ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೨ ವೈಶಾಖ ಮಳೆ ಹೊಯ್ದಾಗ ರುಕ್ಕಿಣಿಗೂ ಸಂತೋಷವೇ. ಗಂಡನ ಸಂಗಸುಖ ಅನುಭವಿಸಿದ ಮೊದಲ ರಾತ್ರಿಯಲ್ಲೂ ಇಂಥದೇ ಮಳೆ... ಕಿಟಿಕಿಗಳಿಗೆ ಇಂಥವೆ ಹನಿಯ ತೆರೆ ಬೀಸಿ ಒಸಗೆಕೋಣೆಯಲ್ಲಿ ತಮ್ಮಿಬ್ಬರನ್ನೂ ಬೆಸೆದು ಹೊರಗಿನ ಪ್ರಪಂಚವನ್ನು ಮರೆಯುವಂತೆ ಮಾಡಿತ್ತು... ಇಂದು ಸಹ ದಾರದಾರವಾಗಿ ಸುರಿದು ಕಾಡನ್ನೆಲ್ಲ ಆವರಿಸಿದ್ದ ಮಳೆ, ತಾನು, ಲಕ್ಕ, ಗಾಡಿ ಎತ್ತುಗಳು, ಬೊಡ್ಡಇವಿಷ್ಟನ್ನುಳಿದು ಸದ್ಯಕ್ಕೆ ಜಗತ್ತಿನಲ್ಲಿ ಇನ್ನು ಬೇರೆ ಯಾವ ವಸ್ತುವೂ ಇಲ್ಲವೆನ್ನುವಂತೆ ಮಾಯೆಯ ಮುಸುಕಿನ ಮೋಡಿ ಹಾಕುತ್ತಿತ್ತು... ಇದೇ ಗುಂಗಿನಲ್ಲಿ ಅವಳ ಚಿತ್ತ ರೆಕ್ಕೆ ಕಟ್ಟಿ ಹಾರುತ್ತಿರುವಾಗ, ಥಟ್ಟನೆ ಸಿಡಿಲೊಂದ ಎದೆ ಝಲ್ ಎನ್ನುವಂತೆ ಫಳಾರನೆ ಅಬ್ಬರಿಸಿತು. ಬೆಚ್ಚಿಬಿದ್ದ ರುಕ್ಕಿಣಿಯು 'ಅಮ್ಮಾ'- ಎಂದ ಚೀರಿ. ಈಗ ತೀರ ಸನಿಹದಲ್ಲಿದ್ದ ಲಕ್ಕನನ್ನು ಅಪ್ಪಿಬಿಟ್ಟಳು!. ಅವಳ ಅಪ್ಪುಗೆಯಿಂದ ಭಯಭ್ರಾಂತನಾದ ಲಕ್ಕ. “ಅಯ್ಯೋ, ನನ್ಯಾಕೆ ತಬ್ಬಿಕಂಡ್ತಿ- ಬುಡಿ... ಮಳೆಬಂದಾಗ ಸಿಡ್ಡು ವೊಡುದ್ರೆ, ಇಂಗೂ ಬೆಟ್ಟೋರ?- ಬುಡಿ, ಬುಡಿ” ಎಂದು ಬಿಡಿಸಿಕೊಳ್ಳಲೆತ್ನಸಿದ. ಆದರೆ ರುಕ್ಕಿಣಿಯ ಹಿಡಿತ ಬಲವಾಗಿತ್ತು... ಅವಳು ತನ್ನ ಮುಖವನ್ನು ಅವನ ಕುತ್ತಿಗೆಯ ಹಿಂಭಾಗಕ್ಕೆ ತಂದಾಗ, ಅವಳ ಉಸಿರಿನ ಬಿಸಿ ಬೆಂಕಿಯ ಬೆರಳುಗಳಿಂದ ಆ ಭಾಗವನ್ನು ನೇವರಿಸಿತ್ತು... ಲಕ್ಕ ಮತ್ತೂ ತಳಮಳಕ್ಕೆ ಈಡಾದ. ತನ್ನನ್ನು ತಕ್ಕೆಯಲ್ಲಿ ಬಂಧಿಸಿದ ಅವಳ ತೋಳುಗಳಿಂದ ಬಿಡಿಸಿಕೊಳ್ಳುವುದು ಅವನಿಗೆ ಅಂಥ ಕಠಿಣವಾದುದೇನೂ ಆಗಿರಲಿಲ್ಲ. ಆದರೆ ತೀರ ಜುಲುಮೆ ಮಾಡಿ ಕೀಳಲು ಹೋದರೆ, ತನಗೆ ಮಾತೃಸ್ಥಾನದಲ್ಲಿರುವ ಅವಳ ಕೋಮಲ ಬಾಹುಗಳಿಗೆ ಎಲ್ಲಿ ನೋವಾದೀತೊ ಎಂದು ಆತಂಕಗೊಂಡ... ಮುಂದೆ ಅವನು ಬೇರೆ ಯಾವ ಯೋಚನೆ ಮಾಡಲೂ ಅವಕಾಶ ಕೊಡದೆ, ರುಕ್ಕಿಣಿ ಆವೇಶ ಬಂದವಳಂತೆ ಎರಗಿ, ಅವನ್ನು ಕೆಳಗೆ ಮಲಗಿಸಿ ತಾನು ಮಲಗಿ ಆಕ್ರಮಣ ಮಾಡಿದಳು!... ಈಗಲೂ ಅವಳಿಗೆ ಎಲ್ಲಿ ನೋವಾಗುವುದೊ ಎಂದು ಕಂಪಿಸುತ್ತಲೆ ಅವಳ ಬಲಾತ್ಕಾರಕ್ಕೆ ಸೋತು ತನ್ನನ್ನು ಒಪಸಿಕೊಂಡಿದ್ದ ಆದರೂ ಅವನ ಬಾಯಿಯಿಂದ ಯಾಂತ್ರಿಕವಾಗಿ “ಬ್ಯಾಡಿ ಅಮ್ಮಾರೆ, ಬ್ಯಾಡಿ ಅಯ್ಯಾರೆ...” ಎಂದು ದುರ್ಬಲ ಉದ್ದಾರ ಹೊರಡುತ್ತಲೇ ಇತ್ತು. ಲಕ್ಕನಿಗೆ ಹೇಗೆ ಹೇಗೋ ಆಗಿತ್ತು. ರುಕ್ಕಿಣಿಯ ಆಕ್ರಮಣದಿಂದ ಅವನ