ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೮ ವೈಶಾಖ ೨೬ ಕಪನಯ್ಯನವರ ತಿಥಿ ಇತ್ಯಾದಿ ಕರ್ಮಗಳು ಮುಗಿದಿದ್ದವು. ನಂಜೇಗೌಡರ ಮನೆಯ ಸೂತಕವೂ ಕಳೆದಿತ್ತು. ಈಗ ದರುಮನಳ್ಳಿಯ ಯಜಮಾನರು ಲಕ್ಕನ ನ್ಯಾಯವನ್ನು ಕೈಗೆತ್ತಿಕೊಳ್ಳಬಹುದಿತ್ತು. ಆದರೆ ಊರಿನ ಪ್ರಮುಖ ಹಬ್ಬಗಳಲ್ಲೊಂದಾದ “ಸಿಡಿ” ಹಬ್ಬವು ಆ ನ್ಯಾಯಕ್ಕೆ ಅಡ್ಡ ಬಂದಿತು. ಮೂರು ವರ್ಷಗಳಿಂದ ಕ್ಷುಲ್ಲಕ ಕಾರಣಗಳಿಗಾಗಿ ನಿಂತಿದ್ದ “ಸಿಡಿ” ಹಬ್ಬವನ್ನು ಈ ಸಾಲಿನಲ್ಲಿ ನಡೆಸಬೇಕೆಂದು ಯಜಮಾನರು ಯೋಚಿಸುತ್ತಿದ್ದಾಗ, ತನ್ನ ಬಲಭುಜದಿಂದ ಹೂವಿನ ಪ್ರಸಾದ ಕೆಡವಿ ಸಿಡಿಯಮ್ಮ ಹಬ್ಬ ನಡೆಸಲು ಪೂಜಾರಿಗೆ ಅನುಮತಿ ನೀಡಿದ್ದಳು. 'ಸಿಡಿ' ಹಬ್ಬದ ತಯಾರಿಕೆಯಲ್ಲಿ ಊರಿಗೆ ಊರೇ ನಿರತವಾಯಿತು. ಈ ಹಬ್ಬದ ಸಡಗರದಲ್ಲಿ ಲಕ್ರನ ನ್ಯಾಯ ಗೌಣವಾಯಿತು. ಹಬ್ಬ ಮುಗಿದ ನಂತರ ಆ ನ್ಯಾಯ ಮಾಡುವುದೆಂದು ಯಜಮಾನರು ತೀರ್ಮಾನಿಸಬೇಕಾಯಿತು. ಹುಣಸೂರಿನ ಶ್ರೀನಿವಾಸ ಶೆಟ್ಟರು ದೇವತೆಯ ಸೇವಾರ್ಥ ಉಚಿತವಾಗಿ ಕೊಟ್ಟ ಸುಮಾರು ಮೂರೂವರೆ ಅಡಿ ಸುತ್ತಳತೆಯ, ಹದಿನೈದು ಹದಿನಾರು ಅಡಿ ಎತ್ತರದ, ಹೊನ್ನೆಮರದ ಕಂಬವನ್ನು ಸಿಡಿಯಮ್ಮನ ಗುಡಿಯ ಮುಂಭಾಗದ ದೊಡ್ಡ ಬಯಲಿಗೆ ತಂದುದಾಯಿತು. 'ಸಿಡಿ'ಯ ದಿನ ಹೊಲೆಯರು ತಮ್ಮ ಕೇರಿಯಿಂದ "ವೊಡೆ' ಆರತಿ ತಂದು ಪೂಜೆ ಮಾಡಿಸಿದ್ದೂ ಆಯಿತು. ಕೊಂಡ ನಿರ್ಮಿಸಿಹರಸಿಕೊಂಡ ಮಂದಿ ಕೊಂಡ ಹಾಯ್ದದ್ದೂ ಆಯಿತು. ತರುವಾಯ ಶ್ಯಾನುಭೋಗರ ತೋಟದಿಂದ ಪೂಜೆ ಸಲ್ಲಿಸಿ, ನೆಲಕ್ಕೆ ತಾಗದಂತೆ ಕೆಡವಿ, ಊರಿನ ಸುಮಾರು ಐವತ್ತು ಮಂದಿ ತರುಣರು ಒಂದು ಅಡಿಕೆ ಮರವನ್ನು ಹೊತ್ತು, ಪದ್ಧತಿಯಂತೆ ಓಡುತ್ತ ತಂದರು. ಊರಿನ ಬಡಗಿಗಳಾದ ನಂಡುಂಡಾಚಾರಿ, ಪುಟ್ಟಸ್ವಾಮಾಚಾರಿ, ಚೆನ್ನಾಚಾರಿ, ಇವರುಗಳು ಹಗಲೂ ಇರುಳೂ ಕಾರ್ಯನಿರತರಾಗಿ ನಾಲ್ಕು ವರ್ಷಗಳ ಹಿಂದೆಯೇ ಮಾಡಿಸಿದ್ದ ಭರ್ಜರಿ ದೂರಿಯ ಮಧ್ಯ ಭಾಗಕ್ಕೆ ಹೊನ್ನೆ ಮರದ ಕಂಬವನ್ನು ಕೂಡಿಸಿದರು. ಹಾಗೆಯೆ ಹಿಂದಿನಿಂದಲೂ ಇದ್ದ ಮರದ ಗಾಲಿಗಳನ್ನು ದೂರಿಯ ಎರಡು ಪಕ್ಕಕ್ಕೂ ಜೋಡಿಸಿದರು. ಅನಂತರ ಹೊನ್ನೆ ಮರದ ಕಂಬಕ್ಕೆ ಅಡ್ಡಲಾಗಿ ಚಚೌಕದ ಸುಮಾರು ಎರಡು ಅಡಿ ಮರದ ತಿರುಗಣಿಯನ್ನು ಅಳವಡಿಸಿದರು. ಇದರ ಮೇಲುಗಡೆ ಸುಮಾರು ನಲವತ್ತು ನಲವತ್ತೈದು ಅಡಿ ಉದ್ದದ ಅಡಿಕೆಯ “ಸಿಡಿಮರವನ್ನು ತಿರುಪು ಬೆಣೆಗಳಿಂದ ಅಡ್ಡಡ್ಡಲಾಗಿ ನಿಲ್ಲಿಸಿದರು. ಅಡಿಕೆ ಮರವು