, ಕಟ್ಟ ದುಡ್ಡಿಗೇನೂ ಮ್ಯಾಸ ಇಲ್ಲ. ಅಂಗೆ ನೋಡುದ್ರೆ, ಇನ್ನೂ ಏಡು ರೂಪಾಯಿ ಎಚ್ಚಾಗೆ ತಡೀತದೆ ಮುಕ್ಕ” ಎಂದನಂತರವೇ ಸಿವುನಿಗೆ ಸಮಾಧಾನ! ಇವರ ವ್ಯಾಪಾರ ಮುಗಿದು ಸೇತುವೆ ದಾಟಿ ಬರುವ ವೇಳೆಗೆ ಅವರ ದರುಮನಳ್ಳಿ ಗಾಡಿಗಳೆಲ್ಲ ಆಗಲೆ ಹೊರಟುಹೋಗಿದ್ದವು. ದೊಪ್ಪನೆ ಗಾಡಿಯೊಂದೆ ಇನ್ನೂ ಹೊರಡದೆ ಉಳಿದಿತ್ತು. ದೊಳ್ಯಪ್ಪನ ಹೆಂಡತಿ ಸಂಪಿಗೆಮ್ಮ ಆನಂತಶೆಟ್ಟರ