ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೭೧ ಎಂದು ಖೇದದಿಂದ ಛೇಡಿಸಿದಳು. ಆದರೆ ಆ ದೊಂಬಿಯಲ್ಲಿ ಆ ಮುದುಕಿಯ ಮಾತಿಗೆ ಸೊಪ್ಪು ಹಾಕುವವರು ಯಾರು? ನೂಕಾಟ, ಪರಸ್ಪರ ಬೈದಾಟಗಳು ನಡದೇ ಇದ್ದವು... ಅತ್ಯ, ಎತ್ತರದಲ್ಲಿ ಸಿಡಿಮರ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಮೂರು ಮೂರು ಸುತ್ತು ಗಿರಗಟ್ಟಲೆಯಾಗಿ ಸುತ್ತಿತ್ತು, ಕೊಂಬು ಕಹಳೆ ತಮ್ಮಟೆಗಳ ಅಬ್ಬರದ ಜೊತೆಗೂಡಿ ಜನಸ್ತೋಮದ ಕೂಗು, ಕೇಕೆಗಳು ಮೇರೆಮೀರಿದವು. ಸಿಡಿ ತೇರಿಗೆ ಹಣವಣಿಸಿದ್ದ ಹಗ್ಗಗಳನ್ನು ಹಿಡಿದು ಮೊದಲು ಊರಿನ ಯಜಮಾನರು ಅನಂತರ ಇತರೇ ಜನ, ಹೀಗೆ ತೇರನ್ನು ಎಳೆದರು. ತೇರಿನ ಎರಡೂ ಪಕ್ಕದಲ್ಲಿ ವಿರಾಜಮಾನವಾಗಿದ್ದ ಪಂಜುಗಳ ಬೆಳಕಿನಲ್ಲಿ ಸಿಡಿತೇರು ಮುಂಬರಿಯಿತು. ಅದು ಮುಂದುವರಿದಂತೆ ಮತಾಪು, ಗರ್ನಾಲುಗಳನ್ನು ತೇರಿನ ಎದುರು ಹೊತ್ತಿಸಿದಾಗ ಇಡೀ ವಾತಾವರಣ ಪುಳಕಗೊಂಡಿತು. ಇದನ್ನು ದೂರದಿಂದಲೆ, ಸಪ್ಪೆಮೋರೆ ಹೊತ್ತು ನೋಡುತ್ತ, ಲಕ್ಕನೊಬ್ಬನೇ ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿದ್ದ. ಕೇಶವಯ್ಯನು ಶ್ಯಾನುಭೋಗರಿಗೆ ಅವನನ್ನು ತೋರುತ್ತ, “ನೀವು ಏನೇ ಹೇಳಿ, ಶ್ಯಾನುಭೋಗರೆ, ಆ ರಂಡೆಗಂಡ ಲಕ್ಕ ಸಿಡಿ ಆಡಿದ ಹಾಗೆ, ಬೇರೆ ಯಾರೂ ಆಡಿದನ್ನ ಈ ತಹಲ್‌ವರೆಗೆ ನಾನಂತೂ ನೋಡಿದ್ದಿಲ್ಲ. ಮೂರು ಸಾಲಿನ ಹಿಂದೆ ಎರಡು ಕೈಗಳಲ್ಲೂ ಪಂಜು ಹಿಡಿದು ಆತ ಈಜುವ ಹಾಗೆ ಕೈಕಾಲು ಆಡಿಸುತ್ತ, ತೇಲಿ ತೇಲಿ ಸಿಡಿಮರದ ಜೊತೆಗೆ ಬಂದೊಂದು ಸುತ್ತ ಬರುವಾಗಲೂ ಒಮ್ಮೆ ನೆರೆದ ಜನಕ್ಕೆ ನಮಸ್ಕಾರ ಮಾಡುತ್ತಿದ್ದ ರೀತಿ ಈಗಲೂ ಸಹ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ... ಏನೋ ಹಾಳಾದವನು ಇದೊಂದು ಎಡವಟ್ಟು ಮಾಡಿಕೊಂಡು ಬಿಟ್ಟ, ಇಲ್ಲದಿದ್ದರೆ ಅವನಂಥ ಯೋಗ್ಯ ಕುಳ ನಮ್ಮ ಉತ್ತಮರಲ್ಲಿ ಹುಡುಕಿದ್ರೂ ಸಿಗೋದು ಅಪರೂಪ... ಏನಂತೀರಿ?” ಎಂದಾಗ, ಶ್ಯಾನುಭೋಗರು “ಹೌದು ಕೇಶವ, ನಿನ್ನ ಮಾತನ ನಾನು ಒಪ್ಪುತ್ತೀನಿ. ನಾನು ಮೊಳಕೆಯಿಂದಲೂ ಅವನನ್ನು ನೋಡುತ್ತಲೇ ಬಂದಿದ್ದೀನಿ. ಅವನ ಗಾಂಭೀರ್ಯ, ಮಾತಿನ ತೂಕ, ವಿನಯ- ಈ ಗುಣಗಳನ್ನು ನಾನೂ ಮೆಚ್ಚಗೊಂಡಿದೀನಿ. ಆದರೆ ಈಗ ಬ್ರಾಹ್ಮಣಕುಲಕ್ಕೇ ಅಪಮಾನ ಮಾಡಿದ್ದಾನಲ್ಲಯ್ಯ?... ಅದೂ ಸಹ ಎಂಥ ಅಪರಾದ?- ಈ ಮಾರಿ ಸಿಡಿ ಒಂದು ಅಡ್ಡ ಬರದಿದ್ದರೆ, ಇಷ್ಟು ವೇಳೆಗೆ ನ್ಯಾಯಕ್ಕೆ ಸೇರಿದ್ದರೆ, ನಾನೇ ಮುಂದಾಗಿ ವಾದ ಮಾಡಿ, ಆ ತಾಯಗ್ಗಂಡನ್ನ